Advertisement
ಟೆಂಡರ್ ಆಗಿತ್ತು 2009ರಲ್ಲಿ ಸರಕಾರ ಕೆರೆ ಅಭಿವೃದ್ಧಿಗೆ ಮುಂದಾಗಿತ್ತು. 30 ಲ.ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿ ಟೆಂಡರ್ ಕೂಡ ಆಗಿತ್ತು. ಆದರೆ ಕಾಮಗಾರಿ ನಡೆದಿಲ್ಲ. 30ಲ.ರೂ. ಅನುದಾನದಲ್ಲಿ ಕೆರೆಯ ಸುತ್ತ ತಂತಿ ಬೇಲಿ, ತಡೆಗೋಡೆ, ಕೆರೆ ಸುತ್ತ ಗಿಡ ನೆಡುವ ಕಾರ್ಯ, ಹೂಳೆತ್ತುವ ಕಾರ್ಯ ನಡೆಯಬೇಕಿತ್ತು. ಆದರೆ ಇದು ನಡೆದಿಲ್ಲ. 2011ರಲ್ಲಿ ಹೂಳೆತ್ತುವ ಕಾರ್ಯ ನಡೆಯಿತು. ಉಳಿದ ಕಾಮಗಾರಿ ನಡೆದಿಲ್ಲ.
ಪ್ರಶಾಂತವಾದ ವಾತಾವರಣದಲ್ಲಿರುವ ಈ ಕರೆ ಪರಿಸರವನ್ನು ಒಂದು ಉತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕೂಡ ಸಾಧ್ಯವಿದೆ. ಪಕ್ಷಿಗಳ ಚಿಲಿಪಿಲಿ ಇಲ್ಲಿರುತ್ತದೆ. ಮೀನು ಸಾಕಣಿಕೆಯಿಂದ ಗ್ರಾ.ಪಂ. ಆದಾಯ ಗಳಿಸಬಹುದು, ಬೋಟಿಂಗ್ ವ್ಯವಸ್ಥೆ ಮಾಡಿ ಜನರನ್ನು ಆಕರ್ಷಿಸಬಹುದಾಗಿದೆ. ಮನವಿ ನೀಡಲಾಗಿದೆ
ಕೆರೆಯ ಅಭಿವೃದ್ಧಿಗಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ಥಳೀಯರು ಮನವಿ ನೀಡಿದ್ದಾರೆ. ಈ ಕೆರೆ ಕಂದಾಯ ಇಲಾಖೆಗೆ ಒಳಪಟ್ಟಿದೆ. ಅಭಿವೃದ್ಧಿಗೆ ಪಂಚಾಯತ್ ಅನುದಾನ ಸಾಕಾಗುವುದಿಲ್ಲ . ಕೆರೆ ಅಭಿವೃದ್ಧಿಯಾದರೆ ಈ ಭಾಗದ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಬಗೆಹರಿಸಬಹುದು.
– ನಾಗೇಶ್ ಎಂ., ಮಡಂತ್ಯಾರು
ಗ್ರಾಮ ಪಂ. ಅಭಿವೃದ್ಧಿ ಅಧಿಕಾರಿ
Related Articles
Advertisement