Advertisement

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

11:29 PM Nov 22, 2024 | Team Udayavani |

ಬೆಂಗಳೂರು: ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 40-50 ಟೂತ್‌ ಬ್ರಷ್‌ಗಳನ್ನು ಹೊರ ತೆಗೆದ ವೈದ್ಯರೇ ಅರೆ ಕ್ಷಣ ದಂಗಾಗಿದ್ದಾರೆ!. ಹೌದು, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಅಧೀನ ಆಸ್ಪತ್ರೆಯಾದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಜೀವದಾನ ನೀಡಿದ್ದಾರೆ.

Advertisement

ಹೊಟ್ಟೆ ನೋವೆಂದು ಸುಮಾರು 4 ದಿನಗಳ ಹಿಂದೆ 26 ವರ್ಷದ ಯುವಕ ಮಣಿಕಂಠ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ತಪಾಸಣೆ ನಡೆಸಿದ ವೈದ್ಯರು, ಹೊಟ್ಟೆಯ ಭಾಗವನ್ನು ಎಂಆರ್‌ಐ ಸ್ಕ್ಯಾನಿಂಗ್‌ಗೆ ಬರೆದುಕೊಟ್ಟಿದ್ದರು. ಬಳಿಕ, ಎಂಆರ್‌ಐ ವರದಿ ನೋಡಿದ ವೈದ್ಯರು ಹೊಟ್ಟೆಯಲ್ಲಿ ಬ್ರೆಷ್‌ಗಳು ಇರುವುದನ್ನು ಗಮನಿಸಿದರು. ಈ ವೇಳೆ, ಕೂಡಲೇ ದಿನಾಂಕವನ್ನು ನಿಗದಿ ಮಾಡಿಕೊಂಡ ವೈದ್ಯರು, ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಿದ್ದರು.

ಸುಮಾರು ವರ್ಷಗಳಿಂದ ಮದ್ಯ ವ್ಯಸನಿ ಆಗಿದ್ದ ರೋಗಿ ಮಣಿಕಂಠ ಸ್ಥಿತಿಯನ್ನು ಗಮನಿಸಿದ ಕುಟುಂಬಸ್ಥರು, ಕುಡಿತ ಬಿಡಿಸಲು ಕಳೆದ ಒಂದು ತಿಂಗಳ ಹಿಂದೆ ಮದ್ಯ ವ್ಯರ್ಜನ ಕೇಂದ್ರಕ್ಕೆ ದಾಖಲಿಸಿದ್ದರು. ಅನಂತರ ಪದೇ ಪದೆ ತೀವ್ರ ಹೊಟ್ಟೆ ನೋವೆಂದು ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಸಿಬಂದಿ ಕುಟುಂಬಸ್ಥರಿಗೆ ಮಾಹಿತಿ ನೀಡಿದರು. ಬಳಿಕ, ಕುಟುಂಬಸ್ಥರು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು.

ಟೂತ್‌ ಬ್ರೆಷ್‌ಗಳನ್ನು ನುಂಗಿದ್ದು ಹೇಗೆ?
ಮದ್ಯ ವ್ಯರ್ಜನ ಕೇಂದ್ರಕ್ಕೆ ದಾಖಲಾಗಿದ್ದ ಮಣಿಕಂಠ, ಬಾತ್‌ರೂಮ್‌ಗೆ ಹೋಗಿ ಸಹಚರರ ಟೂತ್‌ ಬ್ರೆಷ್‌ಗಳನ್ನು ಕದಿಯುತ್ತಿದ್ದ. ಅಲ್ಲದೆ, ಅವುಗಳನ್ನು ನುಂಗಲು ಆಗದೇ ಎರಡು ಭಾಗಗಳನ್ನಾಗಿ ತುಂಡರಿಸಿ ಒಂದೊಂದಾಗೇ ನುಂಗುತ್ತಿದ್ದ. ಅಷ್ಟು ಬ್ರೆಷ್‌ಗಳನ್ನು ನುಂಗಿದ್ದರೂ ಗಂಟಲು ನೋವು ಸೇರಿದಂತೆ ಇತರೆ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ಕಳೆದ 3-4 ದಿನದಿಂದ ತೀವ್ರ ಹೊಟ್ಟೆ ನೋವು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಶಸ್ತ್ರ ಚಿಕಿತ್ಸೆ ವೇಳೆ ಅಚ್ಚರಿ!
ಮೊದಲೇ ದಿನಾಂಕ ನಿಗದಿ ಮಾಡಿಕೊಂಡಂತೆ ವೈದ್ಯರು ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದರು. ಈ ವೇಳೆ, ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬ್ರೆಷ್‌ಗಳನ್ನು ಹೊರ ತೆಗೆಯುತ್ತಿದ್ದಂತೆ, 3-4 ಚಾಕಲೆಟ್‌ ಪೇಪರ್‌ಗಳೂ ಪತ್ತೆಯಾಗಿವೆ. ಅಲ್ಲದೆ, ಕೆಲವೊಂದು ಬ್ರೆಷ್‌ಗಳು ಹಳೆಯದಾಗಿದ್ದರೆ, ಮತ್ತೆ ಕೆಲವು ಹೊಸ ಬ್ರೆಷ್‌ಗಳೂ ಇದ್ದವು. ಇವೆಲ್ಲಾ ಕುಡಿತ ಬಿಡಿಸುವ ಪುನರ್ವಸತಿ ಕೇಂದ್ರದ ಸಿಬಂದಿಯವು ಎನ್ನಲಾಗಿದ್ದು ತಿಂಗಳಲ್ಲಿ 50ಕ್ಕೂ ಹೆಚ್ಚು ಬ್ರೆಷ್‌ಗಳನ್ನು ನುಂಗಿದ್ದಾನೆ. ಜೊತೆಗೆ ಕುಡಿತ ಹಾಗೂ ಡಿಪ್ರಷನ್‌ನಿಂದಾಗಿ ಟೂತ್‌ ಬ್ರೆಷ್‌ ಹಾಗೂ ಚಾಕೋಲೆಟ್‌ ಪೇಪರ್‌ಗಳನ್ನು ನುಂಗಿದ್ದಾನೆಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಹರೀಶ್‌ ಹಾಡೋನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next