Advertisement

ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಶಾಲೆ, ಕಾಲೇಜುಗಳಿಗೆ ರಜೆ: ಪರೀಕ್ಷೆ ಮುಂದೂಡಿಕೆ

08:23 AM Jun 20, 2022 | Team Udayavani |

ಬೆಂಗಳೂರು: ಪ್ರಧಾನಿ ಸಂಚರಿಸುವ ಮಾರ್ಗ, ಭಾಗವಹಿಸುವ ಕಾರ್ಯಕ್ರಮಗಳ ಸ್ಥಳ ಹಾಗೂ ಸುತ್ತಮುತ್ತಲಿನ ಕಾಲೇಜು, ವಿಶ್ವವಿದ್ಯಾನಿಲಯಗಳಿಗೆ ಸರಕಾರ ರಜೆ ಘೋಷಿಸಿದೆ.

Advertisement

ಪ್ರಧಾನಿ ಪ್ರಯಾಣಿಸುವ ಮಾರ್ಗದಲ್ಲಿ ಸಂಚಾರ ದಟ್ಟಣೆಯಾಗುವುದನ್ನು ತಡೆಯಲು ಹಾಗೂ ಸುರಕ್ಷಾ ಕ್ರಮಗಳನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಶಿಕ್ಷಣ ಇಲಾಖೆಯು ಪೊಲೀಸ್‌ ಇಲಾಖೆ ಸೂಚನೆಯಂತೆ ಪ್ರಧಾನಿ ಸಂಚರಿಸುವ ಐಐಎಸ್‌ಸಿ, ಗೊರಗುಂಟೆ ಪಾಳ್ಯ, ಸಿಎಂಟಿಐ, ಹೊರ ವರ್ತುಲ ರಸ್ತೆ, ಡಾ ರಾಜ್‌ಕುಮಾರ್‌ ಸ್ಟುಡಿಯೋ, ಲಗ್ಗೆರೆ, ನಾಯಂಡಹಳ್ಳಿ, ಮೈಸೂರು ರಸ್ತೆ, ಆರ್‌ವಿ ಕಾಲೇಜು, ನಾಗರಭಾವಿ, ಸುಮನಹಳ್ಳಿ ಸೇತುವೆ, ಎಂಸಿಐ ಜಂಕ್ಷನ್‌, ಗೋವರ್ಧನ್‌ ಥಿಯೇಟರ್‌, ಯಶವಂತಪುರ ಮತ್ತು ಜಕ್ಕೂರು ಏರೋಡ್ರಮ್‌ ಸುತ್ತಮುತ್ತಲಿನಲ್ಲಿ ರಜೆ ನೀಡಿದೆ.

ಪರೀಕ್ಷೆ ಮುಂದೂಡಿಕೆ
ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು, ಪ್ರಧಾನಿ ಸಂಚರಿಸುವ ಮಾರ್ಗಗಳು ಮಾತ್ರವಲ್ಲದೆ ಬೆಂಗಳೂರಿನ ತನ್ನ ವ್ಯಾಪ್ತಿಯ ಎಲ್ಲ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ನರ್ಸಿಂಗ್‌ ಕಾಲೇಜುಗಳಿಗೆ ರಜೆ ನೀಡಿದೆ.

ಸೋಮವಾರ ನಿಗದಿಯಾಗಿದ್ದ ವಿವಿಧ ಪರೀಕ್ಷೆಗಳನ್ನು ಮುಂದೂಡಿದ್ದು, ಶೀಘ್ರ ಪರಿಷ್ಕೃತ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.

ಬೆಂಗಳೂರು ವಿಶ್ವವಿದ್ಯಾನಿಲಯ ಕೂಡ ತನ್ನ ಕ್ಯಾಂಪಸ್‌ನಲ್ಲಿ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ವಿವಿಯ ಎಲ್ಲ ಬೋಧಕ, ಬೋಧಕೇತರ ಸಿಬಂದಿಗೂ ರಜೆ ಘೋಷಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next