ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ರಾಜ್ಯ ಡಾ.ಗಂಗೂವಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲ ಯದ ಕಿರಿಯ ಸಂಗೀತ ಪರೀಕ್ಷೆಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಪರೀಕ್ಷಾರ್ಥಿ ಗಳು ಹಾಗೂ ಪೋಷಕರು ಪರೀಕ್ಷಾ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವಿವಿ ಕೇಂದ್ರದಲ್ಲಿ 6,221 ಅಭ್ಯರ್ಥಿಗಳಿಗೆ ಪರೀಕ್ಷೆ ಆಯೋಜಿಸಲಾ ಗಿತ್ತು. ಮಧ್ಯಾಹ್ನ 1 ಗಂಟೆಗೆ ತಲುಪಬೇ ಕಾಗಿದ್ದ ಪ್ರಶ್ನೆ ಪತ್ರಿಕೆ ಈ ಬಾರಿ ಮಧ್ಯಾಹ್ನ 3 ಗಂಟೆಗೆ ತಲುಪಿತ್ತು. ಗಂಟೆಗಟ್ಟಲೇ ಪ್ರಶ್ನೆ ಪತ್ರಿಕೆಗಾಗಿ ಕಾಯ್ದು ಕುಳಿತ ಅಭ್ಯರ್ಥಿಗಳು ಪರೀಕ್ಷೆ ಅವ್ಯವಸ್ಥೆ ಬಗ್ಗೆ ಬೇಸತ್ತರು. ಪೋಷಕರು ಕೂಡ ಪರೀಕ್ಷಾ ಆಯೋಜಕರ ವಿರುದ್ಧ ಅಸಮಾಧಾನ ಹೊರಹಾಕಿದರು. 10 ವರ್ಷದ ಬಾಲಯೊಬ್ಬಳಿಗೆ ಪ್ರಶ್ನೆ ಪತ್ರಿಕೆಯೇ ಬಾರದೇ ಇದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗದೇ ಆಕೆ ಕಣ್ಣೀರು ಹಾಕಿಕೊಂಡು ಪಾಲಕರೊಂದಿಗೆ ಹೊರ ನಡೆದ ಘಟನೆ ಸಹ ನಡೆದಿದೆ.
ಅಲ್ಲದೆ, ಸಾವಿರಾರರು ವಿದ್ಯಾರ್ಥಿಗಳು ಗಂಟೆಗಟ್ಟಲೇ ಕಾಯ್ದರೂ ಪ್ರಶ್ನೆ ಪತ್ರಿಕೆಯೇ ಸಿಗದ ಕಾರಣ ಪರೀಕ್ಷೆಯಿಂದ ವಂಚಿತರಾಗಿದ್ದರೆ. ಇನ್ನೂ ಕೆಲವರು ಎರಡು-ಮೂರುಗಂಟೆ ಕಾಯ್ದು ಆನಂತರ ಪರೀಕ್ಷೆ ಬರೆದಿದ್ದಾರೆ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕ ಸಹ ಇಲ್ಲದೇ ಕತ್ತಲೆಯಲ್ಲಿ, ಸೊಳ್ಳೆ ಕಾಟದ ಮಧ್ಯೆ ಪರೀಕ್ಷೆ ಬರೆದಿದ್ದಾರೆ. ಈ ಎಲ್ಲ ಅದ್ವಾನದಿಂದ ಪಾಲಕರು ಮತ್ತು ವಿದ್ಯಾರ್ಥಿಗಳು ಪರೀಕ್ಷೆ ಆಯೋಜನೆ ಮಾಡಿದ್ದ ಸಂಗೀತ ವಿಶ್ವವಿದ್ಯಾಲಯದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಟ್ರಾಫಿಕ್‌ನಿಂದ ವಿಳಂಬ: ಕುಲಪತಿ:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರೀಕ್ಷೆ ನಡೆದಿದ್ದು, ಸುಗಮವಾಗಿ ಮುಕ್ತಾ ಯವಾಗಿದೆ. ಆದರೆ, ಬೆಂಗಳೂರಿ ನಲ್ಲಿ ಟ್ರಾಫಿಕ್ ಜಾಮ್ ಇದ್ದರಿಂದ ಪ್ರಶ್ನೆ ಪತ್ರಿಕೆ ಸೂಕ್ತ ಸಮಯಕ್ಕೆ ತಲು ಪಿಲ್ಲ. ಎಲ್ಲದ್ದಕ್ಕೂ ಕುಲಪತಿಗಳನ್ನೇ ಹೊಣೆ ಮಾಡುವುದು ತಪ್ಪು ಎಂದು ರಾಜ್ಯ ಡಾ.ಗಂಗೂವಾಯಿ ಹಾನಗಲ್ ಸಂಗೀತ ಮತ್ತು ಪ್ರದ ರ್ಶನ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಡಾ.ನಾಗೇಶ್ ಬೆಟ್ಟ ಕೋಟೆ ತಿಳಿಸಿದ್ದಾರೆ. ಬೆಂಗಳೂರು ಟ್ರಾಫಿಕ್ ಹೆಚ್ಚಾಗಿದ್ದರಿಂದ ಪ್ರಶ್ನೆ ಪತ್ರಿಕೆ ಸರಬರಾಜು ಕಷ್ಟವಾಗಿದೆ. 6 ಸಾವಿರ ಅಭ್ಯರ್ಥಿಗಳಿಗೆ ಒಂದೇ ಕಡೆ ಪರೀಕ್ಷೆ ಆಯೋಜಿಸುವುದು ಕೂಡ ಕಷ್ಟದ ಕೆಲಸ. ಪರೀಕ್ಷಾ ಮುಖ್ಯಸ್ಥರನ್ನು ನೇಮಿಸಿದ್ದು, ಅವರು ಪರೀಕ್ಷೆಯನ್ನು ಸುಸೂತ್ರ ವಾಗಿ ನಡೆಸಬೇಕು. ಎಲ್ಲದಕ್ಕೂ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಿದರೆ ಕಷ್ಟವೆಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.