Advertisement

Bangalore Rural: ಜಿಲ್ಲೆಯಲ್ಲಿ 84 ಶಿಶುಪಾಲನಾ ಕೇಂದ್ರ ತೆರೆಯಲು ಜಿಪಂ ಸಿದ್ಧತೆ

03:33 PM Oct 27, 2023 | Team Udayavani |

ದೇವನಹಳ್ಳಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯ ಕ್ರಿಯಾಶೀಲ ಉದ್ಯೋಗ ಚೀಟಿ ಹೊಂದಿರುವ ಕುಟುಂಬದ 6 ವರ್ಷದ ದೊಳಗಿನ ಮಕ್ಕಳಿಗೆ ಈ ಕೂಸಿನ ಮನೆ ಆಶ್ರಯ ನೀಡಲಿದೆ. ಬೆಂ. ಗ್ರಾಮಾಂತರ ಜಿಪಂ ಕೂಸಿನ ಮನೆ ಪ್ರಾರಂಭಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Advertisement

ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 101 ಗ್ರಾಪಂಗಳ ಪೈಕಿ 84 ಕೋಸಿನ ಮನೆ ತೆರೆಯಲು ಜಿಪಂ ಸಿದ್ಧತೆ ಕೈಗೊಂಡಿದೆ. ಜಿಲ್ಲೆಗೆ ರಾಜ್ಯ ಸರ್ಕಾರವು 79 ಕೂಸಿನ ಮನೆ ನಿರ್ಮಾಣ ಗುರಿ ನೀಡಿದ್ದು, ಅದರಲ್ಲಿ ಹೆಚ್ಚು ಸರಿಯಾಗಿ ಐದು ಕೂಸಿನ ಮನೆ ನಿರ್ಮಾಣಕ್ಕೆ ಜಿಪಂ ಮುಂದಾಗಿದೆ.

ಮಕ್ಕಳ ಸುರಕ್ಷತೆಯ ದೃಷ್ಟಿ ಯಿಂದ ನೆಲಮಹಡಿಯಲ್ಲಿ ಕೂಸಿನ ಮನೆಗೆ ಕಟ್ಟಡ ಸೌಲಭ್ಯವನ್ನು ಗ್ರಾಮ ಪಂಚಾಯಿತಿ ಒದಗಿಸ ಬೇಕು. ಉತ್ತಮ ಗಾಳಿ ಬೆಳಕು ಇರುವ ಕಟ್ಟಡ ಇರಬೇಕು. ಸುತ್ತಲೂ ಗುಂಡಿ ತೆರೆದ ಬಾವಿ ತೆರೆದ ಚರಂಡಿ ಇರಬಾರದು. ವಿಶೇಷವಾಗಿ ಕಟ್ಟಡ ಮಳೆ ಬಂದಾಗ ಸೋರಬಾರದು. ಮಕ್ಕಳ ಸ್ನೇಹಿ ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿರಬೇಕು. ಮಕ್ಕಳ ಆಟ ಕಲಿಕೆ ಹಾಗೂ ವಿಶ್ರಾಂತಿಗೆ ಪೂರಕವಾಗಿ ವಿಶಾಲವಾದ ಕಟ್ಟಡ ಒದಗಿಸಬೇಕು ಎಂದು ಸರ್ಕಾರ ಗ್ರಾಪಂಗಳಿಗೆ ಸೂಚಿಸಿದೆ.

ಕನಿಷ್ಠ 25 ಮಕ್ಕಳ ಆಯ್ಕೆ: ಪ್ರತಿ ಕೇಂದ್ರಕ್ಕೆ ಕನಿಷ್ಠ 25ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೂಸಿನ ಮನೆ ಪ್ರತಿ ದಿನ ಕನಿಷ್ಠ ಆರು ಗಂಟೆ 30 ನಿಮಿಷ ಕಾರ್ಯ ನಿರ್ವಹಿಸಬೇಕು. ಮಕ್ಕಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಬಿಸಿಊಟ, ಸಂಜೆ ಲಘ ಉಪಾಹಾರ ನೀಡಬೇಕು. ಮಕ್ಕಳ ಹಾಜರಾತಿ ನಿರ್ವಹಿಸಬೇಕು.

ವೈದ್ಯಾಧಿಕಾರಿಗಳ ತಪಾಸಣೆ ಕಡ್ಡಾಯವಾಗಿ ತಪಾಸಣಿ ಮಾಡಿಸಬೇಕು. ಈಗಾಗಲೇ ಜಿ‌ಲ್ಲೆ ಯಲ್ಲಿ 4 ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಇದ್ದು, ಹೊಸದಾಗಿ 84 ಕೂಸಿನ ಮನೆಗಳು ಸ್ಥಾಪನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸುತ್ತಿರುವ 4000 ಗ್ರಾಪಂಗಳಲ್ಲಿ ಅನುಷ್ಠಾನಕ್ಕೆ ತರುತ್ತಿರುವ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಜಿಲ್ಲೆಯಲ್ಲಿ 84 ಸ್ಥಳಗಳಲ್ಲಿ ತೆರೆಯಲು ಜಿಪಂ ಸಿದ್ಧತೆ ನಡೆಸಿದೆ.

Advertisement

ಕೂಸಿನ ಮನೆಗೆ ಹೇಗೆ ಕಾರ್ಯ ನಿರ್ವಹಿಸುತ್ತದೆ?: 
ಪ್ರತಿ ಕೇಂದ್ರಕ್ಕೆ ಕನಿಷ್ಠ 25 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕು, ಕೂಸಿನ ಮನೆ ಪ್ರತಿ ದಿನ ಕನಿಷ್ಠ 6 ಗಂಟೆ 30 ನಿಮಿಷ ಕಾರ್ಯನಿರ್ವಹಿಸಬೇಕು, ಮಕ್ಕಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಬಿಸಿಯೂಟ, ಸಂಜೆ ಲಘು ಉಪಾಹಾರ ನೀಡಬೇಕು. ಮಕ್ಕಳ ಹಾಜರಾತಿ ನಿರ್ವಹಿಸಬೇಕು, ವೈದ್ಯಾಧಿಕಾರಿಗಳ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು, ಪ್ರತಿ ಕೂಸಿನ ಮನೆಗೆ ಆಯಾ ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 11 ಮಂದಿ ಸದಸ್ಯರ ನಿರ್ವಹಣಾ ಸಮಿತಿ ರಚನೆ ಆಗಲಿದೆ.

ಕೂಸಿನ ಮನೆ ಸ್ಥಾಪನೆಗೆ ಒಮ್ಮೆ 35 ಸಾವಿರ ಹಾಗೂ ಮೂಲ ಸೌಕರ್ಯಕ್ಕೆ ಒಟ್ಟು 30 ಸಾವಿರ, ಮಕ್ಕಳ ಆಟಿಕೆ ಸಾಮಾನುಗಳ ಖರೀದಿಗೆ 5 ಸಾವಿರ ಅನುದಾನವನ್ನು ಗ್ರಾಪಂಗಳು ತಮ್ಮಲ್ಲಿನ ಅನಾವರ್ತಕ ಅನುದಾನದಲ್ಲಿ ಬಳಸಲು ಅವಕಾಶ ಕೊಟ್ಟಿದೆ. ಮಕ್ಕಳಿಗೆ ಪೌಷ್ಠಿಕ ಆಹಾರ, ಪ್ರಥಮ ಚಿಕಿತ್ಸೆ, ಸ್ವಚ್ಛತಾ ಸಾಮಗ್ರಿ, ಕಲಿಕಾ ಸಾಮಗ್ರಿಗಳು ಹಾಗೂ ಪೋಷಕರ ಸಭೆ, ಉಸ್ತುವಾರಿ ಹಾಗೂ ಮೇಲ್ವಿಚಾರಣೆಗಾಗಿ ವರ್ಷಕ್ಕೆ ಆರ್ವತಕ ವೆಚ್ಚ ಒಟ್ಟು 57,680 ಸಿಗಲಿದೆ. ಕೂಸಿನ ಮನೆಗಳನ್ನು ಶಿಶು ಅಭಿವೃದ್ಧಿ ಯೋಜನಾಧಿನಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಲಿದ್ದಾರೆ.ಮಕ್ಕಳಿಗೆ ಪಠ್ಯ ಪುಸ್ತಕ, ಮೇಲ್ವಿಚಾರಕರಿಗೆ ಮಾರ್ಗದರ್ಶಿ ಪುಸಕ್ತ ಸರ್ಕಾರ ದಿಂದ ವಿತರಣೆ ಆಗಲಿದೆ.

ಅ.2ರ ಗಾಂಧಿ ಜಯಂತಿಯೆಂದು ಕಾರ್ಯಾ ರಂಭ:
ನರೇಗಾ ಕ್ರಿಯಾಶೀಲ ಉದ್ಯೋಗ ಚೀಟಿ ಹೊಂದಿರುವ ಕುಟುಂಬದ 3 ವರ್ಷದೊಳಗಿನ ಮಕ್ಕಳಿಗೆ ಈ ಕೂಸಿನ ಮನೆ ಅಶ್ರಯ ನೀಡಲಿದ್ದು, ರಾಜ್ಯದ ಕೆಲವು ಭಾಗದಲ್ಲಿ ಅ.2ರ ಗಾಂಧಿ ಜಯಂತಿಯೆಂದು ಕಾರ್ಯಾರಂಭ ಮಾಡಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯೂ ಕೂಸಿನ ಮನೆ ಪ್ರಾರಂಭಿಸಲು ಸರ್ಕಾರದ ಸೂಚನೆಗಾಗಿ ಎದುರು ನೋಡುತ್ತಿದೆ.

ಗ್ರಾಮೀಣ ಭಾಗದಲ್ಲಿ ನರೇಗಾ ಕೂಲಿ ಕಾರ್ಮಿಕ ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚು ತೊಡಗಿಸಿಕೊಂಡಾಗ ತಮ್ಮ ಮಕ್ಕಳು ಪೋಷಣೆ, ಸುರಕ್ಷತೆ, ಪೂರಕ ಪೌಷ್ಠಿಕ ಆಹಾರದ ಅಲಭ್ಯತೆ ಹಿನ್ನೆಲೆ ಯಲ್ಲಿ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗದಿದ್ದನ್ನು ಪರಿಗಣಿಸಿ, ರಾಜ್ಯ ಸರ್ಕಾರ ಪ್ರತಿ ಗ್ರಾಪಂ ಕೇಂದ್ರದಲ್ಲಿ ಕೂಸಿನ ಮನೆ ತೆರೆದು 3 ವರ್ಷದೊಳಗಿನ ಮಕ್ಕಳಿಗೆ ಸುರಕ್ಷತೆ, ಪೂರಕ ಪೌಷ್ಠಿಕ ಆಹಾರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶಿಶು ಪಾಲನಾ ಕೇಂದ್ರ (ಕೂಸಿನ ಮನೆ) ಕಾರ್ಯಾರಂಭ ಮಾಡ ಲಿದ್ದು, ನೆಮ್ಮದಿಯಿಂದ ಕೂಲಿ ಕಾರ್ಮಿಕ ಮಹಿಳೆಯರು ಕೆಲಸ ಮಾಡಲಿದ್ದಾರೆಂಬುದು ಯೋಜನೆ ಉದ್ದೇಶವಾಗಿದೆ.

ವಿಶಾಲ ಕಟ್ಟಡ ಒದಗಿಸಿ: ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ನೆಲ ಮಹಡಿಯಲ್ಲಿ ಕೂಸಿನ ಮನೆಗೆ ಕಟ್ಟಡ ಸೌಲಭ್ಯವನ್ನು ಗ್ರಾಪಂ ಒದಗಿಸಬೇಕು. ಉತ್ತಮ ಗಾಳಿ, ಬೆಳಕು ಇರುವ ಕಟ್ಟಡ ಇರಬೇಕು, ಸುತ್ತಲೂ ಗುಂಡಿ, ತೆರೆದ ಬಾವಿ, ತೆರೆದ ಚರಂಡಿ ಇರಬಾರದು. ವಿಶೇಷವಾಗಿ ಕಟ್ಟಡ ಮಳೆ ಬಂದಾಗ ಸೋರಬಾರದು. ಮಕ್ಕಳ ಸ್ನೇಹಿ ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು, ಮಕ್ಕಳ ಆಟ, ಕಲಿಕೆ ಹಾಗೂ ವಿಶ್ರಾಂತಿಗೆ ಪೂರಕವಾಗಿ ವಿಶಾಲವಾದ ಕಟ್ಟಡ ಒದಗಿಸಬೇಕೆಂದು ಸರ್ಕಾರ ಗ್ರಾಪಂಗಳಿಗೆ ಸೂಚಿಸಿದೆ.

ಕೇರ್‌ ಟೇಕರ್ಸ್‌ ನೇಮಕ: ಗ್ರಾಪಂ ಕೇಂದ್ರಗಳಲ್ಲಿ ಆರಂಭಗೊಳ್ಳಲಿರುವ ಕೂಸಿನ ಮನೆಗೆ ದಾಖಲಾಗುವ ಮಕ್ಕಳ ಆರೈಕೆಗಾಗಿ ಕೇರ್‌ ಟೇಕರ್ಸ್‌ಗಳ ನೇಮಕ ಮಾಡಲಿದೆ. ನೇರೇಗಾ ಕ್ರಿಯಾಶೀಲ ಉದ್ಯೋಗ ಚೀಟಿ ಹೊಂದಿರುವ 10 ಮಹಿಳೆಯರನ್ನು ಗುರುತಿಸಿ ಅದರಲ್ಲಿ ಇಬ್ಬರನ್ನು ಕೇರ್‌ ಟೇಕರ್ಸ್‌ಗಳನ್ನು ರೋಟೇಷನ್‌ ಮೇಲೆ ಕೂಸಿನ ಮನೆಗೆ ಕೇಂದ್ರಕ್ಕೆ ಆಯ್ಕೆ ಮಾಡಬೇಕೆಂದು ಗ್ರಾಪಂಗಳಿಗೆ ಸೂಚಿಸಿರುವ ಸರ್ಕಾರ, ಅವರಿಗೆ ನರೇಗಾ ಯೋಜನೆಯಡಿ 100 ದಿನದ ಕೂಲಿ ಪಾವತಿ ಮಾಡುವಂತೆ ಸೂಚಿಸಿದೆ. ಕೇರ್‌ ಟೇಕರ್ಸ್‌ ನೇಮಕಾತಿಗೆ 10ನೇ ತರಗತಿ ಉತ್ತೀರ್ಣರಾಗಿರುವರನ್ನು ಪರಿಗಣಿಸಬೇಕು, ಅವರಿಗೆ ಸೂಕ್ತ ತರಬೇತಿ ಕೂಡ ಕಲ್ಪಿಸಬೇಕೆಂದು ಸೂಚಿಸಿರುವ ಸರ್ಕಾರ, ಶಿಶು ಮಕ್ಕಳ ಪೋಷಣೆ, ಆರೈಕೆ ಬಗ್ಗೆ ಅನುಭವ ಇರುವರನ್ನು ನೇಮಿಸಿಕೊಳ್ಳಬೇಕೆಂದು ಸೂಚಿಸಿದೆ. ತರಬೇತಿ ಬಳಿಕವೇ ಅವರನ್ನು ಕೂಸಿನ ಮನೆಗೆ ನೇಮಕ ಮಾಡಬೇಕಿದೆ.

ಕೂಸಿನ ಮನೆ ತೆರೆಯಲು ಈಗಾಗಲೇ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಅಗತ್ಯ ಮೂಲಸೌಕರ್ಯ ಹಾಗೂ ಕೂಸಿನ ಮನೆಗೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತರಬೇತಿ ನೀಡಬೇಕಿದ್ದು, ಆದಾದ ನಂತರ ಸರ್ಕಾರ ತಿಳಿಸುವ ದಿನದಂದು ಜಿಲ್ಲೆಯಲ್ಲಿ ಕೂಸಿನ ಮನೆ ಪ್ರಾರಂಭಿಸಲಾಗುವುದು.
● ಪಿ.ಕೆ.ರಮೇಶ್‌, ಉಪ
ಕಾರ್ಯದರ್ಶಿ, ಜಿಪಂ ಬೆಂ.ಗ್ರಾಮಾಂತರ.

●ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next