ದೇವನಹಳ್ಳಿ: ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ಬಗ್ಗೆ ಹೆಚ್ಚು ಅರಿವು ಮೂಡಿಸುವಕಾರ್ಯಕ್ರಮಗಳು ಹಾಗೂ ಲೈಂಗಿಕ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಾಗಿರುವ ಜಾಗೃತಿ ಪರಿಣಾಮ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.
ಎಚ್‌ಐವಿಯಿಂದ ರಕ್ಷಿಸಿಕೊಳ್ಳಲು ಏನು ಮಾಡ ಬೇಕು. ಅನೇಕರೊಂದಿಗೆ ಲೈಂಗಿಕ ಸಂಬಂಧ ಬೇಡ, ರಕ್ತ ಸಂಬಂಧ ಪಡೆಯುವಾಗ ಎಚ್‌ಐವಿ ಸೇರಿದಂತೆ ವಿವಿಧಸೋಂಕು ಇಲ್ಲವೆಂದು ಗುಣಪಡಿಸಿಕೊಂಡಿರುವುದನ್ನುಖಚಿತಪಡಿಸಿಕೊಳ್ಳಿ, ಸಿರೆಂಜು, ಬ್ಲೇಡ್‌ಗಳನ್ನುಬಳಸುವಾಗ ಕುದಿಯುವ ಬಿಸಿ ನೀರಿನಲ್ಲಿ ಹಾಕುವುದರ ಮೂಲಕ ಅದನ್ನು ಉಪಯೋಗಿಸಬೇಕು. ಇನ್ನು ಒಳಿ ತೆಂದರೆ, ಹೊಸದನ್ನೇ ಬಳಸಿ. ಎಚ್‌ಐವಿ ಸೋಂಕಿತರನ್ನುಮುಟ್ಟುವುದರಿಂದ ಜತೆಯಲ್ಲಿ ಕುಳಿತುಕೊಳ್ಳುವುದರಿಂದ, ಶೌಚಾಲಯ ಬಳಸುವುದರಿಂದ ಹರಡುವುದಿಲ್ಲ. ಸೋಂಕಿತರನ್ನು ಕೀಳಾಗಿ ಕಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
2007ರಿಂದ 20ರವರೆಗೆ 3628 ಮಂದಿಯಲ್ಲಿ ಎಚ್‌ಐವಿ ಕಾಣಿಸಿಕೊಂಡಿದೆ. ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿರುವ ಸಮೀಕ್ಷೆಯಿಂದಬೆಳಕಿಗೆ ಬಂದಿದೆ. ವರ್ಷ ದಿಂದ ವರ್ಷಕ್ಕೆ ಸೋಂಕುಕಡಿಮೆಯಾಗು ತ್ತಿರುವುದು ಆರೋಗ್ಯ ಇಲಾಖೆಗೆ ಸಮಾಧಾನ ತಂದಿದ್ದು, ಸೋಂಕಿತರ ಪ್ರಮಾಣ ಶೂನ್ಯಕ್ಕೆ ತರುವುದಕ್ಕೆ ಇಲಾಖೆ ಶ್ರಮಿಸುತ್ತಿದೆ. ಜಿಲ್ಲೆಯ 4 ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಚ್‌ಐವಿ ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು ಪರೀಕ್ಷೆ ಮಾಡಿಸಿ ಕೊಳ್ಳಬಹುದು. ಬಹುತೇಕರಿಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯ ಇಲಾಖೆ ಸೋಂಕಿತರಿಗೆ ವೈದ್ಯಕೀಯ ಚಿಕಿತ್ಸೆ ಜತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ.
ಎಚ್‌ಐವಿಯಿಂದ ದೂರವಿರಲು ತೆಗೆದುಕೊಳ್ಳಬೇಕಾದ ಸುರಕ್ಷತಾಕ್ರಮಗಳಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಡಲಾಗುವುದು. ಬೀದಿ ನಾಟಕ, ಅರಿವು ಜಾಥಾ, ಸೇರಿದಂತೆ ವಿವಿಧ ರೀತಿ ಕಾರ್ಯಕ್ರಮಗಳನ್ನು ರೂಪಿಸಿ ಏಡ್ಸ್ ಬಗ್ಗೆಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
–ಡಾ.ಮಂಜುಳಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ
ಜಿಲ್ಲೆಯಲ್ಲಿ ಎಲ್ಲಾ ಸಾರ್ವಜನಿಕ ಆಸ್ಪತ್ರೆ,ಪ್ರಾಥಮಿಕ ಹಾಗೂ ಸಮುದಾಯಆರೋಗ್ಯಕೇಂದ್ರದಲ್ಲಿ ಆಪ್ತ ಸಮಾಲೋಚನೆ ಹಾಗೂ ಪರೀಕ್ಷಾ ಸೌಲಭ್ಯ ಉಚಿತವಾಗಿದೆ. ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆಕಡಿಮೆಯಾಗುತ್ತಿದೆ.
–ಸರಿತಾ ಹೆಗಡೆ, ಜಿಲ್ಲಾ ಎಚ್‌ಐವಿ ಮೇಲ್ವಿಚಾರಕಿ
-ಎಸ್.ಮಹೇಶ್