Advertisement

Bangaluru: ಕೋರ್ಟ್‌ಗೆ ಇಂದು ರಾಹುಲ್‌ ಗಾಂಧಿ ಹಾಜರು

01:17 AM Jun 07, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಶುಕ್ರ ವಾರ ಬೆಂಗಳೂರಿಗೆ ಆಗಮಿಸಿ, “ಶೇ. 40 ಕಮಿಷನ್‌ ಸರಕಾರ’ ಜಾಹೀರಾತು ನೀಡಿದ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಸಿಟಿ ಸಿವಿಲ್‌ಕೋರ್ಟ್‌ಗೆ ಹಾಜರಾಗಿ ವಿಚಾ ರಣೆ ಎದುರಿಸಲಿದ್ದಾರೆ. ಪ್ರಕ ರಣ ದಲ್ಲಿ ಅವರು 4ನೇ ಆರೋಪಿ.

Advertisement

2023ರ ಮೇ 5ರಂದು ಆಗ ಅಧಿ ಕಾರದಲ್ಲಿದ್ದ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್‌ ವಿವಿಧ ಪತ್ರಿಕೆ ಗಳಲ್ಲಿ ಜಾಹೀರಾತು ನೀಡಿ, “ಆಡಳಿತಾರೂಢ ರಾಜ್ಯ ಬಿಜೆಪಿ ಸರಕಾರ ಶೇ. 40ರಷ್ಟು ಕಮಿಷನ್‌ ಸರಕಾರ’ ಎಂದು  ಆರೋಪಿಸಿತ್ತು. ಈ ಬಗ್ಗೆ ಬಿಜೆಪಿ ಮುಖಂಡ ಬಿ.ಎಸ್‌. ಕೇಶವ ಪ್ರಸಾದ್‌ ಖಾಸಗಿ ದೂರು ಸಲ್ಲಿ  ಸಿದ್ದರು. ಅದನ್ನು “ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾ ಲಯ’ದ 42ನೇ ಎಸಿಎಂಎಂ ಕೋರ್ಟ್‌ ವಿಚಾರಣೆಗೆ ಅಂಗೀ ಕರಿಸಿ ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸಿತ್ತು.

ಅದರಂತೆ ಸಿಎಂ-ಡಿಸಿಎಂ ಜೂ. 1ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಗೈರಾಗಿದ್ದ ರಾಹುಲ್‌ಗೆ  ಜೂ. 7ರಂದು ಖುದ್ದು ಹಾಜರಾಗುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹಾಜರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next