Advertisement
ನಾಮಪತ್ರ ಸಲ್ಲಿಸಲು ತುಮಕೂರಿಗೆ ತೆರಳುವ ಮೊದಲು ಹೊಳೆನರಸೀಪುರ ತಾಲೂಕಿನ ವಿವಿಧ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ಬಳಿಕ ಮಾತನಾಡಿ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ನೀವೇ ಸ್ಪರ್ಧೆ ಮಾಡಿ ಎಂದು ಕಾಂಗ್ರೆಸ್ ಮುಖಂಡರಿಗೆಹೇಳಿದ್ದೇನೆ. ಉತ್ತರದಲ್ಲಿ ನಿಲ್ಲಲು ನನಗೂ ಒಲವಿತ್ತು. ಆದರೆ ತುಮಕೂರು ಕ್ಷೇತ್ರದಲ್ಲಿ ನೀವೇ ಸ್ಪರ್ಧಿಸಿ, ಇಲ್ಲವೇ ಕಾಂಗ್ರೆಸ್‌ಗೆ ಬಿಟ್ಟುಕೊಡಿ ಎಂದು ಡಿಸಿಎಂ ಡಾ.ಜಿ.ಪರಮೇ
ಶ್ವರ್ ಷರತ್ತು ಹಾಕಿದ್ದರು. ಜೆಡಿಎಸ್ ಮುಖಂಡರು ನೀವೇ ಸ್ಪರ್ಧಿಸಬೇಕೆಂದು ಒತ್ತಡ ಹೇರಿದರು. ಆದರೆ, ಎರಡುಕಡೆ ಸ್ಪರ್ಧೆ ಬೇಡವೆಂದು ನಿರ್ಧರಿಸಿ,ಅಂತಿಮವಾಗಿ ತುಮಕೂರು ಆಯ್ಕೆ ಮಾಡಲಾಯಿತು ಎಂದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುತ್ತಿರುವ ಜೆಡಿಎಸ್ ವರಿಷ್ಠ, ಎಚ್.ಡಿ.ದೇವೇಗೌಡ ತಮ್ಮ ಮನೆ ದೇವರು ಹರದನಹಳ್ಳಿಯ ಶ್ರೀ ದೇವೇಶ್ವರನ ಸನ್ನಿಧಿಯಲ್ಲಿ ಬಿ ಫಾರಂಗೆ ಪೂಜೆ ಮಾಡಿ ಅಲ್ಲಿಯೇ ಸಹಿಹಾಕಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.
Related Articles
Advertisement
ಹೆಲಿಕಾಪ್ಟರ್‌ನಲ್ಲಿ ಹೊಳೆನರಸೀಪುರಕ್ಕೆ ಬಂದು ಪೂಜಾ ಕಾರ್ಯಗಳು ಮುಗಿದ ನಂತರ ಮಂಡ್ಯಕ್ಕೆ ತೆರಳಿ ಮೊಮ್ಮಗ ನಿಖೀಲ್ ಕುಮಾರ ಸ್ವಾಮಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭ ದಲ್ಲಿ ಹಾಜರಿದ್ದು ಅಲ್ಲಿಂದ ರಸ್ತೆ ಮೂಲಕವೇ ತುಮಕೂರಿಗೆ ದೇವೇಗೌಡರು ತೆರಳಿದರು.
ಪ್ರಮುಖ ನಾಯಕರ ಉಮೇದುವಾರಿ: ಕಲ್ಪತರುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಪ್ರಮುಖ ನಾಯಕರು ಸೋಮವಾರ ನಾಮಪತ್ರ ಸಲ್ಲಿಸಿದರು.ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿಬಂದು ನಾಮಪತ್ರ ಸಲ್ಲಿಸಿದರು. ಮಾಜಿ ಸಂಸದ ಜಿ.ಎಸ್.ಬಸವರಾಜು ಬಿಜೆಪಿಯಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಕಣ ರಂಗೇರಿಸಿದ್ದಾರೆ.