ದೇವನಹಳ್ಳಿ: ಹತ್ತಾರು ವರ್ಷಗಳಿಂದ ನೀರಿಲ್ಲದೆ, ಬಸವಳಿದಿದ್ದಕೊಯಿರಾ ಗ್ರಾಮದ ರೈತರ ಮೊಗದಲ್ಲಿ ಈಗ ಖುಷಿ ಮೂಡಿದ್ದು ಕೆರೆಗೆಹರಿದು ಬರುತ್ತಿರುವ ನೀರನ್ನು ಬಳಸಿ ಭತ್ತದ ಪೈರನ್ನು ನಾಟಿಮಾಡುತ್ತಿದ್ದಾರೆ. ಕೊಯಿರಾ ಕೆರೆ ತುಂಬಿ ಕೋಡಿ ಹರಿದಿದೆ.ತಹಶೀಲ್ದಾರ್‌ರಿಂದ ಬಾಗಿನ ಅರ್ಪಿಸಲಾಗಿದೆ.
ಇದರ ಪ್ರತಿಫಲ, ಜೌಗುನೀರು ರೈತರಿಗೆ ಭತ್ತ ಬೆಳೆಯಲು ಪ್ರೇರಣೆಯಾಗಿದೆ. ಕೆರೆ ಏರಿಹಿಂಭಾಗದ ಜಮೀನಿನಲ್ಲಿ ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ.2 ಎಕರೆಯಲ್ಲಿ ಮಸೂರಿ ತಳಿ ಭತ್ತದ ಪೈರು ನಾಟಿ ಮಾಡಿಸುತ್ತಿದ್ದೇನೆ.3 ಲೋಡ್ ಕೊಟ್ಟಿಗೆ ಗೊಬ್ಬರ ಫಲವತ್ತತೆಗೆ ಹಾಕಲಾಗಿದೆ.
4 ಬಾರಿಉಳುಮೆ ಮಾಡಿದ್ದೇನೆ. ನಾಟಿ ಮಾಡಲು ಒಬ್ಬರಿಗೆ 500ರೂ. ಕೂಲಿ, 4ತಿಂಗಳಿಗೆ ಕೊಯ್ಲು, 2 ಎಕರೆಗೆ 40 ಸಾವಿರ ವೆಚ್ಚವಾಗಿದೆ. 60 ರಿಂದ 70ಕ್ವಿಂಟಲ್ ಇಳುವರಿ ನಿರೀಕ್ಷೆ ಇದೆ ಎಂದು ರೈತ ಆನಂದ್ ರಾಜ್,ಸುಬ್ಬೇಗೌಡ ಹೇಳುತ್ತಾರೆ.
ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭತ್ತ ನಾಟಿ ಇಲ್ಲ:ಬೆಂ.ಗ್ರಾಮಾಂತರ ಜಿಲ್ಲೆಯ 3 ತಾಲೂಕುಗಳಲ್ಲಿ ಸುಮಾರು 117ಹೆಕ್ಟೇರ್‌ನಲ್ಲಿಭತ್ತ ಬೆಳೆಯುತ್ತಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ ಹೆಚ್ಚುಬೆಳೆಯುತ್ತಾರೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭತ್ತ ನಾಟಿಯಾಗಿಲ್ಲ.
ಕೊಯಿರಾ ಬೆಟ್ಟಗುಡ್ಡಗಳ ಸಾಲು ಒಂದೆಡೆಯಾದರೆ, ಗ್ರಾಮದಸುತ್ತಮುತ್ತಲಿರುವ ಭೂಮಿ ಗರ್ಭದಲ್ಲಿ ಹಾಸು ಬಂಡೆಗಳ ಸವಾಲಿನನಡುವೆ ಉಳಿದಿರುವ ಜಮೀನುಗಳಿಗೆ ಮಳೆಗಾಲದ ಮಳೆ ನೀರು ಕೃಷಿಗೆಆಸರೆಯಾಗಿದೆ. ಇರುವ ಒಂದು ಕೆರೆಯನ್ನು ಬೆಂಗಳೂರಿನರಾಜಮಹಾಲ್ ವಿಲಾಸ್ ರೋಟರಿ ಸಂಸ್ಥೆ ಹಾಗೂ ಗ್ರಾಮಸ್ಥರಸಹಭಾಗಿತ್ವದಲ್ಲಿ ಕಳೆದ ಬೇಸಿಗೆಯಲ್ಲಿ ಶೇ.40 ಹೂಳು ಹೊರ ಹಾಕಿಮುಚ್ಚುಹೋಗಿರುವ ರಾಜಕಾಲುವೆ ದುರಸ್ಥಿಗೊಳಿಸಲಾಗಿತ್ತು.
ಎಸ್.ಮಹೇಶ್