Advertisement

ಒಂದೇ ದಿನ ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ

04:42 PM Jul 24, 2021 | Team Udayavani |

ಬೆಂಗಳೂರು: ರಾಜ್ಯದ ಯುವ ಜನತೆಗೆ ಉದ್ಯೋಗಾವಕಾಶ ಒದಗಿಸುವ ದೃಷ್ಟಿಯಿಂದ ಹಮ್ಮಿಕೊಂಡಿರುವ ವರ್ಚುವಲ್‌ ಉದ್ಯೋಗ ಮೇಳದಲ್ಲಿ ಮೊದಲ ದಿನ ಒಂದು ಸಾವಿರ ಅಭ್ಯರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಕ್ಕೆಆಯ್ಕೆಯಾಗಿದ್ದಾರೆ.

Advertisement

ಕೌಶಲ್ಯಮಾಸದ ಪ್ರಯುಕ್ತ ರಾಜ್ಯ ಕೌಶಲ್ಯಾಭಿವೃದ್ಧಿನಿಗಮವು ಶುಕ್ರವಾರ ಹಮ್ಮಿಕೊಂಡಿದ್ದ ಮೊದಲ ದಿನದವರ್ಚುಯಲ್‌ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ5,000 ಯುವಕ-ಯುವತಿಯರಲ್ಲಿ 1 ಸಾವಿರಯುವಜನರು ವಿವಿಧ ಪ್ರತಿಷ್ಠಿತ ಕಂಪನಿಗಳಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ ಎಂದುಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ವರ್ಚುಯಲ್‌ಮೇಳದಲ್ಲಿ ಪಾಲ್ಗೊಂಡು ಸಾಂಕೇತಿಕವಾಗಿ ಕೆಲಯುವಕ ಯುವತಿಯರಿಗೆ ನೇಮಕಾತಿ ಪತ್ರಗಳನ್ನುವಿತರಿಸಿ ಮಾತನಾಡಿ, ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತ ಕಂಪನಿಗಳ ಜತೆ ಕೌಶಲ್ಯಾಭಿವೃದ್ಧಿ ನಿಗಮವು ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ಉದ್ಯೋಗ ಮೇಳ ತಿಂಗಳು ಪೂರ್ತಿಮುಂದುವರಿಯಲಿದೆ ಎಂದರು.

ಈ ಮೇಳದಲ್ಲಿ ಎಚ್‌ಜಿಎಸ್‌, ಆದಿತ್ಯ ಬಿರ್ಲಾ, ಸನ್‌ಸೆರಾ ಎಂಜಿನಿಯರಿಂಗ್‌, ಐಬಿಎಂ ಇಂಡಿಯಾ, ವಿಪ್ರೊ,ಟೀಮ್‌ ಲೀಸ್‌, ರಿಲಯನ್ಸ್‌ ಕಂಪನಿಯ ಏಳು ಸಹಕಂಪನಿಗಳು, ಅಫ್ರಿಮ್‌ ಡಾಟಾ ಸರ್ವೀಸ್‌, ಡ್ರೀಮ್‌ಆರ್ಬಿಟ್‌, ಹಿಂದುಜಾ, ವಿಸ್ಟ್ರಾನ್‌, ಫ್ಲಿಪ್‌ಕಾರ್ಟ್‌,ಡಿಎಚ್‌ಎಲ್‌, ಅಲ್‌ ಲಾಜಿಸ್ಟಿಕ್ಸ್‌, ಮೆಡಿಝಿನಿಕಾ,ಮೆಶೋ, ಗ್ರಾಸ್‌ರೂಟ್ಸ್‌ ಬಿಪಿಒ, ಇಂಡಿಯನ್‌ ಮನಿ,ನವತಾ ರೋಡ್‌ ಟ್ರಾನ್ಸ್‌ಪೊàರ್ಟ್‌, ಎಕಾಮ್‌ ಎಕ್‌Õಪ್ರಸ್‌, ಲ್ಯಾಂಡ್‌ಮಾರ್ಕ್‌, ಐಟಿಸಿ, ಕ್ವೆಸ್‌ ಕಾರ್ಪ್‌,ಸ್ಟ್ರೆಪರಾವಾ ಇಂಡಿಯಾ ಸೇರಿ ಇಪ್ಪತ್ತಕ್ಕೂ ಹೆಚ್ಚುಕಂಪನಿಗಳು ಭಾಗವಹಿಸಿವೆ.ದೇಶದಲ್ಲಿ ಕರ್ನಾಟಕ ಅವಕಾಶಗಳ ಆಗರವಾಗಿದ್ದು, ಪ್ರತಿ ವರ್ಷ ಸಂಘಟಿತ ವಲಯದಲ್ಲಿ ಐದು ಲಕ್ಷಕ್ಕೂಹೆಚ್ಚು ಜನ ಭವಿಷ್ಯ ನಿಧಿ ಮತ್ತು ಇಎಸ್‌ಐ ಸೌಲಭ್ಯಕ್ಕೆನೋಂದಣಿ ಆಗುತ್ತಿದ್ದಾರೆ.

ಇದರ ಜತೆಗೆ, 25,000ಕ್ಕೂಹೆಚ್ಚು ವೇತನ ಪಡೆಯುವ ಯುವಕ, ಯುವತಿಯರುಇದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಉದ್ಯೋಗಕ್ಕೆಸೇರುತ್ತಿರುವ ಅಂಕಿ-ಅಂಶಗಳು ಸರ್ಕಾರದ ಬಳಿ ಇದೆಎಂದು ಹೇಳಿದರು.ಐದು ಲಕ್ಷ ಭಾರತೀಯರಿಗೆ ಉದ್ಯೋಗಾವಕಾಶನೀಡಲು ಜಪಾನ್‌ ಮುಂದೆ ಬಂದಿದ್ದು, ಈ ಬಗ್ಗೆಭಾರತ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ.

Advertisement

ಹಾಗೆಯೇ ಹಲವು ದೇಶಗಳು ಭಾರತೀಯಕೌಶಲ್ಯಾಧಾರಿತ ಮಾನವ ಸಂಪನ್ಮೂಲಕ್ಕೆ ಬೇಡಿಕೆಇಟ್ಟಿವೆ. ಬ್ರಿಟನ್‌ಗೆ1 ಸಾವಿರ ಶುಶ್ರೂಷಕರನ್ನುಕಳಿಸುವಬಗ್ಗೆಯೂ ಒಪ್ಪಂದ ಆಗಿದೆ ಎಂದು ಮಾಹಿತಿನೀಡಿದರು. ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕನಿರ್ದೇಶಕ ಅಶ್ವಿ‌ನ್‌ ಗೌಡ, ಇಲಾಖೆಯ ಉಪಕಾರ್ಯದರ್ಶಿ ಮಾರುತಿ ಪ್ರಸನ್ನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next