ಬೆಂಗಳೂರು: ರಾಜ್ಯದ ಏಕೈಕ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಯಾದ ಕಿದ್ವಾಯಿ ಸ್ಮಾರಕ ಗಂಥೀ ಸಂಸ್ಥೆಯಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿಯೇ ಪ್ರತ್ಯೇಕವಾದಅತ್ಯಾಧುನಿಕ ತುರ್ತು ನಿಗಾಘಟಕ (ಐಸಿಯು)ಸ್ಥಾಪಿಸಲಾಗಿದೆ. ಆಗಸ್ಟ್ ಮೊದಲ ವಾರದಲ್ಲಿಲೋಕಾರ್ಪಣೆಗೊಳಿಸಲು ಆಸ್ಪತ್ರೆ ಮುಂದಾಗಿದೆ.
ನಗರದ ಹೊಸೂರು ರಸ್ತೆಯಲ್ಲಿರುವ ಕಿದ್ವಾಯಿಆಸ್ಪತ್ರೆಗೆ ಪ್ರತಿ ನಿತ್ಯ 1,200 ರಿಂದ 1,500 ರೋಗಿಗಳುಭೇಟಿ ನೀಡುತ್ತಾರೆ. ವಾರ್ಷಿಕ 600-800 ಮಕ್ಕಳುಕ್ಯಾನ್ಸರ್ ಚಿಕಿತ್ಸೆಗೆಂದು ದಾಖಲಾಗುತ್ತಿದ್ದಾರೆ. ಅಲ್ಲದೆ,3,000ಕ್ಕೂ ಅಧಿಕ ಮಕ್ಕಳು ಫಾಲೋಅಪ್ ಚಿಕಿತ್ಸೆಪಡೆಯುತ್ತಿದ್ದಾರೆ. ಶಸ್ತ್ರಚಿಕಿತೆ Õ, ತೀವ್ರ ಅನಾರೋಗ್ಯಹಿನ್ನೆಲೆ ಆಸ್ಪತ್ರೆಗೆ ದಾಖಲಾಗುವ ಮಕ್ಕಳಿಗೆ ಐಸಿಯುಹಾಸಿಗೆಗಳ ಅಗತ್ಯವಿರುತ್ತದೆ.
ಆದರೆ, ಆಸ್ಪತ್ರೆಆವರಣದಲ್ಲಿ ಮಕ್ಕಳಿಗೆಂದು ಪ್ರತ್ಯೇಕ ಐಸಿಯುವಾರ್ಡ್ ಇರಲಿಲ್ಲ. ಹಿರಿಯರ ವಾರ್ಡ್‌ನಲ್ಲಿಯೇಒಂದೆರಡು ಹಾಸಿಗೆಗಳನ್ನು ಮಕ್ಕಳಿಗೆಂದು ನೀಡಲಾಗುತ್ತಿತ್ತು.ಸದ್ಯಆಸ್ಪತ್ರೆಯಮೊದಲಮಹಡಿಯಲ್ಲಿಯೇಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ.ಅತ್ಯಾಧುನಿಕ ಸೌಲಭ್ಯವನ್ನು ಮಕ್ಕಳ ಐಸಿಯುಹೊಂದಿದ್ದು, 1.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಘಟಕದಲ್ಲಿ 8 ಐಸಿಯು ಹಾಸಿಗೆಗಳಿವೆ. ವೆಂಟಿಲೇಟರ್‌ಅಗತ್ಯವಿಲ್ಲದ ಆಕ್ಸಿಜನ್ ಸೌಲಭ್ಯಹೊಂದಿರುವ 6 ಸ್ಟೆಪ್‌ಡೌನ್ ಐಸಿಯು ಹಾಸಿಗೆಗಳಿವೆ. ಶಸ್ತ್ರಚಿಕಿತ್ಸೆ ಬಳಿಕಕನಿಷ್ಠ3ರಿಂದ ಗರಿಷ್ಠ 10 ದಿನಗಳವರೆಗೂ ಮಕ್ಕಳಿಗೆ ಐಸಿಯುಚಿಕಿತ್ಸೆ ಅವಶ್ಯಕವಿರುತ್ತದೆ. ಅಂಥ ಮಕ್ಕಳಿಗೆಈವಾಡ್ìನಲ್ಲಿ ಅನುಕೂಲಕರವಾಗಲಿದೆ. ಇನ್ನು ಹಿರಿಯರೊಟ್ಟಿಗೆಚಿಕಿತ್ಸೆ ಪಡೆಯುವದಕ್ಕಿಂತ ಮಕ್ಕಳು ತಮ್ಮ ವಯಸ್ಸಿನವರೊಂದಿಗೆ ಪ್ರತ್ಯೇಕ ವಾಗಿ ಚಿಕಿತ್ಸೆ ಪಡೆಯುವುದುಮಾನಸಿಕ ಆರೋಗ್ಯ ದೃಷ್ಟಿಯಿಂದಲೂ ಅನುಕೂಲಕರವಾಗಿದೆ ಎನ್ನುತ್ತಾರೆಆಸ್ಪತ್ರೆಹಿರಿಯವೈದ್ಯರು.ದಾನಿಗಳ ನೆರವು: ಮಕ್ಕಳ ಐಸಿಯು ಘಟಕವನ್ನುದಾನಿಗಳ ನೆರವಿನಿಂದ ಸ್ಥಾಪಿಸಲಾಗಿದೆ.ಅಂತಾರಾಷ್ಟ್ರೀಯ ಪ್ರಯೋಗಾಲಯ ಸಮೂಹಸಂಸ್ಥೆಯಾದ ಸ್ಯಾಮಿ ಸ್ ಲ್ಯಾಬ್ ಒಂದು ಕೋಟಿರೂ., ಲಯನ್ಸ್ ಕ್ಲಬ್‌ನಿಂದ 20 ಲಕ್ಷ ರೂ. ದೇಣಿಗೆನೀಡಲಾಗಿದೆ. ದಾನಿಗಳ ಸ್ಮರಣಾರ್ಥ ಸ್ಯಾಮಿಸ್‌ಸಂಸ್ಥೆಯ ಮುಖ್ಯಸ್ಥ ಮೊಹಮದ್ ಮಜೀದ್ ಅವರಹೆಸರನ್ನು ಈ ಘಟಕ್ಕೆ ನಾಮಕರಣ ಮಾಡಲಾಗುತ್ತಿದೆ.
ಮಕ್ಕಳಲ್ಲಿ ಯಾವ ಕ್ಯಾನ್ಸರ್ ಹೆಚ್ಚು ?: ಲುಕೇಮಿಯಾ(ರಕ್ತದ ಕ್ಯಾ®ರ್) Õ ಅಸ್ತಿಮಜ್ಜೆ ಕಸಿ, ರಕ್ತ, ಮೆದುಳು,ಲಿಂಫೋಮಾ, ಯಕೃತ್ತಿನ ಘನ ಗೆಡ್ಡೆಗಳು, ಮೂತ್ರಪಿಂಡಅಥವಾ ಮೇದೋಜೀರಕ ಗ್ರಂಥಿ, ಮೂಳೆಗಳುಸೇರಿದಂತೆಕ್ಯಾನ್ಸರ್ ಕಾರಕಗಳು ಮಕ್ಕಳಿಗೆ ಕಾಡುತ್ತದೆ.
ಜಯಪ್ರಕಾಶ್ ಬಿರಾದಾರ್