ದೊಡ್ಡಬಳ್ಳಾಪುರ:ತಾಲೂಕಿನಕೈಗಾರಿಕಾಪ್ರದೇಶದ ಬಾಂಬೆ ರೇಯಾನ್‌ಫ್ಯಾಷನ್ಸ್‌ಲಿ ಕಾರ್ಖಾನೆಯುಕಾರ್ಮಿಕರ ವೇತನದಿಂದ ಪಿ.ಎಫ್(ಭವಿಷ್ಯ ನಿಧಿ) ಹಣವನ್ನು ಕಡಿತಮಾಡಿಕೊಂಡಿದ್ದು, ಕಾರ್ಮಿಕರ ಪಿ.ಎಫ್ ಖಾತೆಗೆ ವರ್ಗಾಯಿಸದೇವಂಚಿಸುತ್ತಿದೆ.ಈ ಬಗ್ಗೆಕ್ರಮಕೈಗೊಳ್ಳಲುಕಾರ್ಖಾನೆ ಮುಖ್ಯಸ್ಥರಿಗೆ ಜುಲೈ24ರವರೆಗೆ ಗಡುವು ನೀಡಲಾಗಿದೆ.
ಕ್ರಮ ಕೈಗೊಳ್ಳದಿದ್ದರೆ ಕಾರ್ಮಿಕಕುಟುಂಬದೊಂದಿಗೆ ಪ್ರತಿಭಟನೆನಡೆಸಲಾಗುವುದು ಎಂದು ಕದಂಬಬ್ರಿಗೇಡ್ ಸಂಸ್ಥಾಪಕ ಜಿ.ಎನ್.ಪ್ರದೀಪ್‌ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಬಾಂಬೆ ರೇಯಾನ್ ಫ್ಯಾಷನ್ಸ್ ಲಿಕಾರ್ಖಾನೆಯು ಸುಮಾರು 4ವರ್ಷದಿಂದ ಕಾರ್ಮಿಕರ ವೇತನದಿಂದಪಿ.ಎಫ್ ಹಣವನ್ನು ಕಡಿತಮಾಡಿಕೊಂಡಿದೆ. ಆದರೆ, ಕಾರ್ಮಿಕರುತಮ್ಮ ಪಿ.ಎಫ್ ನಿಧಿಯಲ್ಲಿ ಹಣಪಡೆಯಲು ಹೋದಾಗ ಖಾತೆಯಲ್ಲಿ ಜಮಾ ಆಗಿಲ್ಲ ಎನ್ನುವ ಉತ್ತರ ದೊರೆಯುತ್ತದೆ. ಕಾರ್ಖಾನೆಯನೂರಾರು ಕಾರ್ಮಿಕರಿಗೆ ಇದೇ ರೀತಿಅನ್ಯಾಯವಾಗಿದೆ.
ಈ ಬಗ್ಗೆ ಕಂಪನಿಯಮಾನ ಸಂಪನ್ಮೂಲ ಅಧಿಕಾರಿಗಳಗಮನಕ್ಕೆ ತಂದಾಗ ಸರಿ ಪಡಿಸುತ್ತೇವೆಎಂದು ಹೇಳಿ 15 ದಿನಗಳಾಗಿದ್ದರೂಇನ್ನೂ ಯಾವುದೇ ಉತ್ತರ ಬಂದಿಲ್ಲ ಎಂದು ದೂರಿದರು
ಸರಿಯಾಗಿ ಸಂಬಳ ನೀಡುತ್ತಿಲ್ಲ:ಕಾರ್ಖಾನೆ ಕಾರ್ಮಿಕರಿಗೆ ಸರಿಯಾಗಿಸಂಬಳ ನೀಡುತ್ತಿಲ್ಲ. ಕಾರ್ಮಿಕರುತಮಗಾಗಿರುವ ಅನ್ಯಾಯದ ಬಗ್ಗೆದೂರು ನೀಡಿದ್ದರೂ, ಕಾರ್ಖಾನೆಮಾಲೀಕರು ಕ್ರಮ ಕೈಗೊಂಡಿಲ್ಲ. ಈಬಗ್ಗೆ ಜುಲೈ 24ರವರೆಗೆ ಅಂತಿಮಗಡುವನ್ನು ನೀಡಲಾಗುತ್ತಿದ್ದು, ಕ್ರಮಕೈಗೊಳ್ಳದಿದ್ದರೆ ಬಿಕ್ಷಾಟನಾ ಪಾದಯಾತ್ರೆಮೂಲಕ ವಿನೂತನ ಪ್ರತಿಭಟನೆನಡೆಸಲಾಗುವುದು. ಕಾರ್ಮಿಕ ಸಚಿವರಗಮನಕ್ಕೂ ತರುವ ಮೂಲಕ ಕಾನೂನುಹೋರಾಟ ನಡೆಸಲಾಗುವುದುಎಂದರು.
ಕಾರ್ಮಿಕರಿಗೆ ಸರಿ ಕೆಲಸವಿಲ್ಲ:ಕಾರ್ಖಾನೆ ಕಾರ್ಮಿಕ ಅನಿಲ್‌ಕುಮಾರ್ ಮಾತನಾಡಿ, ಕೊರೊನಾಸಂಕಷ್ಟದಿಂದ ಕಾರ್ಮಿಕರಿಗೆ ಸರಿಕೆಲಸವಿಲ್ಲದಂತಗಿದೆ. ಇಂತಹಪರಿಸ್ಥಿತಿಯಲ್ಲಿ ನಾವು ಕಷ್ಟಪಟ್ಟು ಗಳಿಸಿದಹಣ ನಮ್ಮ ಕಷ್ಟಕಾಲಕ್ಕೆ ಇಲ್ಲವಾಗಿದೆ. ಪಿ.ಎಫ್ ಹಣ ಕಡಿತ ಮಾಡಿರುವುದುಇನ್ನೂ ಜಮಾ ಆಗಿಲ್ಲ ಎಂದುಹೇಳಿದರು.ರಾಷ್ಟ್ರೀಯ ದಲಿತ ಸಂಘದ ರಾಜ್ಯಉಪಾಧ್ಯಕ್ಷ ಟಿ.ಶ್ರೀನಿವಾಸ್, ತಾಲೂಕುಅಧ್ಯಕ್ಷ ಆಟೋ ರಮೇಶ್, ಕದಂಬಬ್ರಿಗೇಡ್‌ನ ದಯಾನಂದ್,ಕಾರ್ಮಿಕರಾದ ನವೀನ್ ಕುಮಾರ,ಕಿರಣ್ ಕುಮಾರ್, ಅನಿಲ್ ಕುಮಾರ್‌ಹಾಜರಿದ್ದರು.