Advertisement

ಬಡವರಿಗೆ ಯೋಜನೆ ತಲುಪುತ್ತಿಲ್ಲ: ಆರೋಪ

05:04 PM Jun 12, 2021 | Team Udayavani |

ದೊಡ್ಡಬಳ್ಳಾಪುರ: ಲಾಕ್‌ಡೌನ್‌ಹಿನ್ನೆಲೆಯಲ್ಲಿ ಪ್ರಕಟಿಸಿರುವಪ್ಯಾಕೇಜ್‌ ಕೇವಲ ನಾಮಕಾವಸ್ತೆಯಾಗಿದ್ದು, ಬಡವರಿಗೆ ಸರ್ಕಾರಿಯೋಜನೆಗಳು ತಲುಪುತ್ತಿಲ್ಲ ಎಂದುಶಾಸಕ ಜಮೀರ್‌ ಅಹ್ಮದ್‌ ಖಾನ್‌ಹೇಳಿದರು.

Advertisement

ನಗರದ 18 ಪ್ರದೇಶಗಳಲ್ಲಿದಾನಿಗಳ ಸಹಕಾರದಿಂದ ನಡೆಯುತ್ತಿರುವ ನಿತ್ಯ ಅನ್ನದಾಸೋಹದಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ,ಪರಿಹಾರದ ಅರ್ಹರ ಆ್ಯಪ್‌ ಚಾಲನೆ ಆಗುತ್ತಿಲ್ಲ. ರಾಜ್ಯದಲ್ಲಿಒಂದೂವರೆ ಕೋಟಿ ಬಿಪಿಎಲ್‌ಕಾರ್ಡ್‌ದಾರರು ಇದ್ದಾರೆ. ಅವರ ಕುಟುಂಬಗಳಿಗೆ ತಲಾ 10 ಸಾವಿರಹಣ ವರ್ಗಾಯಿಸಿದರೆ ಅನುಕೂಲವಾಗಲಿದೆ ಎಂದುತಿಳಿಸಿದರು.ನನ್ನ ಮಗ ಮತ್ತು ನಿಖೀಲ್‌ ಇಬ್ಬರನ್ನೂ ಒಂಬತ್ತನೇತರಗತಿಯಿಂದಲೂ ನೋಡುತ್ತಿದ್ದೇನೆ. ನಿಖೀಲ್‌ಕುಮಾರಸ್ವಾಮಿ ಸಹ ನನ್ನ ಮಗನಿದ್ದಂತೆ. ನಿಖೀಲ್‌ ಬಗ್ಗೆನಾನು ಮಾತನಾಡುವುದಿಲ್ಲ ಎಂದರು.

ಶಾಸಕ ಟಿ.ವೆಂಕಟರಮಣಯ್ಯ, ಕೆಪಿಸಿಸಿ ಸದಸ್ಯಜಿ.ಲಕ್ಷ್ಮೀಪತಿ, ತಾಪಂ ಮಾಜಿ ಸದಸ್ಯ ಹಸನಘಟ್ಟ ರವಿ,ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಪಿ.ಜಗನ್ನಾಥ್‌,ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಬಷೀರ್‌, ಮುಖಂಡರಾದಸೋಮರುದ್ರಶರ್ಮ, ಅಂಜನಮೂರ್ತಿ, ಮುನಿರಾಜುಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next