Advertisement

ಡ್ರಗ್‌, ಸೈಬರ್‌ ಕ್ರೈಂ ಪತ್ತೆಗೆ ಆದ್ಯತೆ

04:56 PM Jul 18, 2021 | Team Udayavani |

ಬೆಂಗಳೂರು: ಸೈಬರ್‌ ಕ್ರೈಂ ವಂಚನೆ ಹಾಗೂ ಮಾದಕವಸ್ತು ಮಾರಾಟಗಾರರ ವಿರುದ್ಧ ತ್ವರಿತ ಕ್ರಮಕೈಗೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಹೇಳಿದರು.

Advertisement

ಕಮಿಷನರೇಟ್‌ ವ್ಯಾಪ್ತಿಯ ಪೊಲೀಸ್‌ ಸಂಬಂಧಿತಸಮಸ್ಯೆಗಳನ್ನು ಆಲಿಸಲು ಶನಿವಾರ ನಗರಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ನೇರಪ್ರಸಾರದಲ್ಲಿ ಮಾತನಾಡಿದ ಅವರು, ಬೆಳಗ್ಗೆ 11.30ರಿಂದ ಸುಮಾರು ಒಂದು ಗಂಟೆಗಳ ಕಾಲ ಸಾರ್ವಜನಿಕರಿಂದ ನೇರವಾಗಿ ಪ್ರಶ್ನೆಗಳನ್ನು ಸ್ವೀಕರಿಸಿದರು.ಜೆ.ಜೆ.ನಗರದ ನಾಗರಿಕರೊಬ್ಬರು ತಮ್ಮ ಬಡಾವಣೆಯಲ್ಲಿ ಮಾದಕ ವಸ್ತು ಮಾರಾಟವಾಗುತ್ತಿರುವ ಬಗ್ಗೆ ದೂರುನೀಡಿದರು.ಅದಕೆ R ಪ್ರತಿಕ್ರಿಯೆಸಿದ ಆಯುಕ್ತರು, ಈಗಾಗಲೇ ಮಾದಕ ವಸ್ತು ಜಾಲದ ವಿರುದ್ಧ ಕಾರ್ಯಾಚರಣೆಚುರುಕುಗೊಂಡಿದೆ.

ಜೆ.ಜೆ.ನಗರ, ಪಾದರಾಯನಪುರದಲ್ಲೂ ಕಾರ್ಯಾಚರಣೆ ಜತೆಗೆ ಪೊಲೀಸರು ಹೆಚ್ಚುಗಸ್ತು ತಿರುಗಲು ಸೂಚಿಸಲಾಗುವುದು ಎಂದು ತಿಳಿಸಿದರು.ಮತ್ತೂಬ್ಬ ನಾಗರಿಕರು ಕೊರೆಕ್ಸ್‌ ಔಷಧಿ ಮಾರಾಟದಬಗ್ಗೆ ಪ್ರಸ್ತಾಪಿಸಿದಾಗ, ಕೊರೆಕ್ಸ್‌ ಔಷಧಿ ಮಾದಕ ವಸ್ತುವಿಗೆಸೇರಿದೆ. ಅದನ್ನು ಸಂಗ್ರಹಿಸುವವರು ಹಾಗೂ ಮಾರಾಟಮತ್ತು ಸರಬರಾಜು ಮಾಡುವವರನ್ನು ಎನ್‌ಡಿಪಿಎಸ್‌ಕಾಯ್ದೆ ಅಡಿ ಬಂಧಿಸಲಾಗುವುದು ಎಂದು ಹೇಳಿದರು.

ಕೋರಮಂಗಲದ ನಿವಾಸಿಯೊಬ್ಬರು ಸೈಬರ್‌ ಕ್ರೈಂಸಂಬಂಧಿತ ಪ್ರಕರಣಗಳನ್ನು ತ್ವರಿತ ರೀತಿಯ ಇತ್ಯರ್ಥಕ್ಕೆಕ್ರಮಕೈಗೊಳ್ಳಬೇಕು. ಹೆಚ್ಚಿನ ತಂತ್ರಜ್ಞಾನದ ಮೂಲಕಆರೋಪಿಗಳ ಪತ್ತೆ ಹಚ್ಚಿ, ಹಣ ಕೊಡಿಸಬೇಕು ಎಂದುಕೇಳಿದರು. ಆ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತರು,ಸೈಬರ್‌ ವಂಚನೆಯಾದ ಕೂಡಲೇ ಪೊಲೀಸ್‌ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ನಂತರಕೆಲವೇ ಹೊತ್ತಿನಲ್ಲಿ ಆರೋಪಿಗಳ ಬ್ಯಾಂಕ್‌ ಖಾತೆ ಬ್ಲಾಕ್‌ ಮಾಡಲಾಗುತ್ತದೆ ಎಂದರು.

ನಗರದ ಕೆಲ ರಸ್ತೆಗಳಲ್ಲಿ ವಾಹನಗಳಓಡಾಟ ಹೆಚ್ಚಿದೆ. ಅಂಥ ರಸ್ತೆಗಳಅಗಲೀಕರಣಕ್ಕೆ ಕ್ರಮ ಕೈಗೊಳ್ಳಿ ಎಂದುಸಾರ್ವಜನಿಕರೊಬ್ಬರು ವಿನಂತಿಸಿದರು. ರಸ್ತೆ ಅಗಲೀಕರಣತ್ವರಿತವಾಗಿ ಆಗುವ ಕೆಲಸವಲ್ಲ. ಈ ಬಗ್ಗೆ ಚಿಂತನೆನಡೆಸಲಾಗುವುದು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಲಾಗುವುದು ಎಂದು ಹೇಳಿದರು.ಮಾರತ್ತಹಳ್ಳಿ, ತಲಘಟ್ಟಪುರ, ಚಿಕ್ಕಜಾಲ ವ್ಯಾಪ್ತಿಯಲ್ಲಿಯುವಕರ ಬೈಕ್‌ ವೀಲಿØಂಗ್‌ ಹಾವಳಿ, ಹೆಚ್ಚು ಶಬ್ಧ ಬರುವವಾಹನಗಳು ಹೆಚ್ಚಾಗಿರುವ ಬಗ್ಗೆ ಕೆಲ ಸಾರ್ವಜನಿಕರು ಪ್ರಸ್ತಾಪಿಸಿದರು. ಈ ಬಗ್ಗೆ ಪ್ರತಿಕ್ರಿಯೆಸಿ, ಬೈಕ್‌ ವೀಲಿØಂಗ್‌ಮಾಡುವವರ ವಿರುದ್ಧ ಕ್ರಮ ಜರುಗಿಸುವಂತೆಸೂಚಿಸಲಾಗುವುದು. ಜತೆಗೆ ಕರ್ಕಶ ಶಬ್ಧದ ವಾಹನಗಳಕ್ರಮಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next