Advertisement
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಂದಾಜು 1,160 ಕೋಟಿ ರೂ. ವೆಚ್ಚದಲ್ಲಿ ಪ್ರಸ್ತುತ ಕರ್ನಾಟಕದ ಬೆಂಗಳೂರು-ಮಾಲೂರು ಭಾಗದ ಕಾಮಗಾರಿ ನಡೆಯುತ್ತಿದೆ. ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕ ಮತ್ತು ತಮಿಳುನಾಡು ರಾಜಧಾನಿಗಳನ್ನು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ. ಈ ಹೆದ್ದಾರಿಯು ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮೂಲಕ ಹಾದುಹೋಗುತ್ತದೆ.
ಹೊಸಕೋಟೆ ,ಮಾಲೂರು, ಬಂಗಾರಪೇಟೆ ,ಕೋಲಾರ,ವೆಂಕಟಗಿರಿ, ಪಲಮನೇರ್,ಬಂಗಾರುಪಲ್ಲೆಂ,ಚಿತ್ತೂರು , ರಾಣಿಪೆಟ್ಟೈ ಮತ್ತು ಶ್ರೀಪೆರಂಬದೂರು ಪ್ರಧಾನಿ ನೇತೃತ್ವದಲ್ಲಿ ದೇಶಾದ್ಯಂತ ತಡೆರಹಿತ ಮತ್ತು ಪರಿಸರ ಪೂರಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಬದ್ಧರಾಗಿದ್ದೇವೆ.
– ನಿತಿನ್ ಗಡ್ಕರಿ, ಕೇಂದ್ರ ಸಚಿವ