Advertisement

ವೇಗದ ಡಿಜಿಟಲೀಕರಣದಲ್ಲಿ ಬೆಂಗಳೂರೇ ನಂ.1!

10:22 AM Nov 09, 2017 | |

ನವದೆಹಲಿ: ಅತಿ ವೇಗವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ವಿಶ್ವದ 45 ಮಹಾನಗರಗಳ ಪಟ್ಟಿಯಲ್ಲಿ ಉದ್ಯಾನ ನಗರಿ ಬೆಂಗಳೂರು ನಂಬರ್‌ ಒನ್‌ ಸ್ಥಾನ ಪಡೆದಿದೆ. ಈ ಹಿಂದೆ ಈ ಸ್ಥಾನದಲ್ಲಿದ್ದ ಸ್ಯಾನ್‌ಫ್ರಾನ್ಸಿಸ್ಕೋ ನಗರವನ್ನು ಈ ಬಾರಿ ಹಿಂದಿಕ್ಕಿರುವ ಬೆಂಗಳೂರು, ತನ್ನ ಅನೇಕ ಹಿರಿಮೆಗಳ ಸಾಲಿಗೆ ಹೊಸ ಹೆಗ್ಗಳಿಕೆಯೊಂದನ್ನು ಪಡೆದಿದೆ.

Advertisement

ಜನರ ಬದುಕು, ಸಾಮಾಜಿಕ ಚಟುವಟಿಕೆ, ಆರ್ಥಿಕ ವ್ಯವಹಾರಗಳು, ಕೈಗಾರಿಕೆ, ಉದ್ಯಮಶೀಲತೆ, ನವೀನ ತಂತ್ರಜ್ಞಾನ, ಮೂಲಸೌಕರ್ಯ ಇತ್ಯಾದಿ ಕ್ಷೇತ್ರಗಳಲ್ಲಿನ ಜನರು ಡಿಜಿಟಲೀಕರಣದತ್ತ ತೋರುತ್ತಿರುವ ಆಸಕ್ತಿಯನ್ನು ಆಧಾರವಾಗಿಟ್ಟುಕೊಂಡು “ಎಕನಾಮಿಕ್‌ ಇಂಟೆಲಿಜೆನ್ಸ್‌ ಯೂನಿಟ್‌’ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯ ಆಧಾರದಲ್ಲಿ ಈ ಪಟ್ಟಿ ತಯಾರಿಸಲಾಗಿದೆ. ಇಂದಿನ ಡಿಜಿ ಟಲ್‌ ಯುಗದಲ್ಲಿ ಹೂಡಿಕೆದಾರರ ಪಾಲಿಗೆ ಯಾವ ನಗರ ಅತಿ ಶ್ರೇಷ್ಠ ಎಂಬುದನ್ನು ತಿಳಿಸುವುದೇ ಈ ಸಮೀಕ್ಷೆಯ ಒಟ್ಟಾರೆ ಉದ್ದೇಶ.

ಜನರು ತಮ್ಮನ್ನು ತಾವು ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುತ್ತಿರುವ ಪ್ರಮಾಣ, ಕೈಗಾರಿಕೆ, ಆರ್ಥಿಕ, ತಂತ್ರಜ್ಞಾನ ಸೇರಿದಂತೆ ಹಲವಾರು ಔದ್ಯಮಿಕ ವಲಯಗಳೂ ಸಂಪೂರ್ಣ ಡಿಜಿಟಲೀಕರಣಗೊಳ್ಳಲು ತೋರುತ್ತಿರುವ ಆಸಕ್ತಿಗಳನ್ನೇ ಸಮೀಕ್ಷೆಯ ಮಾನದಂಡಗಳಾಗಿ ಬಳಸಿಕೊಳ್ಳಲಾಗಿದೆ.  ಅಂದಹಾಗೆ, ಈ ಪಟ್ಟಿಯ ಟಾಪ್‌ 10ರಲ್ಲಿ ಭಾರತದ ಮುಂಬೈ, ನವದೆಹಲಿಯೂ ಸೇರಿವೆ. ಮುಂಬೈ 3ನೇ
ಸ್ಥಾನದಲ್ಲಿದ್ದರೆ, ನವದೆಹಲಿ 4ನೇ ಸ್ಥಾನದಲ್ಲಿದೆ. ಸ್ವಾರಸ್ಯಕರ ವಿಚಾರವೆಂದರೆ, ಮುಂದುವರಿದ ನಗರ  ಗಳಾದ ಟೋಕಿಯೋ (18ನೇ ಸ್ಥಾನ), ಬರ್ಲಿನ್‌ (20ನೇ ಸ್ಥಾನ) ಪಟ್ಟಿಯ ಕೆಳ ಕ್ರಮಾಂಕ ಗಳಿಸಿವೆ. ಚೀನಾದ ರಾಜಧಾನಿ ಬೀಜಿಂಗ್‌ ಈ ಪಟ್ಟಿಯಲ್ಲಿ 5ನೇ
ಸ್ಥಾನದಲ್ಲಿದ್ದು, ಮನಿಲಾ, ಶಾಂಘೈ, ಜಕಾರ್ತಾ, ಲಂಡನ್‌ ಆನಂತರದ ಸ್ಥಾನಗಳಲ್ಲಿದ್ದರೆ, ಮ್ಯಾಡ್ರಿಡ್‌ ನಗರ ಟಾಪ್‌ 10ನೇ ಸ್ಥಾನ ಗಳಿಸಿದೆ.

ಸಮೀಕ್ಷೆಯ ಬಗ್ಗೆ ವರದಿಯನ್ನು ಸಲ್ಲಿಸಿರುವ ಎಕನಾಮಿಕ್ಸ್‌ ಇಂಟೆಲಿಜೆನ್ಸ್‌ ಯೂನಿಟ್‌ನ ತಜ್ಞ ಡೆನ್ನಿಸ್‌ ಮೆಕಾಲೆ, “”ಭಾರತದ ಹಲವಾರು ನಗರಗಳು ಮೂಲ ಸೌಕರ್ಯದ ಕೊರತೆ, ಮಾಲಿನ್ಯ, ಬಡತನ ಹಾಗೂ ಇನ್ನಿತರ ಕೊರತೆಗಳನ್ನು ಅನುಭವಿಸುತ್ತಿವೆ. ಆದರೆ, ಈ ನಗರಗಳು ಡಿಜಿಟಲೀಕರಣ ದತ್ತ ವಾಲುತ್ತಿರುವ ಧಾವಂತ, ಉತ್ಸಾಹಗಳು ಅಭಿವೃದ್ಧಿಗೊಂಡ ನಗರಗಳಿಂತ ಅತ್ಯಂತ ದೊಡ್ಡ ಮಟ್ಟದಲ್ಲಿವೆ” ಎಂದಿದ್ದಾರೆ. 

ಟಾಪ್‌ 10 ಪಟ್ಟಿ ಹೀಗಿದೆ
1. ಬೆಂಗಳೂರು
2. ಸ್ಯಾನ್‌ಫ್ರಾನ್ಸಿಸ್ಕೋ
3. ಮುಂಬೈ
4. ನವದೆಹಲಿ
5. ಬೀಜಿಂಗ್‌
6. ಮನಿಲಾ
7. ಶಾಂಘೈ
8. ಜಕಾರ್ತಾ
9. ಲಂಡನ್‌
10. ಮ್ಯಾಡ್ರಿಡ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next