ಜಗತ್ತಿನಲ್ಲೇ ಹೆಚ್ಚು “ಕೋಟ್ಯಧಿಪತಿಗಳನ್ನು ಉತ್ಪತ್ತಿ ಮಾಡುವ’ ಮೂರನೇ ಅತಿದೊಡ್ಡ ರಾಷ್ಟ್ರ ಎಂಬ ಖ್ಯಾತಿ ಯನ್ನು ಭಾರತ ಉಳಿಸಿ ಕೊಂಡಿದೆ. ದೇಶದಲ್ಲಿ ಒಟ್ಟು 187 ಬಿಲಿಯ ನೇರ್‌ಗಳು(16 ಹೊಸ ಸೇರ್ಪಡೆ) ವಾಸವಿದ್ದು, ಈ ಪೈಕಿ ಅತಿ ಹೆಚ್ಚು ಅಂದರೆ 126 ಮಂದಿ ಮುಂಬೈ, ನವದೆಹಲಿ ಮತ್ತು ಬೆಂಗಳೂರಲ್ಲೇ ಇದ್ದಾರೆ. “2023ರ ಹುರೂನ್ ಜಾಗತಿಕ ಶ್ರೀಮಂತರ ಪಟ್ಟಿ’ಯಲ್ಲಿ ದಾಖಲಾಗಿದೆ.
ಎಲ್ಲಿ ಎಷ್ಟು ಕೋಟ್ಯಧಿಪತಿಗಳು?
ಮುಂಬೈ : 66
ನವದೆಹಲಿ : 39
ಬೆಂಗಳೂರು : 21
ಆರೋಗ್ಯ ಕ್ಷೇತ್ರದವರೇ ಫಸ್ಟ್
ಆರೋಗ್ಯಸೇವಾ ಕ್ಷೇತ್ರದ ಮೂಲಕವೇ ಕೋಟ್ಯಧಿಪತಿಗಳಾದವರು ಸಂಖ್ಯೆ ಹೆಚ್ಚು ಎಂದು ವರದಿ ಹೇಳಿದೆ. 27 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನಾವಾಲ ಜಗತ್ತಿನಲ್ಲೇ ಅತಿ ಶ್ರೀಮಂತ ಹೆಲ್ತ್‌ಕೇರ್ ಬಿಲಿಯನೇರ್. ಬೈಜೂಸ್ ಸಹಸ್ಥಾಪಕ ಬೈಜು ರವೀಂದ್ರನ್ ಶಿಕ್ಷಣ ಕ್ಷೇತ್ರದಲ್ಲಿ ಕೋಟ್ಯಧಿಪತಿಯಾದವರಲ್ಲಿ ವಿಶ್ವದಲ್ಲೇ ಎರಡನೆಯವರು.