Advertisement

ಬೆಂಗಳೂರು: ಶತಕದಂಚಿನಲ್ಲಿ ಡೀಸೆಲ್‌

02:46 PM Oct 12, 2021 | |

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ಬೆಲೆ ಸೋಮವಾರ ಕ್ರಮವಾಗಿ ಪ್ರತೀ ಲೀಟರ್‌ಗೆ 30 ಪೈಸೆ, 35 ಪೈಸೆ ಏರಿಕೆ ಯಾಗಿದೆ. ಇದು ಸತತ ಏಳನೇ ದಿನದ ಬೆಲೆ ಏರಿಕೆಯಾಗಿದೆ.

Advertisement

ಹೀಗಾಗಿ ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಪ್ರತೀ ಲೀಟರ್‌ ಡೀಸೆಲ್‌ ದರ 100 ರೂ. ದಾಟಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ಗೆ 31 ಪೈಸೆ ಏರಿಕೆಯಾಗಿ, 108.08 ರೂ., ಪ್ರತೀ ಲೀಟರ್‌ ಡೀಸೆಲ್‌ಗೆ 37 ಪೈಸೆ ಏರಿಕೆ ಯಾಗಿ 98.89 ರೂ. ಆಗಿದೆ.

ನಿರಂತರ ದರ ಏರಿಕೆಯಿಂದಾಗಿ ಹೆಚ್ಚಿನ ನಗರ, ಪಟ್ಟಣಗಳಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ ದರ 100 ರೂ. ದಾಟಿದೆ.

ಕರ್ನಾಟಕದ ಬಳ್ಳಾರಿ, ಶಿರಸಿಯಲ್ಲಿ ಪ್ರತೀ ಲೀಟರ್‌ ಡೀಸೆಲ್‌ ದರ 100 ರೂ. ದಾಟಿದೆ. ಆರು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ಗೆ ಪ್ರತೀ ದಿನ ಸರಾಸರಿ 30 ಪೈಸೆ ಏರಿಕೆಯಾಗುತ್ತಿತ್ತು. ಆದರೆ ಸೋಮವಾರ ಡೀಸೆಲ್‌ಗೆ 35 ಪೈಸೆ ಏರಿಕೆಯಾಗಿ, ದಾಖಲೆ ನಿರ್ಮಿಸಿದೆ ಕರ್ನಾಟಕ-ಕೇರಳವಲ್ಲದೆ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಮಹಾರಾಷ್ಟ್ರ, ಛತ್ತೀಸ್‌ಗಢ‌, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ, ಲೇಹ್‌ನಲ್ಲಿ ಪ್ರತೀ ಲೀಟರ್‌ ಡೀಸೆಲ್‌ಗೆ 100 ರೂ. ದಾಟಿದೆ.

ಇದನ್ನೂ ಓದಿ:ಚೀನಾ ಉದ್ಧಟತನ: ಮಾತುಕತೆ ವಿಫ‌ಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ

Advertisement

ಎಂಟು ದಿನ: ಅ.2ರಿಂದ ಶುರುವಾಗಿ ಅ.11ರ ವರೆಗೆ ಬೆಂಗಳೂರಿನ ಲೆಕ್ಕಾಚಾರವನ್ನೇ ತೆಗೆದುಕೊಂಡರೆ ಪ್ರತೀ ಲೀಟರ್‌ ಪೆಟ್ರೋಲ್‌ಗೆ 2.64 ರೂ., ಪ್ರತೀ ಲೀಟರ್‌ ಡೀಸೆಲ್‌ಗೆ 3.19 ರೂ. ಏರಿಕೆ ಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ 80 ಅಮೆರಿಕನ್‌ ಡಾಲರ್‌ ಏರಿಕೆಯಾಗಿದೆ. ಒಂದು ತಿಂಗಳ ಹಿಂದೆ ಅದರ ಬೆಲೆ ಪ್ರತೀ ಬ್ಯಾರೆಲ್‌ಗೆ 72 ಡಾಲರ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next