Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಪಿ.ಡಿ. ಪೊನ್ನಪ್ಪ, ಅಶ್ಲೀಲ ಚಿತ್ರ ಪ್ರದರ್ಶನ ವಾಗಿಲ್ಲವೆಂದು ಅಧ್ಯಕ್ಷರು ಸಮರ್ಥನೆ ನೀಡುತ್ತಿದ್ದು, ಇದು ನಿಜವೇ ಆಗಿದ್ದಲ್ಲಿ ಸಂತೋಷ ಎಂದರು. ಆದರೆ, ಕೆಲವು ಅಧಿಕಾರಿಗಳು ಪ್ರದರ್ಶನವಾದ ಚಿತ್ರದ ಫೋಟೋ ತೆಗೆದಿದ್ದಾರೆ. ವಿಚಾರಣೆ ವೇಳೆ ಫೋಟೋ ಡಿಲೀಟ್ ಆಗಿದೆಯೆಂದು ಸಮಜಾಯಿಷಿಕೆ ನೀಡಿದ್ದಾರೆ. ಇದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದ್ದು, ಡಾಟಾ ಆಪರೇಟರ್ ಸಂಧ್ಯಾ ಅವರನ್ನು ಅಧ್ಯಕ್ಷರು ವಿಚಾರಣೆ ಮಾಡಬೇಕಾಗಿತ್ತೆಂದು ಅಭಿಪ್ರಾಯಪಟ್ಟರು.
Related Articles
Advertisement
ಈ ವಿಚಾರ ತಿಳಿಸಿದ ಅಧಿಕಾರಿಯ ಬಳಿ ತಾನು ಪ್ರಶ್ನಿಸಿದಾಗ ನೋಡಬಾರದ ಚಿತ್ರ ಪ್ರದರ್ಶನವಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ, ಇದೀಗ ಇಲ್ಲವೆಂದು ಹೇಳುತ್ತಿದ್ದಾರೆ. ಅಶ್ಲೀಲ ಚಿತ್ರವೇ ಅಲ್ಲದಿದ್ದರೆ ಫೋಟೋ ತೆಗೆಯುವ ಅಗತ್ಯವೇನಿತ್ತು, ಡಾಟಾ ಆಪರೇಟರ್ ಸಂಧ್ಯಾ ಅವರ ಬಳಿ ವಿಷಯ ತಿಳಿಸಿ ಡಿಜಿಟಲ್ ಸ್ಕ್ರೀನ್ ಆಫ್ ಮಾಡಿಸಿದ್ದು ಯಾಕೆ ಎಂದು ಪ್ರಶ್ನಿಸಿದರು. ಸರಕಾರದ ನಿಯಮಾವಳಿಯಂತೆ ಕಾರ್ಯ ನಿರ್ವಹಿಸದ ಡಾಟಾ ಆಪರೇಟರ್ ವಿರುದ್ಧ ಬೊಟ್ಟು ಮಾಡಲೇಬೇಕಾಗಿದೆ. ಸಂಧ್ಯಾ ಅವರ ಸಹೋದರ ಸೈಬರ್ ಕ್ರೆçಂ ವಿಭಾಗದಲ್ಲಿ ಕಾರ್ಯ ನಿರ್ವಹಿಸು ತ್ತಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಬಗ್ಗೆ ಸಂಶಯವಿದೆ. ಆದ್ದರಿಂದ ಬೆಂಗಳೂರು ಸೈಬರ್ ಕ್ರೈಂ ವಿಭಾಗ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಅಧ್ಯಕ್ಷರ ವಿರುದ್ಧ ಗೂಬೆ ಕೂರಿಸಿ ಕೆಟ್ಟ ರಾಜಕಾರಣ ಮಾಡುವ ಅಗತ್ಯವಿಲ್ಲವೆಂದ ರಮೇಶ್, ವೈಫೈ ಮೂಲಕ ಡಿಜಿಟಲ್ ಸ್ಕ್ರೀನ್‌ನಲ್ಲಿ ಚಿತ್ರ ಪ್ರದರ್ಶನವಾಗಲು ಸಾಧ್ಯವಿಲ್ಲವೆಂದರು.ಕಾಂಗ್ರೆಸ್ ಸದಸ್ಯ ನಂದ ಕುಮಾರ್ ವಿರುದ್ಧ ಅಸ ಮಾಧಾನ ವ್ಯಕ್ತಪಡಿಸಿದ ಅವರು, ನಾನು ಡಾಟಾ ಆಪರೇಟರ್‌ಗೆ ಕಿರುಕುಳ ನೀಡಿದ್ದೇ ಆಗಿದ್ದಲ್ಲಿ ನನ್ನ ವಿರುದ್ಧ ದೂರು ನೀಡಬಹುದಾಗಿತ್ತು. ಆದರೆ, ವಿನಾಕಾರಣ ಆರೋಪ ಹೊರಿಸಲಾಗುತ್ತಿದೆ. ಅಲ್ಲದೆ ನಂದಕುಮಾರ್ ಅವರು ಕೆಲವು ವ್ಯಕ್ತಿಗಳ ಮೂಲಕ ದೌರ್ಜನ್ಯ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ ಕೆ.ಎಸ್. ರಮೇಶ್, ಎಲ್ಲ ಕೇಸ್‌ಗಳನ್ನು ಎದುರಿಸಲು ಸಿದ್ಧವೆಂದರು. ಸದಸ್ಯ ನಂದಕುಮಾರ್ ಅವರು ನಿಯಮ ಬಾಹಿರವಾಗಿ ನಗರದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಮುಂದಾಗಿರುವುದು ಮತ್ತು ಅವರ ವಾಸದ ಮನೆ ಕಾನೂನಿಗೆ ವಿರುದ್ಧವಾಗಿ ನಿರ್ಮಾಣಗೊಂಡಿರುವ ಬಗ್ಗೆ ದಾಖಲೆ ಇದ್ದು ಸದ್ಯ ದಲ್ಲೆ ಬಹಿರಂಗಪಡಿಸಲಿದ್ದೇನೆ ಎಂದರು.