Advertisement

ಪತ್ನಿಯ ಶೀಲ ಶಂಕಿಸಿ ಗುಪ್ತಾಂಗಕ್ಕೆ ಇರಿದು ಹತ್ಯೆ

02:24 PM Jun 06, 2023 | Team Udayavani |

ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಗುಪ್ತಾಂಗ ಸೇರಿ ದೇಹದ ವಿವಿಧೆಡೆ ಹತ್ತಾರು ಬಾರಿ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ಬಸವೇಶ್ವರನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ರಾಜಾಜಿನಗರದ ಮಂಜುನಾಥನಗರ ನಿವಾಸಿ ನಾಗರತ್ನ (32) ಕೊಲೆಯಾದ ಮಹಿಳೆ.

ಈ ಸಂಬಂಧ ಆಕೆಯ ಪತಿ ಅಯ್ಯಪ್ಪ(35)ನನ್ನು ಬಂಧಿಸಲಾಗಿದೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅಯ್ಯಪ್ಪನ ಸಹೋದರಿ ಸಂಗೀತಾ ಅವರ ಪತಿ ರಾಜು ಎಂಬುವರ ಸಹೋದರಿ ಪುತ್ರ ಚಂದ್ರು ಎಂಬಾತ ಆರೋಪಿ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಅಯ್ಯಪ್ಪ 12 ವರ್ಷದ ಹಿಂದೆ ನಾಗರತ್ನರನ್ನು ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಪುತ್ರಿ ಇದ್ದಾರೆ. ಸಿ.ಟಿ. ಮಾರ್ಕೆಟ್‌ನಲ್ಲಿ ಅಯ್ಯಪ್ಪ ಕೂಲಿ ಕೆಲಸ ಮಾಡಿದರೆ, ನಾಗರತ್ನ ರಾಜಾಜಿನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ಹಿಂದೆ ಶಿವನಗರದ ಸಿದ್ಧಗಂಗಾ ಶಾಲೆಯ ಬಳಿಯ ಬಾಡಿಗೆ ಮನೆಯಲ್ಲಿ ದಂಪತಿ ನೆಲೆಸಿದ್ದರು. ಕಳೆದು ತಿಂಗಳ ಹಿಂದೆಯಷ್ಟೇ ಮಂಜುನಾಥ ನಗರದ ಬಾಡಿಗೆ ಮನೆಗೆ ಬಂದಿದ್ದರು ಎಂದು ಪೊಲೀಸರು ಹೇಳಿದರು.

ದೈಹಿಕ ಸಂಪರ್ಕಕ್ಕೆ ಅವಕಾಶ ನಿರಾಕರಣೆ: ಈ ಮಧ್ಯೆ ಅಯ್ಯಪ್ಪನಿಗೆ ತನ್ನ ಪತ್ನಿ ನಾಗರತ್ನಗೆ ಬೇರೆ ವ್ಯಕ್ತಿಯ ಜತೆ ಅನೈತಿಕ ಇರುವ ಅನುಮಾನವಿತ್ತು. ಈ ವಿಚಾರವಾಗಿ ದಂಪತಿ ನಡುವೆ ಪದೇ ಪದೆ ಗಲಾಟೆಯಾಗುತ್ತಿತ್ತು. ನಾಗರತ್ನ ನನ್ನ ಜತೆ ಮಲಗುವುದಿಲ್ಲ. ದೈಹಿಕ ಸಂಪರ್ಕ ಬೆಳೆಸಲು ಅವಕಾಶ ನೀಡುವುದಿಲ್ಲ ಎಂದು ಅಯ್ಯಪ್ಪ ಜಗಳ ಮಾಡುತ್ತಿದ್ದ. ಈ ವೇಳೆ ಅಯ್ಯಪ್ಪನ ಅಕ್ಕ ಸಂಗೀತಾ ಸೇರಿ ಸಂಬಂಧಿಕರು ರಾಜೀ-ಸಂಧಾನ ಮಾಡಿದ್ದರು. ಶಿವನಗರದಿಂದ ಮಂಜು ನಾಥನಗರದ ಬಾಡಿಗೆ ಮನೆಗೆ ಬಂದ ಬಳಿಕವೂ ದಂಪತಿ ನಡುವೆ ಇದೇ ವಿಚಾರಕ್ಕೆ ಜಗಳವಾಗುತ್ತಿತ್ತು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

Advertisement

ಪತ್ನಿ ಜನನಾಂಗಕ್ಕೆ ಚಾಕು ಇರಿದ: ಭಾನುವಾರ ರಾತ್ರಿ ಸಹ ದಂಪತಿ ನಡುವೆ ಅಕ್ರಮ ಸಂಬಂಧದ ವಿಚಾರವಾಗಿ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿ ಅಯ್ಯಪ್ಪ ಚಾಕು ತೆಗೆದು ನಾಗರತ್ನಳಿಗೆ ಹಲವು ಬಾರಿ ಇರಿದಿದ್ದಾನೆ. ಆಕೆಯ ಜನನಾಂಗಕ್ಕೂ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಯ್ಯಪ್ಪನ ಅಕ್ಕ ಸಂಗೀತಾಳ ಪತಿಯ ತಂಗಿಯ ಮಗ ಚಂದ್ರು ರಾತ್ರಿ 8.40 ಸುಮಾರಿಗೆ ಮನೆ ಬಳಿ ಬಂದಾಗ ನಾಗರತ್ನ ಬೆತ್ತಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ.

ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಂಬಂಧಿಕನ ಜತೆಗೆ ಬೆತ್ತಲಾಗಿದ್ದಳು?: ಮತ್ತೂಂದೆಡೆ ನಾಗರತ್ನ ಮೈಸೂರು ಮೂಲದ ಸಂಬಂಧಿಕ ಚಂದ್ರ ಎಂಬಾತನ ಜತೆಗೆ ಅನೈತಿಕ ಸಂಬಂಧ ಹೊಂದಿದ್ದರು. ಜೂ.3ರಂದು ಮನೆಯಲ್ಲಿ ನಾಗರತ್ನ ಮತ್ತು ಚಂದ್ರ ಬೆತ್ತಲಾಗಿ ಮಲಗಿದ್ದರು. ಇದನ್ನು ಕಂಡ ಅಯ್ಯಪ್ಪ, ಅವರಿಬ್ಬರು ಒಳಗೆ ಇರುವಾಗಲೇ ಹೊರಗಿನಿಂದ ಬಾಗಿಲ ಬೀಗ ಹಾಕಿ ಈ ವಿಚಾರವನ್ನು ಸಹೋದರಿ ಸಂಗೀತಾಳಿಗೆ ತಿಳಿಸಿದ್ದ. ಈ ವೇಳೆ ಮನೆ ಬಳಿ ಬಂದಿದ್ದ ಸಂಗೀತಾ ಅವರು, ನಾಗರತ್ನ ಮತ್ತು ಚಂದ್ರುಗೆ ಬುದ್ಧಿವಾದ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next