Advertisement

ಸ್ನಾನ ಮಾಡುತ್ತಿದ್ದ ಯುವತಿಯರ ವಿಡಿಯೋ ಚಿತ್ರೀಕರಣ: ಕುಂದಾಪುರ ಮೂಲದ ವ್ಯಕ್ತಿ ಬಂಧನ

11:44 AM May 25, 2023 | Team Udayavani |

ಬೆಂಗಳೂರು: ಸಹೋದ್ಯೋಗಿ ಯುವತಿಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದುಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಕುಂದಾಪುರ ಮೂಲದ ಆರೋಪಿಯನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಪಶ್ಚಿಮ ಬಂಗಾಳ ಮೂಲದ 22 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಕುಂದಾಪುರ ಮೂಲದ ರಘುರಾಮ್‌ ಎಂಬಾತನನ್ನು ಬಂಧಿಸಲಾಗಿದೆ.

ನಿಸರ್ಗ ಗಾರ್ಡನ್‌ನಲ್ಲಿ ಕ್ಯಾಟರಿಂಗ್‌ ನಡೆಸುತ್ತಿದ್ದ ರಘುರಾಮ್‌, ಪಶ್ಚಿಮ ಬಂಗಾಳ ಮೂಲದ ಇಬ್ಬರು ಯುವತಿಯರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಬಾಗ್‌ ಮನೆ ಟೆಕ್‌ಪಾರ್ಕ್‌ ಹಾಗೂ ಮತ್ತಿತರ ಕಡೆಗಳಿಗೆ ಕ್ಯಾಟರಿಂಗ್‌ ವ್ಯವಸ್ಥೆ ಕಲ್ಪಿಸುತ್ತಿದ್ದ. ಸಂತ್ರಸ್ತೆ ಕ್ಯಾಟರಿಂಗ್‌ ನ ಕ್ಯಾಷಿಯರ್‌ ಆಗಿದ್ದರೆ, ಆಕೆಯ ಸ್ನೇಹಿತೆ ಕೌಂಟರ್‌ ಮ್ಯಾನೇಜರ್‌ ಆಗಿದ್ದರು. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತೆ ಹಾಗೂ ಆರೋಪಿ ರಘುರಾಮ್‌ ನಿಸರ್ಗ ಗಾರ್ಡನ್‌ನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮೇ 12ರಂದು ದೂರುದಾರೆ ಸ್ನಾನ ಮಾಡಲು ಬಾತ್‌ ರೂಮಿಗೆ ಹೋಗಿದ್ದು, ಆಗ ಆರೋಪಿಯು ಬಾತ್‌ ರೂಮಿನ ಗೋಡೆಯ ಮೇಲಿನಿಂದ ಆಕೆ ಸ್ನಾನ ಮಾಡುವ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ. ಅದನ್ನು ಗಮನಿಸಿದ ಆಕೆಯ ಸ್ನೇಹಿತೆ ಜೋರಾಗಿ ಕೂಗಿಕೊಂಡಿದ್ದಾಳೆ. ನಂತರ ಆರೋಪಿಯ ಮೊಬೈಲ್‌ ಕಸಿದುಕೊಂಡಾಗ ಇಬ್ಬರು ಯುವತಿಯರು ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಸೆರೆಹಿಡಿದು ಸಂಗ್ರಹಿಸಿಕೊಂಡಿರುವುದು ಪತ್ತೆಯಾಗಿದೆ.

ಈ ಬಗ್ಗೆ ಪ್ರಶ್ನಿಸಿದಾಗ, ‘ತಾನು ಹೇಳಿದಂತೆ ಕೇಳಬೇಕು, ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕು. ಇಲ್ಲವಾದಲ್ಲಿ ವಿಡಿಯೋಗಳನ್ನು ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ’ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next