Advertisement

ಮಹದಾಯಿ ಬೇಡಿಕೆಯೊಂದಿಗೆ ಬೆಂಗಳೂರು ಚಲೋ

05:06 PM Jan 31, 2021 | Team Udayavani |

ನರಗುಂದ: ಮಹದಾಯಿ ಯೋಜನೆ ಕಾಮಗಾರಿಗೆ ಚಾಲನೆ ಹಾಗೂ ಗಡಿಭಾಗ ಬೆಳಗಾವಿ ವಿಷಯವಾಗಿ ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಕಡಿವಾಣ ಹಾಕಬೇಕು ಎಂಬುದು ಸೇರಿ ಪ್ರಮುಖ ಮೂರು ಬೇಡಿಕೆಗಳೊಂದಿಗೆ ಬೆಂಗಳೂರು ಚಲೋಗೆ ನಿರ್ಧರಿಸಲಾಗಿದೆ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಎಪಿಎಂಸಿಯ ಎ.ಪಿ. ಪಾಟೀಲರ ಗೋದಾಮಿನಲ್ಲಿ ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಸಭೆ ಬಳಿಕ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಗೆ ಒತ್ತಾಯಿಸಿ 2024ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಅವರು ಈ ನಿರ್ಧಾರ ಘೋಷಿಸಿದರು.

ಸಭೆಯಲ್ಲಿ ಮೂರು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಮಹದಾಯಿ ಯೋಜನೆ ಕಾಮಗಾರಿಗೆ ಚಾಲನೆ ನೀಡುವ ಜೊತೆಗೆ ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು. ಪದೇ ಪದೆ ಗಡಿ ತಂಟೆ ತೆಗೆಯುತ್ತಿರುವ ಮಹಾರಾಷ್ಟ್ರ ಸಿಎಂ ಉದ್ಧಟತನ ಹೇಳಿಕೆಗೆ ಕಡಿವಾಣ ಹಾಕಬೇಕು.

ನಂಜುಂಡಪ್ಪ ವರದಿ ಜಾರಿಗೊಳಿಸುವ ಮೂಲಕ ಈ ಹಿಂದೆ ನಿರ್ಧರಿಸಿದಂತೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಸೇರಿ 3 ಬೇಡಿಕೆಯೊಂದಿಗೆ ಬೆಂಗಳೂರು ಚಲೋಗೆ ನಿರ್ಧರಿಸಿದ್ದು, ಫೆಬ್ರುವರಿಯಲ್ಲಿ ದಿನಾಂಕ ನಿಗದಿ ಮಾಡಲಾಗುವುದು ಎಂದು ಸೊಬರದಮಠ ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ:ಯತ್ನಾಳ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳಲ್ಲ

Advertisement

ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಕಾರ್ಯದರ್ಶಿ ಎಸ್‌.ಬಿ. ಜೋಗಣ್ಣವರ, ರಾಘವೇಂದ್ರ ಗುಜಮಾಗಡಿ, ಮಲ್ಲಣ್ಣ ಆಲೇಕಾರ, ಮಲ್ಲು ಸವದಿ, ಶ್ರೀಶೈಲ ಮೇಟಿ, ಫಕೀರಪ್ಪ ಅಣ್ಣಿಗೇರಿ, ವಾಸು ಚವ್ಹಾಣ, ಜಯಪಾಲ ಮುತ್ತಿನ, ಚಿದಾನಂದ ಹುಬ್ಬಳ್ಳಿ, ಚಂದ್ರು ಹೊನವಾಡ, ನರೇಶ ಜೋಳದ, ಅರ್ಜುನ ಮಾನೆ, ಎಚ್‌.ಸಿ. ಹಿರೇಹೊಳಿ, ಮೃತ್ಯುಂಜಯ ಹಿರೇಮಠ, ರಾಮಪ್ಪ ಸಾಬಳೆ, ಜಗನ್ನಾಥ ಮುಧೋಳೆ, ಸುಭಾಷ ಗಿರೆಣ್ಣವರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next