Advertisement

ರೈತರಿಂದ ಬೆಂಗಳೂರು ಚಲೋ ಪಾದಯಾತ್ರೆ

06:21 PM Nov 04, 2022 | Team Udayavani |

ಅರಸಿಕೆರೆ: ರೈತರ ಬಗರ್‌ ಹುಕ್ಕುಂ ಸಾಗುವಳಿ ಭೂಮಿಗಳಿಗೆ ಸರ್ಕಾರ ಮಂಜೂರಾತಿ ಪತ್ರ ನೀಡಲು ಆದೇಶ ನೀಡಬೇಕು ಮತ್ತು ಕೃಷಿ ಕ್ಷೇತ್ರ ಅಭಿವೃದ್ಧಿಗೆ ಪೂರಕ ವಾದ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಕನ ಕೆಂಚೇನಹಳ್ಳಿ ಪ್ರಸನ್ನಕುಮಾರ್‌ ನೇತೃತ್ವ ದಲ್ಲಿ ಬೆಂಗಳೂರು ಚಲೋ ಪಾದ ಯಾತ್ರೆಗೆ ಗ್ರೇಡ್‌ 2 ತಹಸೀಲ್ದಾರ್‌ ಪಾಲಾಕ್ಷ ಅವರಿಗೆ ರೈತರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ನೀಡುವ
ಮೂಲಕ ಚಾಲನೆ ನೀಡಲಾಯಿತು.

Advertisement

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಕನಕೆಂಚೇನ ಹಳ್ಳಿ ಪ್ರಸನ್ನಕುಮಾರ್‌ ನೇತೃತ್ವದಲ್ಲಿ ತಾಲೂಕಿನ ಹಾರನಹಳ್ಳಿ ಸಮೀಪದ ಕನಕೆಂಚೆನಹಳ್ಳಿ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇಗು ಲ ದಲ್ಲಿ ಪೂಜೆ ಸಲ್ಲಿಸಿದರು.

ಜೇನುಕಲ್‌ ಸಿದ್ದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ರೈತಮುಖಂಡರು ಗ್ರೇಡ್‌ 2 ತಹಶೀಲ್ದಾರ್‌ ಪಾಲಾಕ್ಷ ಅವರಿಗೆ ರೈತರ ವಿವಿಧ ಬೇಡಿಕೆಗಳ ಮನವಿ ಪತ್ರ ನೀಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಈ ವೇಳೆ ಪ್ರಸನ್ನ ಕುಮಾರ್‌ ಮಾತನಾಡಿ, ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡು ಹೋಬಳಿ ಐದಳ್ಳ ಕಾವಲು ಪ್ರದೇಶದಲ್ಲಿ 2580 ಎಕರೆ ಸರ್ಕಾರಿ ಭೂಮಿಯನ್ನು ಕಳೆದ ಹತ್ತಾರು ವರ್ಷಗಳಿಂದ ರೈತರು ಬುಗರ್‌ ಹುಕ್ಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಸರ್ಕಾರ ಭೂ ಮಂಜೂರಾತಿಗೆ ಆದೇಶ ನೀಡಿ ಜೀವನಕ್ಕೆ ದಾರಿ ಮಾಡಿಕೊಡಬೇಕು. ಕಡಿಮೆ ದರದಲ್ಲಿ ರಸಗೊಬ್ಬರ ಪೂಸಬೇಕು. ಹತ್ತು ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿ ಸುವ
ಮೂಲಕ ಬಡ ರೈತರ ಆರ್ಥಿಕ ಅಭಿವೃದ್ಧಿ ಗೆ ಬೆಂಬಲ ನೀಡಬೇಕು ಎಂದು ಆಗ್ರಹಿಸಿ ನೂರಾರು ಸಂಖ್ಯೆಯ ಲ್ಲಿ ರೈತರೊಂದಿಗೆ ಬೆಂಗಳೂರು ಚಲೋ ಪಾದಯಾತ್ರೆ
ಕೈಗೊಳ್ಳಲಾಗಿದೆ ಎಂದರು.

ಪಾದಯಾತ್ರೆ ಮಾರ್ಗ: ತಿಪಟೂರು ಮಾರ್ಗವಾಗಿ ಕಿಬ್ಬನಹಳ್ಳಿ, ನಿಟ್ಟೂರು, ಗುಬ್ಬಿ, ತುಮಕೂರು, ಯಶವಂತಪುರ, ಮಲ್ಲೇಶ್ವರ ಮಾರ್ಗವಾಗಿ ನ.7 ರಂದು ಸೋಮವಾರ ಬೆಂಗಳೂರಿನ ವಿಧಾನಸೌಧ ತಲುಪಿ ಸಿಎಂಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

Advertisement

ಪಾದಯಾತ್ರೆಯಲ್ಲಿ ರೈತ ಸಂಘದ ಗೌರವ ಅಧ್ಯಕ್ಷ ಜವೇನಹಳ್ಳಿ ನಿಂಗಪ್ಪ, ಜಿಲ್ಲಾ ಸಂಚಾಲಕ ಅಯ್ಯೂಬ್‌ ಪಾಶ, ಜಿಲ್ಲಾ ಕಾರ್ಯಾಧ್ಯಕ್ಷ ಎಜಾಜ್‌ ಪಾಷಾ, ಮೊಹಮ್ಮದ್‌ ದಸ್ತಗೀರ್‌, ಬಾಣಾವರ ಕೋಟೆ ಬೀರಪ್ಪ, ಕುಶಾಲ್‌ ಕುಮಾರ್‌, ಶಾಂತಕುಮಾರ್‌, ಯೂನಸ್‌ ಪಟೇಲ್‌, ರೋಷನ್‌, ರಮೇಶ್‌ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next