Advertisement

ಅಖಾಡಕ್ಕೆ ಸಚಿನ್‌ ಅಭಿನಯದ “ಬೆಂಗಳೂರು ಬಾಯ್ಸ್ “

06:48 PM May 10, 2022 | Team Udayavani |

ಮಾಜಿ ಸಚಿವ ಚೆಲುವರಾಯಸ್ವಾಮಿ ಪುತ್ರ ಸಚಿನ್‌ ಅಭಿನಯದ “ಬೆಂಗಳೂರು ಬಾಯ್ಸ್ ‘ ಚಿತ್ರ ರಿಲೀಸ್‌ ಗೆ ರೆಡಿಯಾಗಿದೆ.

Advertisement

ಈ ಹಿಂದೆ “ಹ್ಯಾಪಿ ಬರ್ತ್‌ಡೇ’ ಸಿನಿಮಾ ಮೂಲಕ ಸ್ಯಾಂಡಲ್‌ ವುಡ್‌ಗೆ ಎಂಟ್ರಿ ಕೊಟ್ಟಿದ್ದ ಸಚಿನ್‌, ಇದೀಗ “ಬೆಂಗಳೂರು ಬಾಯ್ಸ್’ ಸಿನಿಮಾ ಮೂಲಕ ಸಚಿನ್‌ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಚಿತ್ರದ ಫ‌ಸ್ಟ್ ಲುಕ್‌ ಟೀಸರ್‌ ಬಿಡುಗಡೆಯಾಗಿದ್ದು , ಎಲ್ಲೆಡೆ ಮೆಚ್ಚುಗೆ ಪಾತ್ರವಾಗಿದೆ. ಹೊಸ ಉತ್ಸಾಹ, ಹುಮ್ಮಸ್ಸಿನೊಂದಿಗೆ ಸಚಿನ್‌, ಕಂಬ್ಯಾಕ್‌ ಆಗಿದ್ದು, ಈ ಬಾರಿ ಭರ್ಜರಿ ತಯಾರಿ ಮಾಡಿಕೊಂಡು ಮರಳುತ್ತಿದ್ದಾರೆ.

ಮಾಸ್‌ ಎಲಿಮೆಂಟ್ಸ್ ಕಥೆ ಆಧರಿಸಿರುವ “ಬೆಂಗಳೂರು ಬಾಯ್ಸ್’ ಸಿನಿಮಾಗಾಗಿ, ಆ್ಯಕ್ಟಿಂಗ್‌, ಡ್ಯಾನ್ಸಿಂಗ್‌ ಜೊತೆ ಫಿಟ್ನೆಸ್‌ ಕಡೆಗೂ ಹೆಚ್ಚಿನ ಗಮನ ಹರಿಸಿದ್ದಾರಂತೆ.

ಮಲ್ಟಿಸ್ಟಾರ್‌ ಚಿತ್ರವಾಗಿರುವ “ಬೆಂಗಳೂರು ಬಾಯ್ಸ್’ ಸಿನಿಮಾ ರೊಮ್ಯಾಂಟಿಕ್‌ ಕಾಮಿಡಿ ಮನರಂಜನೆಯ ಚಿತ್ರವಾಗಿದ್ದು, ಕಾಲೇಜು, ಎಮೋಷನ್‌, ಪ್ರೇಮ ಕತೆ ಹೀಗೆ ಎಲ್ಲ ಅಂಶಗಳೂ ಸಿನಿಮಾದಲ್ಲಿವೆಯಂತೆ. ವಿಕ್ರಮ್‌ ಕೆ ವೈ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್‌ ರಾವ್‌ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next