ಬೆಂಗಳೂರು: ಬಿಎಂಟಿಸಿ ಬಸ್ ಮೇಲೆ ಹರಿದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ನಗರದ ಭಟ್ಟರಹಳ್ಳಿಯಲ್ಲಿ ಇಂದು ನಡೆದಿದೆ.
ವಿದ್ಯಾರ್ಥಿನಿ ಲಾಯಶ್ರೀ (15) ಮೃತಪಟ್ಟವಳು.
ತಾಯಿ ಪ್ರಿಯಾದರ್ಶಿನಿ (45) ಎಂಬವರು ಬೈಕ್ ಚಾಲನೆ ಮಾಡುತ್ತಿದ್ದರು. ಮಕ್ಕಳಾದ ಬಾಲಕಿ ಲಾವ್ಯಶ್ರಿ, ಹಾಗೂ ಬಾಲಕ ಯಾಶ್ವಿನ್ ಹಿಂಬದಿ ಕೂತಿದ್ದರು. ಭಟ್ಟರಹಳ್ಳಿ ಸಿಗ್ನಲ್ ಬಳಿ ಬೈಕ್ ಸ್ಕಿಡ್ ಆದ ಪರಿಣಾಮ ತಾಯಿ ಹಾಗೂ ಮಗ ಎಡಗಡೆ ಬಿದ್ದರು. ಬಲಗಡೆ ಬಿದ್ದ ಬಾಲಕಿಗೆ ಹಿಂದೆ ಬಂದ ಬಸ್ ಡಿಕ್ಕಿಯಾಗಿತ್ತು.
ಬಾಲಕಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆ ಸೇರಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
Related Articles
ಪ್ರಿಯಾದರ್ಶಿನಿ ಹಾಗೂ ಬಾಲಕ ಯಾಶ್ವಿನ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.