Advertisement

ತಬ್ಬಲಿ ಮರಿಗಳಿಗೆ ಸಿಬ್ಬಂದಿಯೇ ಆಸರೆ  

03:35 PM Jun 04, 2023 | Team Udayavani |

ಆನೇಕಲ್‌: ತಾಯಿ ಚಿರತೆಯಿಂದ ದೂರಾಗಿ ತಂಬಲಿ ಆಗುವ ಚಿರತೆ ಮರಿಗಳನ್ನು, ಅಮ್ಮ ನಿರ್ಲಕ್ಷ್ಯಕ್ಕೆ ಒಳಗಾಗಿ ದೂರಾಗುವ ಹುಲಿ ಮರಿಗಳನ್ನು , ಜನ್ಮ ನೀಡದ ಕೂಡಲೆ ಮರಿಗಳೇ ಬೇಡ ಅನಿಸಿವು ಸಿಂಹ ಮರಿಗಳಿಗೆ ತಂದೆ, ತಾಯಿ , ಸಹೋದರರಂತೆ ಹಾಲುಣಿಸಿ, ಸಲುಹಿ, ದೊಡ್ಡವನ್ನಾಗಿಸುವ ಅನಾಥ ವನ್ಯ ಜೀವಿಗಳ ಪಾಲಿನ ಉಸಿರಾಗಿರುವ ತಂಡ ಒಂದು ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇದೆ.

Advertisement

ಸಫಾರಿ ಪ್ರಮುಖ: ರಾಜ್ಯದ ಪ್ರಮುಖ ಎರಡು ಮೃಗಾಲಯ ಗಳಲ್ಲಿ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾ ನವನವೂ ಒಂದು, ಇಲ್ಲಿ ನೂರಾರು ಪ್ರಬೇಧದ ಪ್ರಾಣಿಪಕ್ಷಿಗಳು ಆಶ್ರಯ ಪಡೆದಿವೆ. ಇದರಲ್ಲಿ ಸಫಾರಿ ಪ್ರಮುಖ ವಾದದ್ದು, ಇಲ್ಲಿ ಹುಲಿ, ಸಿಂಹ ಚಿರತೆ, ಸಸ್ಯಹಾರಿ ಪ್ರಾಣಿಗಳು ಕಾಣ ಸಿಗುತ್ತವೆ ಇದೇ ಉದ್ಯಾನವನದ ಪ್ರಮುಖ ಆಕರ್ಷಣೆ. ಉಳಿದಂತೆ ಚಿಟ್ಟೆ ಸಪಾರಿ, ಮೃಗಾಲಯ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿದೆ.

ಸಾವಿತ್ರಮ್ಮ ತಂಡದ ನಾಯಕಿ: ವನ್ಯಜೀವಿ ಚಿಕಿತ್ಸಾಲದಲ್ಲಿ ಉದ್ಯಾನವನದಲ್ಲಿನ ಎಲ್ಲ ಪ್ರಾಣಿ ಪಕ್ಷಿಗಳ ಆರೋಗ್ಯ ನೋಡಿ ಕೊಳ್ಳುವ ಜವಾಬ್ದಾರಿ ಇದೆ. ಇದರ ನಡುವೆ ರಾಜ್ಯದ ವಿವಿಧ ಭಾಗಗಲ್ಲಿ ತಾಯಿಯಿಂದ ತಪ್ಪಿಸಿಕೊಂಡ, ಚಿರತೆ ಮರಿ ಗಳು ಮತ್ತು ಉದ್ಯಾನವನದಲ್ಲಿರುವ ಹುಲಿ, ಸಿಂಹ ತನ್ನ ಮರಿಗಳನ್ನು ಪೋಷಿಸಲು ನಿರಾಕರಿಸಿದಾಗ ಅಂತಹ ತಬ್ಬಲಿ ಹುಲಿ, ಸಿಂಹ ಮರಿಗಳನ್ನು ಸಲುವುವ ಜವಾ ಬ್ದಾರಿ ಚಿಕಿತ್ಸಾಲ ಯದಲ್ಲಿ ಸಿಬ್ಬಂ ದಿಯ ಮೇಲಿ ರುತ್ತದೆ. ಇವರಲ್ಲಿ ಆಸ್ಪತ್ರೆಯ ಸಹಾ ಯಕಿ ಮತ್ತು ಪ್ರಾಣಿ ಪಾಲಕಿ ಸಾವಿತ್ರಮ್ಮ ತಂಡದ ನಾಯಕಿ ಯಂತಿದ್ದಾರೆ.

8 ಹುಡುಗರ ತಂಡ ಮೂರು ವೈದ್ಯರ ತಂಡ: ಮರಿಗಳನ್ನು ಅಥವ ಪ್ರಾಣಿಗಳನ್ನು ನೋಡಿ ಕೊಳ್ಳಲು ನನ್ನೊಂದಿಗೆ ಇನ್ನು 8 ಹುಡು ಗರ ತಂಡ 3 ವೈದ್ಯರ ತಂಡ ಕಚೇರಿ ಸಿಬ್ಬಂದಿ ಸಹ ಇದೆ. ಹಾಗಾಗಿ ಇಲ್ಲಿ ಯಾರೊ ಬ್ಬರೂ ಬರದಿದ್ದರೂ ಮತ್ತೂ ಬ್ಬರು ಆ ಪ್ರಾಣಿಯ ಪಾಲನೆಯಲ್ಲಿ ತೊಡಗು ವರು, ಹುಷಾರು ತಪ್ಪಿದಾಗ ವೈದ್ಯರ ಸೂಚನೆ ಮೇರೆಗೆ ಔಷಧಿ ಕೊಡು ವುದು, ಆಹಾರ ಕೊಡುವುದನ್ನು ನಾವು ಮಾಡು ತ್ತೇವೆ. ಸಹಜ ವಾಗಿ ನಮ್ಮ ಮಾತುಗಳು ಎಂಬುದಕ್ಕಿಂತ ನಮ್ಮ ಶಬ್ಧ, ನಮ್ಮ ಚಲನ ವಲನಗಳನ್ನು ಪ್ರಾಣಿಗಳು ಸೂಕ್ಷ್ಮವಾಗಿ ಗಮನಸಿ ಅದರಂತೆ ಪಾಲಿಸುತ್ತವೆ ಎಂದರು.

ಉದ್ಯಾನವನದ ಪ್ರಾಣಿ ಚಿಕಿ ತ್ಸಾಲಯದಲ್ಲಿನ ಸಹಾಯ ನಿದೇ ರ್ಶಕ ಉಮಾಶಂಕರ್‌ ನಮ್ಮಲ್ಲಿ 9 ಪ್ರಾಣಿ ಪಾಲಕರಿದ್ದು, ಇವರಲ್ಲಿ ಸಾವಿತ್ರಮ್ಮ ಹಿರಿಯ ಪ್ರಾಣಿ ಪಾಲಕಿ, ಇವರೊಂದಿಗೆ ವೈದ್ಯರಾದ ಮಂಜುನಾಥ, ಜಯ ಕುಮಾರ್‌ ಸೇರಿ ಎಲ್ಲ ಮರಿ ಗಳಿಗೆ ಆಶ್ರಯ ನೀಡ ಸಮಯಕ್ಕೆ ಸರಿಯಾಗಿ ಹಾಲು, ಆಹಾರ, ಔಷಧಿಗಳನ್ನು ನೀಡಿ ಸಲುಹು ತ್ತಿದ್ದಾರೆ ಎಂದರು.

Advertisement

ಮೈಸೂರು ಮೃಗಾಲಯದಲ್ಲಿ ಮರಿ ಗಳಿಗೆ ಆಶ್ರಯ ನೀಡು ತ್ತಾರೆ, ನಮ್ಮಲ್ಲೂ ಅದೇ ವ್ಯವಸ್ಥೆ ಇದೆ. ಇಲ್ಲಿ ವಿಶೇಷವಾಗಿ ನಾವು ಮರಿ ಗಳನ್ನು ಸಲುಹುವ ರೀತಿ, ನಮ್ಮ ಸಿಬ್ಬಂದಿಯ ಕಾಳಜಿ, ಪ್ರೀತಿ ಯಿಂದ ಮರಿಗಳು ಬೇಗೆ ಚೇತರಿ ಸಿಕೊಂಡು ತಾಯಿ ಯಿಂದ ದೂರ ಆದರೂ ನಮಗೆ ಬದುಕಿ ಸಿಕ್ಕಿತು ಎಂಬ ಭಾವದಿಂದ ಪ್ರಾಣಿಗಳು ಬೆಳೆಯುತ್ತವೆ ಎಂದರು.

ಅನಾಥ ಮರಿಗಳ ಮಹಾತಾಯಿ: ಕಳೆದ 22 ವರ್ಷಗಳ ಹಿಂದೆ ಅರಣ್ಯ ಕಾವಲು ಗಾರನಾಗಿ ಕೆಲಸ ಮಾಡುತ್ತಿದ್ದ ದೊಡ್ಡಿರಾಜ ಮೃತ ಪಟ್ಟಿದ್ದ, ಈ ಸಾವಿನ ಅನುಕಂಪದ ಆಧಾರದ ಮೇಲೆ ದೊಡ್ಡಿರಾಜನ ಹೆಂಡತಿಗೆ ಕೆಲಸ ನೀಡಲಾಗಿತ್ತು. ಅಂದು ಕೆಲಸಕ್ಕೆ ಬಂದ ಸಾವಿತ್ರಮ್ಮನೇ ಇಂದು ಅನಾಥ ಮರಿಗಳ ಮಹಾತಾಯಿ. ತಬ್ಬಲಿ ಮರಿಗಳ ಪಾಲನೆ, ಪೋಷಣೆಯ ತಂಡದ ನಾಯಕಿ.

ಪ್ರಾಣಿ ಪಾಲಕಿಯಾಗಿ ಸೇವೆ: ಹೀಗೆ ಬದುಕಿನ ಅನಿವಾರ್ಯತೆಗೆ ಕೆಲಸಕ್ಕೆ ಸೇರಿಕೊಂಡ ಸಾವಿತ್ರಮ್ಮ ಆರಂಭದಲ್ಲಿ ಕಚೇರಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ತದ ನಂತರ ಆಸ್ಪತ್ರೆಯ ಸಹಾಯಕಿ ಯಾಗಿ ಸೇವೆ ಸಲ್ಲಿಸುತ್ತ ಬಂದು ವರ್ಷಗಳು ಉರುಳಿದಂತೆ ವನ್ಯಜೀವಿಗಳ ತಬ್ಬಲಿ ಸೇವೆ ಮಾಡುತ್ತ ಸಾಗಿದರೂ ಕೆಲಸ ಸಾರಿ ಗಾಯಗೊಂಡ ಪ್ರಾಣಿಗಳ ಪಾಲನೆ. ಅನಾಥ ಮರಿಗಳ ಪಾಲನೆ ಮಾಡುತ್ತ ವರ್ಷಗಳು ಉರಳಿದಂತೆ ಪ್ರಾಣಿ ಪಾಲಕಿಯಾಗಿಯೂ ಮುಂಬಡ್ತಿ ಪಡೆದರು. ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳುವವರಿಗೆ ಮಕ್ಕಳ ತುಂಟಾಟ, ಚೇಷ್ಠೆ ಗಳನ್ನು ಸಹಿಸಿಕೊಂಡು ಅವುಗಳ ಬದುಕನ್ನು ಗಟ್ಟಿಗೊಳಿಸುವ ತಂಡವೇ ವನ್ಯಜೀವಿ ಚಿಕಿತ್ಸಾಲಯ ಪ್ರಾಣಿ ಪಾಲಕ ತಂಡ. ಸದ್ಯ ಚಿಕಿತ್ಸಾಲಯ ದಲ್ಲಿ ಹಿರಿಯ ಪ್ರಾಣಿ ಪಾಲಕಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಹೀಗೆ ಕಳೆದ 22 ವರ್ಷಗಳಲ್ಲಿ 60 ಚಿರತೆ ಮರಿಗಳ, 7 ಹುಲಿ ಮರಿಗಳು, 15 ಸಿಂಹದ ಮರಿಗಳುನ್ನು ಹಾಲುಣಿಸುವುದರ ಮೂಲಕ ಆರೋಗ್ಯವನ್ನು ಜೋಪಾನ ವಾಗಿ ಕಾಪಾಡಿಕೊಂಡು ದೊಡ್ಡವನ್ನಾಗಿಸಿದ್ದಾರೆ. ಇವರು ಬೆಳೆಸಿದ ಚಿರತೆ, ಸಿಂಹದ ಮರಿ ಗಳನ್ನು ರಾಜ್ಯದ ಬೇರೆ ಬೇರೆ ಮೃಗಾಲಗಳಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ನನ್ನ ಸೇವೆ ಪ್ರಾಣಿಗಳ ಪಾಲನೆಯಲ್ಲೇ: ಸಾವಿತ್ರಮ್ಮ : ಸಾವಿತ್ರಮ್ಮ ಮಾತನಾಡಿ, ಕಳೆದ 22 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ, ನನ್ನ ಗಂಡ ಇಲ್ಲೇ ಕೆಲಸ ಮಾಡುತ್ತಿದ್ದರು ಅವರ ಸಾವಿನ ಬಳಿಕ ಅನುಕಂಪದ ಆಧಾರದಿಂದ ಕೆಲಸ ಸಿಕ್ಕಿತು, ಅಂದಿನಿಂದ ನನ್ನ ಸೇವೆ ಪ್ರಾಣಿಗಳ ಪಾಲನೆಯಲ್ಲೇ ಇದೆ. ಪ್ರಾಣಿಗಳನ್ನು ಪಾಲನೆ ಮಾಡುವ ಯಾವುದೇ ಕೋರ್ಸ್‌ ಮಾಡಿಲ್ಲ, ಹಿರಿಯ ವೈದ್ಯರ ಸೂಚನೆ ಮೇರೆಗೆ ನಾವು ಮರಿಗಳನ್ನು ಪೋಷಿಸುವುದನ್ನು ಕಲಿತೆನು ಎಂದು ಅವರು ಹೇಳಿದರು. ಮರಿಗಳು ದೊಡ್ಡವು ಆಗುತಿದ್ದಂತೆ ತುಂಟಾಟ ಜಾಸ್ತಿ ಆಗುತ್ತದೆ, ಆಸಂದರ್ಭದಲ್ಲಿ ಎಚ್ಚರಿಕೆಯಿಂದ ಅವುಗಳನ್ನು ನೋಡಿಕೊಳ್ಳಬೇಕು ಇದ್ದರೂ ಹಲವು ಸಾರಿ ಕಚ್ಚಿದ್ದು, ಪರಚಿದ್ದು ಇದೆ, ಎಚ್ಚರಿಕೆ ಒಂದೇ ಮುನ್ನೆಎಚ್ಚರಿಕೆ ವಹಿಸಬೇಕಾಗುತ್ತದೆ ಎಂದರು. ಇಲ್ಲಿ ಬೆಳೆದವುಗಳಿಗೆ ನಾವು ಹೆಸರು ಇಡುವುದಿಲ್ಲ, ಆ ಮರಿ ಅಥವ ಪ್ರಾಣಿಯನ್ನು ದತ್ತು ಪಡೆದವರು ಬಯಸುವ ಹೆಸರು ಇಡಲಾಗುತ್ತದೆ. ನಾವು ಪೋಷಣೆ ಮಾಡುವಾಗ ಹೆಚ್ಚಾಗಿ ಮುದ್ದಿನಿಂದ ಚಿನ್ನ ಬಂಗಾರ, ಎಂದು ಸಹಜವಾಗಿ ಮಾತನಾಡಿಸುತ್ತೇವೆ ಎಂದರು.

300 ಸಿಬ್ಬಂದಿ ಹೊಂದಿರುವ ಉದ್ಯಾನವನ: ಸುಮಾರು 300 ಸಿಬ್ಬಂದಿ ಹೊಂದಿರುವ ಉದ್ಯಾನವನ ಹಲವು ಹಂತಗಳಲ್ಲಿ ಪ್ರತ್ಯೇಕ ಭಾಗಗಳಲ್ಲಿ ಕೆಲಸ ಮಾಡಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ವೈದ್ಯಕೀಯ ಸಿಬ್ಬಂದಿ ಇದೆ. ಇದೇ ತಂಡವೇ ಅನಾಥ ಮರಿಗಳ ಪಾಲಿನ ಅಮ್ಮ, ಅಪ್ಪ, ಅಣ್ಣನಂತೆ ಆಗಿರುವುದು.

ರಾಜ್ಯದ ವಿವಿಧ ಭಾಗಗಲ್ಲಿ ತಾಯಿಯಿಂದ ದೂರವಾದ ಹುಲಿ, ಚಿರತೆ, ಕರಡಿ, ಮರಿಗಳನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರಿಸುವುದು ವಾಡಿಕೆ. ಕಾರಣ ಇಲ್ಲಿ ಪ್ರಾಣಿ ಪುನರ್ವಸತಿ ಕೇಂದ್ರ ಇದೆ. ನುರಿತ ವೈದ್ಯಕೀಯ ತಂಡ ಇದೆ. ಹೀಗಾಗಿ ಇಲ್ಲಿಗೆ ಬರುವ ಪ್ರಾಣಿಗಳನ್ನು ನಮ್ಮ ಪ್ರಾಣಿ ಪಾಲಕರು ಅವರ ಮಕ್ಕಳಂತೆ ಸಾಕಿ ದೊಡ್ಡವನ್ನಾಗಿ ಮಾಡುತ್ತಾರೆ. – ಉಮಾಶಂಕರ್‌, ಉದ್ಯಾನವನದ ಪ್ರಾಣಿ ಚಿಕಿತ್ಸಾಲಯದಲ್ಲಿನ ಸಹಾಯ ನಿದೇರ್ಶಕ

ಸಹಜವಾಗಿ ಮೃಗಾಲಯಗಳಲ್ಲಿ ಹುಡುಗರು, ಪುರುಷರು ಮಾತ್ರ ಪ್ರಾಣಿ ಪಾಲಕ ರಾಗಿರುತ್ತಾರೆ. ನಮ್ಮಲ್ಲಿ ಮಾತ್ರ ಮಳೆ ಪ್ರಾಣಿ ಪಾಲಕಿಯಾಗಿರು ವುದು ವಿಶೇಷ, ಆಗಾಗಿ ಹಲವು ಅನಾಥ ಮರಿಗಳ ಪಾಲನೆಯ ಮಹಾತಾಯಿಯಾಗಿದ್ದಾರೆ. – ಜಯಕುಮಾರ್‌, ಪಶು ವೈದ್ಯ

– ಮಂಜುನಾಥ.ಎನ್‌ ಬನ್ನೇರುಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next