ಬೆಂಗಳೂರು: ಕಳೆದ ದಶಕದಲ್ಲಿ ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು 31 ಬಿಲಿಯನ್ ಡಾಲರ್ ಹೂಡಿಕೆ ಸಂಗ್ರಹಿಸಿದ್ದು, ಇದು ದೇಶದ ಸ್ಟಾರ್ಟ್‌ಅಪ್ ವ್ಯವಸ್ಥೆಯಲ್ಲಿನ ಒಟ್ಟು ಹೂಡಿಕೆಯ ಶೇ.45ರಷ್ಟಿದೆ ಎಂದು ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ನೀಡಿದ ವರದಿಯಲ್ಲಿ ಉಲ್ಲೇಖವಾಗಿದೆ. ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಸಿದ್ಧಪಡಿಸಿದ ಆವಿಷ್ಕಾರ್ ವರದಿ-2019 ಅನ್ನು ಗುರುವಾರ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಐಟಿ-ಬಿಟಿ ಇಲಾಖೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಬಿಡುಗಡೆ ಮಾಡಿದರು.
2016ರ ನಂತರ ದೆಹಲಿ ಮತ್ತು ಮುಂಬೈ ನಗರಗಳ ಒಟ್ಟು ಬಂಡವಾಳ ಸಂಗ್ರಹಕ್ಕಿಂತ 20 ಬಿಲಿಯನ್ ಡಾಲರ್ ಬಂಡವಾಳವನ್ನು ಬೆಂಗ ಳೂರು ಆಕರ್ಷಿಸಿದೆ. ನಗರ ಹೂಡಿಕೆಗೆ ಆದ್ಯತಾ ತಾಣವಾಗಿದ್ದು ದೇಶದ ಶೇ.55 ರಷ್ಟು ಸರಡಿ ಡಿ ಪ್ಲಸ್ ಹೂಡಿಕೆ ಸ್ಥಳೀಯ ಸ್ಟಾರ್ಟ್‌ಅಪ್‌ಗಳ ಪಾಲಾಗುತ್ತಿವೆ ಎಂದು ವರದಿಯಲ್ಲಿ ತಿಳಿಸಿದೆ.
ಡಿಜಿಟಲ್ ವಹಿವಾಟಿನಲ್ಲಿ ಅಗ್ರಸ್ಥಾನ: ಡಿಜಿಟಲ್ ವಹಿವಾಟಿನಲ್ಲಿ ದೇಶದಲ್ಲಿಯೇ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, ಪ್ರತಿ ವ್ಯಕ್ತಿ ತಿಂಗಳಿಗೆ ಡಿಜಿಟಲ್ ರೂಪದಲ್ಲಿ ಸರಾಸರಿ 8,600 ರೂ. ಪಾವತಿಸುತ್ತಿದ್ದಾನೆ. ಡಿಜಿಟಲ್ ವಹಿವಾಟಿಗೆ ಬೆಂಗಳೂರಿಗರು ಹೆಚ್ಚು ಒಲವು ತೋರಿದ್ದು, ಅಧಿಕ ವಹಿವಾಟಿಗೆ ಕಾರಣರಾಗಿದ್ದಾರೆ. ದೇಶದಲ್ಲಿ ನಡೆದಿರುವ ಒಟ್ಟು ಡಿಜಿಟಲ್ ವಹಿವಾಟಿನಲ್ಲಿ ಬೆಂಗಳೂರಿನಲ್ಲಿ ಶೇ.38.10 ರಷ್ಟು ನಡೆದಿದೆ. ಹೈದರಾಬಾದ್‌ನಲ್ಲಿ ಶೇ.12.50, ದೆಹಲಿಯಲ್ಲಿ ಶೇ.10.22, ಪುಣೆಯಲ್ಲಿ ಶೇ.9.50 ಹಾಗೂ ಮುಂಬೈನಲ್ಲಿ ಶೇ.6.78 ನಂತರದ ಸ್ಥಾನದಲ್ಲಿವೆ. ಬೆಂಗ ಳೂರು ನವೋದ್ಯಮದಲ್ಲಿ ಅಗ್ರ ಸ್ಥಾನದಲ್ಲಿದೆ. ಇಲ್ಲಿ ಅತಿ ಹೆಚ್ಚು ಉದ್ಯೋಗ ಅರ್ಹತೆ ದರವಿದ್ದು, ಈ ನಗರ ಉದ್ಯೋಗ ಆಯ್ಕೆಗೆ ಮಹಿಳೆಯರಿಗೆ ಪ್ರಥಮ ಆಯ್ಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತಂತ್ರಜ್ಞಾನ ಕೌಶಲ್ಯ: ಆನ್‌ಲೈನ್ ಶಾಪಿಂಗ್‌ನಲ್ಲಿಯೂ ನಗರ ಅಗ್ರಸ್ಥಾನ ಕಾಯ್ದುಕೊಂ ಡಿದ್ದು, ಶೇ.69 ಆನ್‌ಲೈನ್ ಖರೀದಿ ನಡೆದಿದೆ. ಈ ಪಟ್ಟಿಯಲ್ಲಿ ಮುಂಬೈ ಶೇ.65 ಮತ್ತು ದೆಹಲಿ ಶೇ.61ರಷ್ಟಿದ್ದು ಕ್ರಮವಾಗಿ ನಂತರದ ಸ್ಥಾನ ಪಡೆದುಕೊಂಡಿವೆ. ನಗರದ ಶೇ.44 ಮಂದಿ ತಂತ್ರಜ್ಞಾನ ಕೌಶಲ್ಯ ಹೊಂದಿದ್ದಾರೆ. ಈ ಪ್ರಮಾಣ ಚೆನ್ನೈನಲ್ಲಿ ಶೇ.38, ದೆಹಲಿಯಲ್ಲಿ ಶೇ.38 ಹಾಗೂ ಮುಂಬೈನಲ್ಲಿ ಶೇ.11 ರಷ್ಟು ಇದೆ ಎಂದು ವಿವರಿಸಲಾಗಿದೆ.
ವಿಶ್ವದ 780 ಪ್ರಮುಖ ನಗರಗಳಲ್ಲಿ ದೇಶದ 20ರಲ್ಲಿ 17 ನಗರ ಅತ್ಯಂತ ವೇಗವಾಗಿ ಬೆಳೆಯುವ ನಗರವಾಗಿ ಗುರುತಿಸಿಕೊಂಡಿದೆ. ಅದರಲ್ಲಿ ಬೆಂಗಳೂರು, ಹೈದರಾಬಾದ್, ಚೆನ್ನೈಗೆ ಹೆಚ್ಚಿನ ಅವಕಾಶಗಳಿವೆ. 2020- 2035ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಶೇ.8.50, ಡಾಕಾದಲ್ಲಿ ಶೇ.7.60, ಮುಂಬೈನಲ್ಲಿ ಶೇ.6.60, ದೆಹಲಿಯಲ್ಲಿ ಶೇ.6.50 ಮತ್ತು ವಿಶ್ವದ ಒಟ್ಟು ಸರಾಸರಿ ಶೇ.2.80 ಜಿಡಿಪಿ ಬೆಳ ವಣಿಗೆ ಆಗಲಿದೆ ಎಂದು ಅಂದಾಜಿಸಲಾಗಿದೆ.
800ಕ್ಕೂ ಅಧಿಕ ಕಾಲೇಜುಗಳ ತವರು: ಬೆಂಗಳೂರು ಸುಮಾರು 100ಕ್ಕೂ ಅಧಿಕ ಕಾಲೇಜು ಸೇರಿ 800ಕ್ಕೂ ಅಧಿಕ ಕಾಲೇಜುಗಳ ತವರು ಮನೆಯಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ನಿರ್ವಹಣಾ ಶಾಸ್ತ್ರ ಸಂಸ್ಥೆ, ಐಐಐಟಿ-ಜಿ ಮೊದಲಾದ ಶೈಕ್ಷಣಿಕ ಸಂಸ್ಥೆಗಳ ಆಗರ. 90 ಸಾವಿರಕ್ಕೂ ಅಧಿಕ ಎಂಜಿನಿಯರಿಂಗ್ ಪದವೀಧ ರರು ಪ್ರತಿ ವರ್ಷ ಈ ನಗರದಲ್ಲಿ ಸಿಗುತ್ತಿದ್ದಾರೆ.
ಬೆಂಗಳೂರಿಲ್ಲಿನ 25 ವರ್ಷದ ಶೇ.10, 25ರಿಂದ 30 ವರ್ಷದ ಶೇ.30, 30ರಿಂದ 40 ವರ್ಷದ ಶೇ.35ರಷ್ಟು ಹಾಗೂ ಶೇ.40ರಿಂದ 50 ವರ್ಷದ ಶೇ.12ರಷ್ಟು ನವೋದ್ಯಮಿ ಗಳಿದ್ದಾರೆ. ನವೋದ್ಯಮ ಸ್ಥಾಪನೆ ಮಾಡಿದವರಲ್ಲಿ ಶೇ.17 ಮಂದಿಗೆ 5 ವರ್ಷಗಳ ಅನುಭವ, ಶೇ.33ರಷ್ಟು ಮಂದಿಗೆ 5-10 ವರ್ಷ, ಶೇ.23ರಷ್ಟು ಮಂದಿಗೆ 10ರಿಂದ 15 ವರ್ಷ ಹಾಗೂ ಶೇ.15ರಷ್ಟು ಮಂದಿಗೆ 15ರಿಂದ 20 ವರ್ಷ ಅನುಭವವಿದೆ ಎಂದು ವರದಿ ತಿಳಿಸಿದೆ.