Advertisement

ಬೆಂಗಳೂರು 69 ಫೆ.10ಕ್ಕೆ ರಿಲೀಸ್‌

02:41 PM Feb 08, 2023 | Team Udayavani |

“ಬೆಂಗಳೂರು 69′- ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಫೆ.10 ರಂದು ತೆರೆಕಾಣುತ್ತಿದೆ. ಜಾಕೀರ್‌ ಹುಸೇನ್‌ ಕರೀಂಸಾಬ್‌ ಈ ಸಿನಿಮಾದ ನಿರ್ಮಾಪಕರು. ನಿರ್ದೇಶಕ ಕ್ರಾಂತಿ ಚೈತನ್ಯ ಅವರಿಗೆ ಇದು ಮೊದಲ ಚಿತ್ರ.

Advertisement

ಚಿತ್ರ ಬಿಡುಗಡೆಗೂ ಮುನ್ನ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿ ಯನಟರಾದ ಎಂ.ಎಸ್‌.ಉಮೇಶ್‌, ಬೆಂಗಳೂರು ನಾಗೇಶ್‌, ಹೊನ್ನವಳ್ಳಿ ಕೃಷ್ಣ, ಶೈಲಶ್ರೀ ಹಾಗೂ ಜಯಲಕ್ಷ್ಮೀ ಪಾಟೀಲ್‌ ಅವರನ್ನು ಸನ್ಮಾನಿಸಲಾಯಿತು.

“ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸ್ಟೋರಿ. ಜಗತ್ತಲ್ಲಿ ಪ್ರೀತಿ, ನಂಬಿಕೆ, ವ್ಯಾಮೋಹ, ಮೋಸ, ದ್ವೇಷ, ಅಸೂಯೆ, ಅಪರಾಧ ಹೀಗೆ ಎಲ್ಲವೂ ನಡೆಯುತ್ತಿದೆ. ಇದೂ ಕೂಡ ಒಂದು ಕಿಡ್ನ್ಯಾಪ್‌ ಕಥೆ. ಯಾಕೆ ಕಿಡ್ನ್ಯಾಪ್‌ ಆಗುತ್ತೆ, ಕಿಡ್ನ್ಯಾಪ್‌ ಮಾಡೋರು ಯಾರು, ಆಗೋರು ಯಾರು ಎಂಬುದೇ ಸಸ್ಪೆನ್ಸ್‌’ ಎಂದು ವಿವರ ಕೊಟ್ಟರು ನಿರ್ದೇಶಕ ಕ್ರಾಂತಿ ಚೈತನ್ಯ.

“ಬೆಂಗಳೂರು 69′ ಮೂಲಕ ಕನ್ನಡಕ್ಕೊಂದು ಹೊಸ ಬಗೆಯ ಚಿತ್ರ ಕೊಡುವ ಪ್ರಯತ್ನ ಮಾಡಿದ್ದೇನೆ. ಇದೊಂದು ಇಂಟರ್‌ನ್ಯಾಷನಲ್‌ ಕಾನ್ಸೆಪ್ಟ್ ಹೊಂದಿದೆ. ಕನ್ನಡಿಗರಿಗೆ ಈ ಚಿತ್ರ ಖಂಡಿತ ರುಚಿಸಲಿದೆ’ ಎಂಬುದು ತಂಡದ ಮಾತು. ನಾಯಕ ಪವನ್‌ “ಇಲ್ಲೊಂದು ವಿಶೇಷ ಕಥೆ ಇದೆ. ಪಾತ್ರಕ್ಕೂ ಅಷ್ಟೇ ಆದ್ಯತೆ ನೀಡಲಾಗಿದೆ. ಸಿನಿಮಾ ನೋಡುವ ಜನರಿಗೆ ಖಂಡಿತ ಖುಷಿಯಾಗುತ್ತೆ. ನಾನಿಲ್ಲಿ ಒಂದು ರೀತಿ ನೆಗೆಟಿವ್‌ ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ಪವನ್‌.

ಚಿತ್ರದಲ್ಲಿ ತೆಲುಗು ನಟ ಷಫಿ, ಅನಿತಾ ಭಟ್‌ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ವಿಕ್ರಂ ಚಂದನಾ ದಂಪತಿ ಸಂಗೀತ ನೀಡಿದ್ದು, ಚಿತ್ರದಲ್ಲಿ ಎರಡು ಹಾಡುಗಳಿವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next