ಗುಂಡ್ಲುಪೇಟೆ: ಕೊರೊನಾ ಸಮಸ್ಯೆಯಿಂದಾಗಿ ಜನಮನೆಗಳಲ್ಲಿ ಬಂಧನವಾದರೆ, ಕಾಡಿನಲ್ಲಿ ಪ್ರಾಣಿಗಳುಸ್ವತ್ಛಂದವಾಗಿ ವಿಹರಿಸುತ್ತಿವೆ. ಬಂಡೀಪುರದರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿಪ್ರಾಣಿಗಳ ದರ್ಶನ ಹೆಚ್ಚಾಗಿದ್ದು, ಜಿಂಕೆ, ಕಾಡೆಮ್ಮೆಆನೆ, ನವಿಲುಗಳಂತೂ ಹೆಜ್ಜೆ ಹೆಜ್ಜೆಗೂ ಕಾಣಿಸುತ್ತಿವೆ.
ಸೋಂಕು ಹೆಚ್ಚಳದ ಹಿನ್ನೆಲೆ ಬಂಡೀಪುರ ಸಫಾರಿಬಂದ್ ಮಾಡಲಾಗಿದ್ದು, ಕಾಡು ಪ್ರಾಣಿಗಳುಸ್ವತ್ಛಂದವಾಗಿ ವಿಹಾರ ಮಾಡುತ್ತಿವೆ. ಬಂಡೀಪುರಅರಣ್ಯ ವ್ಯಾಪ್ತಿಯಲ್ಲಿ ಉತ್ತಮ ಮಳೆ ಪರಿಣಾಮಸಣ್ಣಪುಟ್ಟ ಕೆರೆಗಳಲ್ಲಿ ನೀರು ನಿಂತಿದ್ದು, ಪ್ರಾಣಿಗಳಿಗೆನೀರಿನ ಸಮಸ್ಯೆ ದೂರವಾಗಿದೆ.
ಜೊತೆಗೆ ಕಾಡ್ಗಿಚ್ಚಿನಆತಂಕವೂ ಇಲ್ಲವಾಗಿದೆ.ಕೊರೊನಾ ಸಮಸ್ಯೆಗೂ ಮುಂಚೆ ರಸ್ತೆಯಲ್ಲಿಪ್ರಾಣಿಗಳನ್ನು ಕಂಡರೆ ಪ್ರವಾಸಿಗರು ಫೋಟೋತೆಗೆಯುವುದು, ಪ್ರಾಣಿಗಳನ್ನು ರೊಚ್ಚಿಗೇಳಿಸುವುದು, ಆಹಾರ ನೀಡುವುದನ್ನು ಮಾಡುತ್ತಿದ್ದರು.ಇದರಿಂದಾಗಿ ಪ್ರಾಣಿಗಳು ಹೆದರಿ ಕಾಡಿನೊಳಗೆಸೇರಿಕೊಳ್ಳುತ್ತಿದ್ದವು. ಇದೀಗ ಸರಕು ಸಾಗಣೆವಾಹನ ಬಿಟ್ಟರೆ ಉಳಿದ ವಾಹನಗಳ ಸಂಚಾರನಿಷೇಧವಾಗಿದ್ದು ರಸ್ತೆ ಬದಿಯಲ್ಲೇ ಪುಟ್ಟ ಮರಿಗಳೊಂದಿಗೆ ಮೇಯುತ್ತ ಇರುತ್ತದೆ.
ಇಂತಹ ದೃಶ್ಯಗಳನ್ನು ಪೊಲೀಸರು ಮತ್ತು ಗಡಿಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸೆ. ರಾಷ್ಟ್ರೀಯ ಹೆದ್ದಾರಿ 766ನಲ್ಲಿ ಹೆಚ್ಚುಜಿಂಕೆ, ನವಿಲು, ಆನೆಗಳು ಕಾಣ ಸಿಗುತ್ತವೆ. ಪ್ರಸ್ತುತಸಫಾರಿ ಇಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಸಂಚಾರ ಕಡಿಮೆ ಇದೆ. ಮನುಷ್ಯರ ಚಲನವಲನಕಡಿಮೆ ಇರುವುದರಿಂದ ಪ್ರಾಣಿಗಳು ನೆಮ್ಮದಿಯಾಗಿರಸ್ತೆ ಬದಿ ಮೇಯುತ್ತ ಇರುತ್ತದೆ. ಕೆಲ ಸಮಯದಲ್ಲಿ ರಸ್ತೆ ಮಧ್ಯೆ ಮಲಗಿರುತ್ತಿದ್ದ ದೃಶ್ಯಗಳನ್ನೂಕಂಡಿದ್ದೇವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಬಸವರಾಜು ಎಸ್.ಹಂಗಳ