Advertisement

ಬಂಡೀಪುರ ಝೋನ್‌ ವಿಂಗಡಣೆ

03:10 PM Dec 05, 2022 | Team Udayavani |

ಗುಂಡ್ಲುಪೇಟೆ: ಕಾಡಿನಲ್ಲಿರುವ ಪ್ರಾಣಿಗಳಿಗೆ ಸಫಾರಿ ವಾಹನಗಳಿಂದಾಗುವ ಕಿರಿಕಿರಿ ತಪ್ಪಿಸಲು ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ವಲಯವಾರು ಎ ಮತ್ತು ಬಿ ಝೊ ಝೋನ್‌ಗಳಾಗಿ ವಿಂಗಡಣೆಗೆ ನಿರ್ಧರಿಸಿದ್ದಾರೆ.

Advertisement

ಬಂಡೀಪುರ ಸಫಾರಿಗೆ ತೆರಳುವ ವಾಹನಗಳಿಗೆ ಒಂದು ವಲಯದಲ್ಲಿ ಪ್ರಾಣಿಗಳು ಕಂಡರೆ ಉಳಿದ ಸಫಾರಿ ಚಾಲಕರಿಗೆ ಫೋನ್‌ ಮೂಲಕ ಮಾಹಿತಿ ತಿಳಿಸಿ ಸ್ಥಳಕ್ಕೆ ಬರುವಂತೆ ಮಾಡುತ್ತಿದ್ದರು. ಇದರಿಂದಾಗಿ ಕಿರಿದಾದ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗುವ ಜೊತೆಗೆ ಹಳ್ಳಕೊಳ್ಳದಲ್ಲಿ ವಾಹನಗಳನ್ನು ಬಿಡುತ್ತಿದ್ದರು. ಈ ಕಾರಣದಿಂದ ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಕೆಲ ಪ್ರವಾಸಿಗರು ಹಿಂದೆ ಹುಲಿ ಯೋಜನೆನಿರ್ದೇಶಕರಾಗಿದ್ದ ಅಂಬಾಡಿ ಮಾಧವ್‌ ಅವರ ಗಮನಕ್ಕೆ ತಂದಿದ್ದರು. ಅಂದೇ ವಲಯವಾರುವಿಂಗಡನೆಗೆ ಚಿಂತನೆ ನಡೆಸಿದ್ದರು. ಆದರೆ, ಬಳಿಕ ಬಂದನಿರ್ದೇಶಕರು ಈ ಬಗ್ಗೆ ಗಮನ ಹರಿಸದ ಕಾರಣ, ಈ ಕಾರ್ಯ ಚಾಲ್ತಿಗೆ ಬರಲಿಲ್ಲ.

ಬಂಡೀಪುರ ಇದೀಗ 50ನೇ ವರ್ಷ ಆಚರಣೆಗೆ ಸಿದ್ಧವಾಗಿರುವುದರಿಂದ ಹೊಸ ಯೋಜನೆಗಳುಪ್ರವಾಸಿಗರಿಗೆ ಶಾಶ್ವತವಾಗಿ ಉಪಯೋಗ ಆಗಬೇಕು.ಈ ಉದ್ದೇಶದಿಂದ ಬಂಡೀಪುರ ಹುಲಿ ಯೋಜನೆನಿರ್ದೇಶಕ ಡಾ.ರಮೇಶ್‌ಕುಮಾರ್‌ ಸಫಾರಿಯನ್ನು ಎ ಮತ್ತು ಬಿ ಝೋನ್‌ ಗಳಾಗಿ ವಿಂಗಡಣೆ ಮಾಡಿ,ಪ್ರವಾಸಿಗರಿಗೆ ಹೆಚ್ಚಿನ ಸಫಾರಿ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ.

ಶೇ.20 ಪ್ರದೇಶದಲ್ಲಿ ಸಫಾರಿ: ಬಂಡೀಪುರ ಅರಣ್ಯದಶೇ.20 ಪ್ರದೇಶದಲ್ಲಿ ಸಫಾರಿ ಮಾಡಲು ಸ್ಥಳಾವಕಾಶವಿದೆ. ಆದರೆ, ಅನುದಾನದ ಕೊರತೆಯಿಂದ ಪ್ರಸ್ತುತ ಶೇ.8 ಪ್ರದೇಶದಲ್ಲಿ ಮಾತ್ರ ಮಾಡಲಾಗುತ್ತಿದೆ. ಇನ್ನೂ ಶೇ.12 ಮಾಡಲು ಅವಕಾಶವಿದೆ. ಉಳಿದ ಕಡೆ ಸಫಾರಿಗೆ ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಝೊàನ್‌ ವಿಂಗಡಣೆಗೆ ಮುಂದಾಗಿದೆ ಎನ್ನಲಾಗುತ್ತಿದೆ.

ಬಂಡೀಪುರ ಸಫಾರಿಯಲ್ಲಿ 31 ವಾಹನಗಳ ಸಂಚಾ ರಕ್ಕೆ ಅವಕಾಶವಿದೆ. ಆದರೆ, ಇದೀಗ ಸಫಾರಿಯಲ್ಲಿ ಕೇವಲ 26 ವಾಹನ ಮಾತ್ರಚಾಲನೆಯಲ್ಲಿದೆ. ಇದು ತುಂಬಾ ಕಡಿಮೆಯಾಗಿದ್ದು,ಬೇರೆ ರಾಜ್ಯ ಸಫಾರಿಗೆ ಹೊಲಿಕೆ ಮಾಡಿದರೆ ಅವುಗಳ ಶೇ.25ರಷ್ಟು ಇಲ್ಲಿ ಸಫಾರಿ ನಡೆಯುತ್ತಿಲ್ಲ. ಈ ಹಿನ್ನೆಲೆ ಸಫಾರಿಗೆ ಪ್ರವಾಸಿಗರನ್ನು ಸೆಳೆಯಬೇಕು ಎಂಬಉದ್ದೇಶದಿಂದ ಅರಣ್ಯ ಇಲಾಖೆ ಝೊàನ್‌ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

ಪ್ರವಾಸಿಗರು ಸಫಾರಿಗೆ ತೆರಳಿದ ವೇಳೆ ಅಭಯಾರಣ್ಯದಲ್ಲಿ ಎಲ್ಲೋ ಒಂದು ಕಡೆ ಹುಲಿ ಕಂಡರೆ ಎಲ್ಲಾ ವಾಹನಗಳು ಒಂದೇ ಕಡೆ ಜಮಾಯಿಸುತ್ತವೆ. ಇದರಿಂದ ಕಾಡುಪ್ರಾಣಿಗಳ ಸಾಮಾನ್ಯ ಜೀವನ ಶೈಲಿಗೆ ತೊಂದರೆ ಆಗುವುದನ್ನು ತಪ್ಪಿಸಲು ಎ ಮತ್ತು ಬಿ ಝೋನ್‌ ಗಳಾಗಿ ವಿಂಗಡಿಸಿ ಎ ಝೋನ್‌ನಲ್ಲಿ 13 ವಾಹನ ಮತ್ತು ಬಿ ಝೋನ್‌ ನಲ್ಲಿ 13 ವಾಹನಗಳು ಪ್ರತ್ಯೇಕವಾಗಿ ಸಂಚರಿಸುವಂತೆ ಮಾಡಲು ಉದ್ದೇಶಿಸಲಾಗಿದೆ.

ಬಂಡೀಪುರ ಸಫಾರಿಯಲ್ಲಿ ಎ ಮತ್ತು ಬಿ ಝೋನ್‌ ವಿಂಗಡಣೆಯಿಂದ ಪ್ರವಾಸಿಗರು ಕಿರಿಕಿರಿ ಇಲ್ಲದೆ ಸಫಾರಿ ಮಾಡಬಹುದಾಗಿದೆ. ಬಂಡೀಪುರ ಹುಲಿಸಂರಕ್ಷಿತ ಪ್ರದೇಶ 50 ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಶಾಶ್ವತವಾದ ಯೋಜನೆ ನೀಡಬೇಕು ಎಂಬ ಉದ್ದೇಶದಿಂದ ಝೋನ್‌ವ್ಯವಸ್ಥೆಗೆ ಚಿಂತನೆ ನಡೆಸಲಾಗಿದೆ.– ಡಾ.ರಮೇಶ್‌ ಕುಮಾರ್‌, ಬಂಡೀಪುರ ಹುಲಿ ಯೋಜನೆ ನಿರ್ದೇಶಕ.

– ಬಸವರಾಜು ಎಸ್‌.ಹಂಗಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next