Advertisement

ಬನವಾಸಿ ನೂತನ ಮಹಾಸ್ಯಂದನ ರಥೋತ್ಸವ ಮುಂದಕ್ಕೆ; ಕಾರಣವೇನು?

02:03 PM Mar 23, 2023 | Team Udayavani |

ಶಿರಸಿ: ಮಾರ್ಚ್ 23 ರಿಂದ 26 ರವರೆಗೆ ಹಮ್ಮಿಕೊಂಡಿದ್ದ ಬನವಾಸಿಯ ಮಹಾಸ್ಯಂದನ ರಥದ ವೈಭವ ರಥೋತ್ಸವವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.

Advertisement

ರಥ ಶಿಲ್ಪಿಯವರ ದೊಡ್ಡಪ್ಪ ನಾರಾಯಣ ಆಚಾರ್ಯರು ಅನಾರೋಗ್ಯದಿಂದ ಮಾ. 23 ರಂದು ವೈಕುಂಠವಾಸಿಗಳಾಗಿದ್ದರಿಂದ ರಥಶಿಲ್ಪಿಗಳಿಂದ ರಥ ಪರಿಗ್ರಹ ಮಾಡಲು ಶಾಸ್ತ್ರರೀತ್ಯ ಸಾಧ್ಯವಾಗದೆ ಇರುವುದರಿಂದ ನೂತನ ರಥದ ಸಮರ್ಪಣೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ನೂತನ ರಥಕ್ಕೆ ಸಂಬoಧಪಟ್ಟ ಕಾರ್ಯಕ್ರಮಗಳನ್ನು ನಿಗದಿಪಡಿಸಿ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಮಧುಕೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಶೇಖರ ಒಡೆಯರ ಹಾಗೂ ರಥ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಭಟ್ಟ ತಿಳಿಸಿದ್ದಾರೆ.

ಮಾ. 23 ರಂದು ಸಾಯಂಕಾಲ ತಿರುಗುಣಿ ತೇರು ಉತ್ಸವ ಮತ್ತು 24 ರ ಮಧ್ಯಾಹ್ನ ಹಳೆಯ ದೊಡ್ಡ ರಥೋತ್ಸವ ಮತ್ತು ಮಹಾರುದ್ರ ಹವನದ ಪೂರ್ಣಾಹುತಿ ನಡೆಯಲಿದೆ. ಮಾ.25 ಹಾಗೂ 26 ರಂದು ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು
ಪ್ರಕಟನೆಯಲ್ಲಿತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next