Advertisement

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗೆ ಬೆಂಕಿ : ಲಕ್ಷಾಂತರ ರೂ. ಮೌಲ್ಯದ ಸೊತ್ತು ಹಾನಿ

06:15 PM Jul 24, 2022 | Team Udayavani |

ರಬಕವಿ-ಬನಹಟ್ಟಿ: ಬನಹಟ್ಟಿಯ ಜಮಖಂಡಿ-ಕುಡಚಿ ರಸ್ತೆ ಪಕ್ಕದಲ್ಲಿನ ಕೆಜಿಎನ್ ಸ್ಟೀಲ್ ಹೌಸ್ ನ ಪತ್ರಾಸ ಹಾಗೂ ಬಣ್ಣದ ಅಂಗಡಿಯಲ್ಲಿ ಭಾನುವಾರ ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ ಬಣ್ಣದ ಡಬ್ಬಿಗಳು ಸುಟ್ಟು ಲಕ್ಷಾಂತರ ರೂ ಹಾನಿ ಸಂಭವಿಸಿದ ಘಟನೆ ನಡೆದಿದೆ.

Advertisement

ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ 112 ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಬೆಂಕಿಯನ್ನು ಆರಿಸಿ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

ಎಎಸ್‌ಐ ಮಾರುತಿ ಭಜಂತ್ರಿ, ಹೆಡ್‌ ಕಾನ್ಸ್ ಸ್ಟೇಬಲ್ ರಾಜು ಮನಗೂಳಿ, ಕಾನ್ಸ್ ಸ್ಟೇಬಲ್ ಬಸು ಸಾವನಲ್ ಹಾಗೂ ಅಗ್ನಿಶಾಮಕದಳದ ಅಧಿಕಾರಿಗಳು ಇದ್ದರು.

ಇದನ್ನೂ ಓದಿ : ಪ್ರತ್ಯೇಕ ಪ್ರಕರಣ: 24 ಗಂಟೆಯಲ್ಲಿ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next