Advertisement
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಹಾಗು ರಬಕವಿ ಪಟ್ಟಣದಲ್ಲೂ ನಿಷೇದಾಜ್ಞೆ ಮುಂದುವರೆಸಿದ್ದು, ಯಾವದೇ ರೀತಿ ರ‍್ಯಾಲಿ ಹಾಗು ಕಾರ್ಯಕ್ರಮಗಳಿಗೆ ನಿಷೇಧ ಹೇರಿರುವ ಹಿನ್ನಲೆ ಈಗಷ್ಟೇ ಪೊಲೀಸರ ಹತೋಟಿಯಲ್ಲಿ ಬನಹಟ್ಟಿ ನಗರವಿದ್ದು, ಎಲ್ಲೆಂದರಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಾಗಿದ್ದು, ಸೂಕ್ಷ್ಮ ಪ್ರದೇಶಗಳೆಂದು ಗುರ್ತಿಸಲಾದ ಸ್ಥಳಗಳಲ್ಲಿ ಪೊಲೀಸ್ ಹೆಚ್ಚಿನ ಬಂದೋಬಸ್ತ್ ಒದಗಿಸಿ ಚಿತ್ರೀಕರಣಗಳೂ ಸಹಿತ ನಡೆಯುತ್ತಿವೆ.
Related Articles
ಸೂಕ್ಷ್ಮವಾಗಿ ಗಮನಿಸುತ್ತಿರುವ ಜಿಲ್ಲಾಡಳಿತ: ಬನಹಟ್ಟಿಯಲ್ಲಿ ನಡೆದ ಘಟನೆಯನ್ನು ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಂದಿನ ದೃಶ್ಯಾವಳಿಗಳಿಂದ ಸಮಗ್ರ ಮಾಹಿತಿ ಪಡೆದು ಆರೋಪಿತರನ್ನು ಹುಡುಕಿ ತರುವಲ್ಲಿ ಜಾಣತನದ ಪ್ರದರ್ಶನ ತೋರಿಸುವಲ್ಲಿ ಕಾರಣವಾಗಿದೆ. ಕೆಲ ಕಿಡಿಗೇಡಿಗಳು ಪಟ್ಟಣದಿಂದ ಕಾಲ್ಕಿತ್ತಿದ್ದು, ಅವರ ಹುಡುಕಾಟದಲ್ಲಿಯೂ ತೀವ್ರ ಶೋಧಕಾರ್ಯ ನಡೆಸಿದ್ದಾರೆ.
Advertisement
ಖಾಸಗಿ ಸಮಾರಂಭಕ್ಕೆ ಅವಕಾಶ: ಮದುವೆ-ಮುಂಜಿವೆ, ವಾಸ್ತು ಶಾಂತಿ ಸೇರಿದಂತೆ ವಯಕ್ತಿಕ ಕಾರ್ಯಕ್ರಮಗಳಿಗೆ ಯಾವದೇ ರೀತಿ ಅಡ್ಡಿಪಡಿಸದೆ ಸರಾಗವಾಗಿ ಕಾರ್ಯಕ್ರಮಗಳು ನಡೆದಿರುವದು ಜನರಲ್ಲಿ ನೆಮ್ಮದಿ ತಂದಿದೆ.
ನಿತ್ಯ ಕಾರ್ಯನಿರ್ವಹಿಸುತ್ತಿದ್ದ ವ್ಯಾಪಾರಿಗಳೂ ಸಹಿತ ಬಂದ್‌ಗೆ ಬೇಸರ ವ್ಯಕ್ತಪಡಿಸಿ ತಮ್ಮ ತಮ್ಮ ಅಂಗಡಿ-ಮುಗ್ಗಟ್ಟುಗಳ ಮುಂದೆ ಹೈರಾಣಾಗಿ ಕುಳಿತಿದ್ದರು.