Advertisement

ಬೇಕೆ ಬೇಕು, ಡಿಜೆ ಬೇಕು: ಗಣಪತಿ ಮಂಡಳಿಯಿಂದ ಪ್ರತಿಭಟನೆ

08:08 PM Sep 11, 2021 | Team Udayavani |

ಬನಹಟ್ಟಿ : ಸರ್ಕಾರ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಕೂರಿಸಲು ಅನುಮತಿ ನೀಡಿದೆ. ಆದರೆ ಶುಕ್ರವಾರ ಮಧ್ಯಾಹ್ನ ತಾಲೂಕಿನ ಹೊಸುರನಲ್ಲಿ ಡಿ ಜೆ ಸಾಂಗ್ ಹಾಕಿಕೊಂಡು ಆಟೋ ಮತ್ತು ಟ್ರ‍್ಯಾಕ್ಟರ್ ಮೇಲೆ ಮೆರವಣಿಗೆ ಮಾಡುತ್ತಾ ಗಣಪತಿ ತರುವ ಸಂಧರ್ಭದಲ್ಲಿ ಪೊಲೀಸ್ ಇಲಾಖೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ಸೂಚಿಸಿದರು.ಇನ್ನೂ ಕೊರೊನಾ ಹಾವಳಿ ಮುಗಿದಿಲ್ಲ ಹೀಗಾಗಿ ಎಲ್ಲರೂ ಕೋವಿಡ್ ನಿಯಮ ಪಾಲಿಸಿ ಅಂತ ಸೂಚಿಸಿದರು.

Advertisement

ಆದರೆ ನಮಗೆ ಡಿಜೆ ಗೆ ಅನುಮತಿ ನೀಡುವವರೆಗೂ ನಾವು ಗಣಪತಿಯನ್ನು ಮುಂದೆ ಒಯ್ಯುವುದಿಲ್ಲ ಎಂದು ಗಣಪತಿ ಮಂಡಳಿ ರಸ್ತೆ ಮಧ್ಯೆಯೇ ಅನುಮತಿ ನೀಡಲು ತಾಲೂಕು ಆಡಳಿತಕ್ಕೆ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಕೂಡಾ ಸ್ಥಳ ಆಗಮಿಸಿ ಗಣಪತಿ ಮಂಡಳಿ ಅವರಿಗೆ ಮತ್ತು ಹೋರಾಟಕ್ಕೆ ಬೆಂಬಲಿಸಿದ ಮುಖಂಡರಿಗೂ, ಕಾರ್ಯಕರ್ತರಿಗೂ ಸರ್ಕಾರ ಯಾರು ಉಲ್ಲಂಘನೆ ಮಾಡುವುದು ಬೇಡ ಎಲ್ಲರೂ ಸಂತೋಷದಿಂದ ಖುಷಿಯಿಂದ ಆಚರಿಸಿ ಎಂದು ತಿಳಿ ಹೇಳಿದರು.

ಇದನ್ನೂ ಓದಿ:ಚೆಕ್ ಬೌನ್ಸ್:3.5 ಲಕ್ಷ ಪರಿಹಾರ, 6 ತಿಂಗಳ ಶಿಕ್ಷೆ

ಇದೇ ಸಂದರ್ಭದಲ್ಲಿ ತೇರದಾಳ ಶಾಸಕ ಸವದಿಯವರೊಂದಿಗೆ ಡಿಜೆ ಸೌಂಡಗೆ ಅನುಮತಿ ನೀಡಲು ವಾಗ್ವಾದ ಕೂಡ ಕೆಲ ಹೊತ್ತು ನಡೆಯಿತು.ತದ ನಂತರ ಪುನಃ ಗಣಪತಿ ಮಂಡಳಿಯವರು ರಾಮಸೇನೆ ಹಾಗೂ ಭಜರಂಗ ಧಳ ಸಂಘಟನೆಗಳ ಬೆಂಬಲದೊಂದಿಗೆ ಮತ್ತೆ ರಾತ್ರಿವರೆಗೂ ಕೂಡ ಅನುಮತಿ ಸಲುವಾಗಿ  ಹೋರಾಟ ಮುಂದುವರೆಯಿತು. ಶಾಸಕ ಸವದಿ ಸುಪುತ್ರ ವಿದ್ಯಾಧರ ಸವದಿ ಕೂಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು.

Advertisement

ವಾಹನಗಳನ್ನೆಲ್ಲಾ ತಡೆ ಹಿಡಿದು ಅನುಮತಿ ನೀಡಲೇ ಬೇಕೆಂದು ಗಣೇಶನ ಜೈಕಾರ ಹಾಕುತ್ತಾ ಹೋರಾಟ ಮುಂದುವರೆಸಿದರು. ವರ್ಷಕ್ಕೆ ಒಂದು ಬಾರಿ ಗಣೇಶನ ಹಬ್ಬ ಬರುತ್ತೆ ಆದ್ದರಿಂದ ಈ ಬಾರಿ ಡಿಜೆ ಗೆ ಅವಕಾಶ ನೀಡಬೇಕು. ಕಳೆದ ಎರಡು ವರ್ಷಗಳಿಂದ ಕೊರೊನಾ ಹಾವಳಿಯಿಂದ ವಿಜೃಂಭಣೆಯಿಂದ ಆಚರಣೆ ಮಾಡೇ ಮಾಡುತ್ತೇವೆ ಎಂದು ಸ್ಥಳೀಯ ಹಿಂದೂ ಪರ ಸಂಘಟನೆಗಳಿಂದ ಶಾಸಕರಿಗೆ ಅನುಮತಿ ನೀಡುವಂತೆ ಒತ್ತಾಯಿಸಲಾಯಿತು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಸಂಜಯ್ ಇಂಗಳೇ, ಸಿಪಿಐ ಕರುನೇಶಗೌಡ, ಪಿಎಸೈ ಸುರೇಶ ಮಂಟೂರ, ಹಾಗೂ ಮಹಾಲಿಂಗಪುರ ಪಿಎಸ್‌ಐ ವಿಜಯ ಕಾಂಬಳೆ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಜನರನ್ನು ನಿಯಂತ್ರಿಸುವಲ್ಲಿ ಕಾರ್ಯನಿರತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next