ಡೆಹ್ರಾಡೂನ್: ಪ್ರಸಿದ್ಧ ಕೇದರನಾಥ ದೇಗುಲದ ಗರ್ಭಗುಡಿ ಪ್ರವೇಶಕ್ಕೆ ಭಕ್ತಾದಿಗಳಿಗೆ ವಿಧಿಸಲಾಗಿದ್ದ ನಿಷೇಧವನ್ನು ಇದೀಗ ತೆಗೆದುಹಾಕಿರುವುದಾಗಿ ದೇವಸ್ಥಾನದ ಮಂಡಳಿ ತಿಳಿಸಿದೆ.
ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವ ಹಿನ್ನೆಲೆ ನಿಷೇಧ ಹಿಂಪಡೆಯಲಾಗಿದೆ.
ಮೇ ತಿಂಗಳಲ್ಲಿ ಕೇದರನಾಥ ಬಾಗಿಲು ತೆರೆದ ಸಮಯದಲ್ಲಿ ದಿನಕ್ಕೆ 16000-17000 ಭಕ್ತಾದಿಗಳು ದರ್ಶನಕ್ಕೆ ಬರುತ್ತಿದ್ದರು.
ಇದನ್ನೂ ಓದಿ:ವೀಕೇಂಡ್ : ದಕ್ಷಿಣಕಾಶಿ ಖ್ಯಾತಿಯ ಹಂಪಿಗೆ ಪ್ರವಾಸಿಗರ ದಂಡು, ದೇವರ ದರ್ಶನ ಪಡೆದ ಭಕ್ತರು
Related Articles
ಗರ್ಭಗುಡಿ ಚಿಕ್ಕದಾಗಿದ್ದು, ಅಲ್ಲಿ ಜನಜಂಗುಳಿಯಾಗಬಹುದು ಎನ್ನುವ ಕಾರಣಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ಈಗ ದಿನವೊಂದಕ್ಕೆ 2000-3000 ಭಕ್ತರು ದರ್ಶನಕ್ಕೆ ಬರುತ್ತಿದ್ದಾರೆ ಎಂದು ಭದ್ರಿನಾಥ-ಕೇದರನಾಥ ದೇವಸ್ಥಾನ ಸಮಿತಿ ಮುಖ್ಯಸ್ಥರಾಗಿರುವ ಅಜೇಂದ್ರ ಅಜಯ್ ತಿಳಿಸಿದ್ದಾರೆ.