Advertisement

ಪರೀಕ್ಷಾ ವ್ಯವಸ್ಥೆಗೆ ಬಿಎಎಂಎಸ್‌ ವಿದ್ಯಾರ್ಥಿಗಳ ವಿರೋಧ

10:40 PM Nov 12, 2021 | Team Udayavani |

ಬೆಂಗಳೂರು: ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ಕೇಂದ್ರ ಆಯುಷ್‌ ಸಚಿವಾಲಯದ ಅಡಿ ಯಲ್ಲಿ 2016ರಲ್ಲಿ ಇಂಡಿಯನ್‌ ಮೆಡಿಸಿನ್‌ ಸೆಂಟ್ರಲ್‌ ಕೌನ್ಸಿಲ್‌ನ ನಿಯ

Advertisement

ಮಗಳಿಗೆ ಕೆಲವು ತಿದ್ದುಪಡಿ ಮಾಡಿದ್ದು, ಅದರಲ್ಲಿ ಪರೀಕ್ಷಾ ನಿಯಮಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಿಲ್ಲ ಎಂದು ಕೆಲವು ಬಿಎಎಂಎಸ್‌ ವಿದ್ಯಾರ್ಥಿಗಳು ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂದಗಿಯ ಟಿಎಸ್‌ಪಿಎಫ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ದುಂಡಿರಾಜ್‌, ವಿದ್ಯಾ ರ್ಥಿಗಳ ಬದುಕಿಗೆ ಮಾರಕವಾಗಿ ರುವ ಪರೀಕ್ಷಾ ಪದ್ಧತಿಯನ್ನು ಹಿಂಪ ಡೆಯುವಂತೆ ಮನವಿ ಮಾಡಿದರು.

ಈ  ನಿಯಮದಿಂದಾಗಿ ವಿದ್ಯಾರ್ಥಿ ಯಾವುದೇ ನಾಲ್ಕು ವೃತ್ತಿಪರ ಪರೀಕ್ಷೆಗಳಲ್ಲಿ ನಾಲ್ಕು ಬಾರಿ ಅನುತೀರ್ಣರಾದರೆ ಮುಂದಿನ ಅಧ್ಯಯನಕ್ಕೆ ಅವಕಾಶವಿಲ್ಲ. ಈ ಹಿಂದೆ ಇಂತಹ ಪದ್ಧತಿ ಇರಲಿಲ್ಲ. ಒಂದು ಅಥವಾ ಎರಡು ವಿಷಯಗಳನ್ನು  ಉಳಿಸಿ ಕೊಂಡವರಿಗೆ ಈ  ನಿಯಮ ಅಡ್ಡಿಯಾಗಲಿದೆ. ಈ ಸಂಬಂಧ ವಿದ್ಯಾರ್ಥಿಗಳು ರಾಜೀವ್‌ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್‌ ಸೈನ್ಸ್‌ ಮುಂಭಾಗ ಪ್ರತಿಭಟನೆ ಮಾಡಿದ್ದರೂ ಪ್ರಯೋಜನವಾಗಿಲ್ಲ.  ಕೇಂದ್ರ ಮತ್ತು ರಾಜ್ಯ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದ್ದರೂ  ಪ್ರತಿಕ್ರಿಯೆ ಬಂದಿಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next