Advertisement

ಬಿಎಎಂಎಸ್‌ ಪರೀಕ್ಷೆಯಲ್ಲಿ “ಮಹಿಳೆಯು ಕಾಮೋತ್ತೇಜಕ ವಸ್ತು’ಪ್ರಶ್ನೆಗೆ ಭಾರೀ ಟೀಕೆ

08:52 AM Jun 17, 2022 | Team Udayavani |

ಬೆಂಗಳೂರು:  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯವು (ಆರ್‌ಜಿಯುಎಚ್‌ಎಸ್‌) ಬುಧವಾರ ನಡೆಸಿದ ಬಿಎಎಂಎಸ್‌ ಪರೀಕ್ಷೆಯಲ್ಲಿ “ಮಹಿಳೆಯನ್ನು ಅವ ಹೇಳನ’ ಮಾಡಿ ಪ್ರಶ್ನೆ ಕೇಳಲಾಗಿದೆ ಎಂದು ಸಾಮಾಜಿಕ ತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

Advertisement

ಬಿಎಎಂಎಸ್‌ ಕೋರ್ಸಿನ 4ನೇ ವರ್ಷದ ವಿದ್ಯಾರ್ಥಿಗಳಿಗೆ “ಕಾಯ ಚಿಕಿತ್ಸಾ: ಪತ್ರಿಕೆ-2′ ಎಂಬ ವಿಷಯದ ಪರೀಕ್ಷೆಯಲ್ಲಿ “ಮಹಿಳೆಯು ಕಾಮೋತ್ತೇಜಕ ವಸ್ತು’  ವಿಷಯ ದಲ್ಲಿ ಕಿರು ಪ್ರಬಂಧ ಬರೆಯುವಂತೆ 5 ಅಂಕಗಳ ಪ್ರಶ್ನೆ ಕೇಳಲಾಗಿದೆ.

 ಅವಹೇಳನ ಮಾಡಿಲ್ಲ, ಚಿಕಿತ್ಸೆಯ ಭಾಗ :

ಕಾಯ ಚಿಕಿತ್ಸಾ ಪರೀಕ್ಷೆಯಲ್ಲಿ ಮಹಿಳೆಯನ್ನು ಅವಹೇಳನ ಮಾಡಿಲ್ಲ. ಇದು ಚಿಕಿತ್ಸೆಯ ಭಾಗವೆಂದು ಪಠ್ಯದಲ್ಲೇ ತಿಳಿಸಲಾಗಿದೆ.   ಈ ಮೊದಲು ಕೂಡ ಇದೇ ಪ್ರಶ್ನೆಯನ್ನು ಸಾಕಷ್ಟು ಬಾರಿ ಕೇಳಲಾಗಿದೆ. ಮಹಿಳೆಯನ್ನು ಅವಹೇಳನ ಮಾಡುವ ಉದ್ದೇಶ ವಿಶ್ವವಿದ್ಯಾನಿಲಯಕ್ಕೆ ಇಲ್ಲ ಎಂದು ರಾಜೀವ್‌ ಗಾಂಧಿ ವಿವಿ ಮೌಲ್ಯಮಾಪನ ಕುಲಸಚಿವ ಡಾ| ಎನ್‌. ರಾಮಕೃಷ್ಣ ರೆಡ್ಡಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next