Advertisement
ಕಾಂಗ್ರೆಸ್ ಅಭ್ಯರ್ಥಿ ಕಳಲೆ ಎನ್.ಕೇಶವಮೂರ್ತಿ 86212 ಮತಗಳನ್ನು ಪಡೆದು ಜಯಭೇರಿ ಬಾರಿಸಿದರೆ, ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ 64878 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದಾರೆ.
Related Articles
Advertisement
9ನೇ ಸುತ್ತಿನಲ್ಲಿ ಕಾಂಗ್ರೆಸ್ 49634 ಮತ, ಬಿಜೆಪಿ 32218 ಮತ, 10ನೇ ಸುತ್ತಿನಲ್ಲಿ ಕಾಂಗ್ರೆಸ್ 53988 ಮತ, ಬಿಜೆಪಿ 37343 ಮತ, 11ನೇ ಸುತ್ತಿನಲ್ಲಿ ಕಾಂಗ್ರೆಸ್ 58261 ಮತ, ಬಿಜೆಪಿ 41945 ಮತ, 12ನೇ ಸುತ್ತಿನಲ್ಲಿ ಕಾಂಗ್ರೆಸ್ 63486, ಬಿಜೆಪಿ 45926 ಮತ, 13ನೇ ಸುತ್ತಿನಲ್ಲಿ ಕಾಂಗ್ರೆಸ್ 67922, ಬಿಜೆಪಿ 49615 ಮತ, 14ನೇ ಸುತ್ತಿನಲ್ಲಿ ಕಾಂಗ್ರೆಸ್ 72568, ಬಿಜೆಪಿ 54399 ಮತ,
15ನೇ ಸುತ್ತಿನಲ್ಲಿ ಕಾಂಗ್ರೆಸ್ 77372, ಬಿಜೆಪಿ 58144 ಮತ, 16ನೇ ಸುತ್ತಿನಲ್ಲಿ ಕಾಂಗ್ರೆಸ್ 81795, ಬಿಜೆಪಿ 62184 ಮತ, ಅಂತಿಮ ಸುತ್ತಿನಲ್ಲಿ ಬಿಜೆಪಿಯ 64878 ಮತಗಳನ್ನು ಪಡೆದು ಸೋಲನ್ನಪ್ಪಿದರೆ, ಕಾಂಗ್ರೆಸ್ ಅಭ್ಯರ್ಥಿ ಕಳಲೆ ಎನ್.ಕೇಶವಮೂರ್ತಿ 86212 ಮತಗಳನ್ನು ಪಡೆಯುವುದರೊಂದಿಗೆ ಗೆಲುವಿನ ನಗೆ ಬೀರಿದರು.
ಇನ್ನು ಉಪ ಚುನಾವಣೆಯ ಸ್ಪರ್ಧಾ ಕಣದಲ್ಲಿ ಉಳಿದಿದ್ದ 9 ಮಂದಿ ಪಕ್ಷೇತರ ಅಭ್ಯರ್ಥಿಗಳ ಪೈಕಿ ಯಾರೊಬ್ಬರೂ ಮತಗಳಿಕೆಯಲ್ಲಿ ಮೂರಂಕಿ ದಾಟಲಿಲ್ಲ. ಆದರೆ, ಕ್ಷೇತ್ರದ 1665 ಮತದಾರರು ನೋಟಾ ಒತ್ತಿದ್ದಾರೆ. ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ರಾಜೀನಾಮೆ ಯಿಂದ ತೆರವಾಗಿದ್ದ ಕ್ಷೇತ್ರಕ್ಕೆ ಏ.9ರಂದು ನಡೆದಿದ್ದ ಉಪ ಚುನಾವಣೆಯಲ್ಲಿ ಕ್ಷೇತ್ರದ 201818 ಮಂದಿ ಮತದಾರರ ಪೈಕಿ 156315 ಮಂದಿ ಮತದಾರರು ಹಕ್ಕು ಚಲಾಯಿಸಿದ್ದರು.
ಬೆಳಗ್ಗೆ 7.30ಕ್ಕೆ ಮತ ಎಣಿಕೆ ಕೇಂದ್ರಕ್ಕೆ ತಮ್ಮ ಮತ ಎಣಿಕೆ ಏಜೆಂಟರೊಂದಿಗೆ ಆಗಮಿಸಿದ ಕಳಲೆ ಕೇಶವಮೂರ್ತಿ ಮತ ಎಣಿಕೆ ಪೂರ್ಣಗೊಳ್ಳುವವರಿಗೆ ಹಾಜರಿದ್ದು, ಚುನಾವಣಾಧಿಕಾರಿಗಳಿಂದ ಗೆಲುವಿನ ಪ್ರಮಾಣ ಪತ್ರ ಪಡೆದ ನಂತರ ಮತ ಎಣಿಕೆ ಕೇಂದ್ರದಿಂದ ಹೊರಬಂದ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಹಾರ ಹಾಕಿ, ಹೆಗಲಮೇಲೆ ಹೊತ್ತು ಜೈಕಾರ ಕೂಗಿ ಸಂಭ್ರಮಿಸಿದರು.