Advertisement

ಬರಗಾಲ ನಿವಾರಣೆಗೆ ‘ಬ್ಯಾಂಬೂ ಕ್ಯಾಪಿಟಲ್’

12:53 AM Jun 01, 2019 | Team Udayavani |

ಕಾಸರಗೋಡು: ಜಿಲ್ಲೆ ಅನುಭವಿಸುತ್ತಿರುವ ಕುಡಿಯುವ ನೀರಿನ ತೀವ್ರ ಬರದ ಶಾಶ್ವತ ಪರಿ ಹಾರ ಮತ್ತು ವಿವಿಧೋದ್ದೇಶ ಗುರಿ ಯಾಗಿಸಿ ಜಿಲ್ಲಾಡಳಿತ ರಚಿಸಿರುವ ಬ್ಯಾಂಬೂ ಕ್ಯಾಪಿಟಲ್ ಯೋಜನೆಯ ಚಟುವಟಿಕೆಗಳು ಪ್ರಗತಿ ಸಾಧಿಸುತ್ತಿವೆ. ಈ ಯೋಜನೆ ಪೂರ್ಣಗೊಳ್ಳುವುದರೊಂದಿಗೆ ಜಿಲ್ಲೆ ದಕ್ಷಿಣ ಭಾರತದ ಬಿದಿರು ರಾಜಧಾನಿಯಾಗಿ ಪರಿವರ್ತನೆಗೊಳ್ಳಲಿದೆ.

Advertisement

ಮೊದಲ ಹಂತದಲ್ಲಿ ಯೋಜನೆಯ ಅಂಗವಾಗಿ ಕಾಸರಗೋಡು, ಮಂಜೇ ಶ್ವರ ಬ್ಲಾಕ್‌ಗಳಲ್ಲಿ ಬಿದಿರು ಸಸಿ ಗಳನ್ನು ಸಿದ್ಧಪಡಿಸಲಾಗುತ್ತಿದೆ. 13 ಗ್ರಾ.ಪಂ.ಗಳಲ್ಲಿ ಸಸಿಗಳನ್ನು ನೆಡುವ ಗುಂಡಿ ನಿರ್ಮಾಣ ತ್ವರಿತಗತಿಯಲ್ಲಿ ನಡೆದುಬರುತ್ತಿದೆ. ಈ ಯೋಜನೆ ಸಂಬಂಧ ಪೈವಳಿಕೆ ಗ್ರಾಮ ಪಂಚಾಯತ್‌ನಲ್ಲಿ ಆರಂಭಿಸಲಾದ ಜಿಲ್ಲೆಯ ಮೊದಲ ಬಿದಿರು ನರ್ಸರಿಯಲ್ಲಿ ಈಗಾಗಲೇ ಹತ್ತು ಸಾವಿರ ಸಸಿಗಳನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಈ ಸಸಿಗಳು ಎರಡು ಫೀಟ್ ಉದ್ದ ಬೆಳೆದಿವೆ. ಅಗತ್ಯವಿರುವ ಉಳಿದ ಸಸಿಗಳು ಮೇ ತಿಂಗಳ ಕೊನೆಯಲ್ಲಿ ತಯಾರಾಗಲಿವೆ.

ಯೋಜನೆಯ ಅಂಗವಾಗಿ ಜಿಲ್ಲೆ ಯಲ್ಲಿ ಒಟ್ಟು 3 ಲಕ್ಷ ಬಿದಿರು ಸಸಿ ಗಳನ್ನು ನೆಡಲಾಗುವುದು. ಗುಣಾಂಶ ಅಧಿಕ ವಾಗಿರುವ ಭಾರತದಲ್ಲಿ ಸರ್ವ ಸಾಮಾನ್ಯವಾಗಿರುವ ‘ಕಲ್ಲನ್‌ ಬಿದಿರು’ ಸಸಿಗಳನ್ನು ಈ ಯೋಜನೆಗಾಗಿ ಬಳಸ ಲಾಗುವುದು. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ಉದ್ದಿಮೆ ವಲಯ ಕಡಿಮೆಯಾಗಿದ್ದು, ಕಂದಾಯ ಜಾಗಗಳು ಬರಡಾಗಿವೆ. ಒಣಗಿದ ಸ್ಥಿತಿಯಲ್ಲಿರುವ ಇಂಥಾ ಲ್ಯಾಟರೈಟ್ ಭೂಪ್ರದೇಶವನ್ನು ಹಸುರು ಗೊಳಿಸುವ ನಿಟ್ಟಿನಲ್ಲಿ ವಿವಿಧ ಯೋಜನೆ ಗಳು ಸಿದ್ಧವಾಗುತ್ತಿವೆ. ಹರಿದು ಹೋಗುವ ನೀರನ್ನು ತಡೆದು ಮಣ್ಣಿನಡಿ ರವಾನಿಸುವ ನಿಟ್ಟಿನಲ್ಲಿ ಬಿದಿರು ಸಸಿಗಳು ಪ್ರಧಾನವಾಗಿವೆ. ಅನೇಕ ನದಿಗಳಿದ್ದೂ ಬೇಸಗೆಯಲ್ಲಿ ಕಡು ನೀರಿನ ಬರ ಅನುಭವಿಸುವ ಜಿಲ್ಲೆಯ ಪುನಶ್ಚೇತನಕ್ಕೆ ಈ ಯೋಜನೆ ಪೂರಕವಾಗಿದೆ. ಭೂಗರ್ಭ ಜಲ ಹೆಚ್ಚಳ, ಮೌಲ್ಯಯುತ ಉತ್ಪನ್ನ ಗಳ ತಯಾರಿಕೆಗೆ ಬಿದಿರು ಉದ್ದಿಮೆ ಸಕಾರಾತ್ಮಕವಾಗಿದೆ.

ಪಂಚಾಯತ್‌ನ 19 ವಾರ್ಡ್‌ ಗಳಲ್ಲಿ ತಲಾ 1.300 ಸಸಿಗಳಂತೆ 24,700 ಬಿದಿರು ಸಸಿಗಳನ್ನು ನೆಡಲಾಗುವುದು. 150 ಮಂದಿ ಉದ್ಯೋಗ ಖಾತರಿ ಕಾರ್ಮಿಕರು ಸಸಿ ನೆಡುವಿಕೆಯ ಗುಳಿ ತೋಡುವ ಕಾರ್ಯದಲ್ಲಿದ್ದಾರೆ. ಈ ಗುಳಿಗಳಲ್ಲಿ ಹಾಕಲಾಗುವ ಜೈವಿಕ ಗೊಬ್ಬರ ನಿರ್ಮಾಣಕ್ಕಾಗಿ ಪಂಚಾಯತ್‌ನಲ್ಲಿ 8 ಗೊಬ್ಬರ ಗುಂಡಿಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಜೈವಿಕ ತ್ಯಾಜ್ಯ ಮತ್ತು ಸೆಗಣಿ ಬೆರೆಸಿ ಈ ವರ್ಷ ಎಪ್ರಿಲ್ನಲ್ಲಿ ಗೊಬ್ಬರ ನಿರ್ಮಾಣ ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next