ಬೆಳ್ತಂಗಡಿ: ಬಾಳೂರು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಬೆಂಕಿಯು ಬೆಳ್ತಂಗಡಿ ಅರಣ್ಯ ಇಲಾಖೆಯ ಅರಣ್ಯದ ಕಡೆ ಹಬ್ಬದಂತೆ ಐದಾರು ದಿನದಿಂದ ನಡೆಯುತ್ತಿದ್ದ ಕಾರ್ಯಾಚರಣೆ ಸಫಲಗೊಂಡಿದೆ.
ಮಧುಗುಂಡಿ ಹಾಗೂ ಬಂಡಾಜೆ ಫಾಲ್ಸ್ ಮಧ್ಯಭಾಗದ ಬೆಂಕಿಯು ಆರತೊಡಗಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ಶಾಂತವಾಗಿದೆ. ಬೆಂಕಿ ಹರಡದಂತೆ ಬೆಂಕಿರೇಖೆ ನಿರ್ಮಿಸಿ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಆದರೆ ಮರದ ಪೊಟರೆಗಳಲ್ಲಿ ಬೂದಿಯೊಳಗಿರುವ ಬೆಂಕಿ ಬಿಸಿಲಿಗೆ ಮತ್ತೆ ಏರಿಕೆಯಾಗುತ್ತದೋ ಎಂಬ ಆತಂಕವಿದೆ.
ಈ ಮಧ್ಯೆ ಮುಂಡಾಜೆ ಸಮೀಪ ಹೆದ್ದಾರಿ ಬದಿ ವಿದ್ಯುತ್ ಕಂಬಗಳಿಗೆ ಸುತ್ತಿರುವ ಬಳ್ಳಿಗಳಿಂದ ವಿದ್ಯುತ್ ಪ್ರವಹಿಸಿ ಬೆಂಕಿ ಉಂಟಾಗಿತ್ತು. ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ವಿದ್ಯುತ್ ಕಂಬಗಳಿಗೆ ಹಬ್ಬಿದ ಬಳ್ಳಿಗಳನ್ನು ತೆರವುಗೊಳಿಸದ ಪರಿಣಾಮ ವಿದ್ಯುತ್ ಸ್ಪರ್ಶಿಸಿ ಬೆಂಕಿ ಹೆಚ್ಚಾಗಲು ಕಾರಣವಾಗುತ್ತಿದೆ.