Advertisement
ಬಳ್ಳಾರಿ/ವಿಜಯನಗರ ಜಿಲ್ಲೆಗಳ ಬಹುತೇಕ ಗ್ರಾಮಗಳಿಗೂ ಕೋವಿಡ್ ಸೋಂಕು ಆವರಿಸಿದ್ದು, ನೂರಾರು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಅದರಂತೆ ತಾಲೂಕಿನ ಡಿ.ಕಗ್ಗಲ್ ಗ್ರಾಮಕೂ ಸೋಂಕು ವ್ಯಾಪಿಸಿದೆ. ಗ್ರಾಮವನ್ನು ಕೊರೊನಾದಿಂದ ದೂರವಾಗಿಸಲು, ಮುಕ್ತಗೊಳಿಸಲು ಮೌಢ್ಯಾಚರಣೆಗೆ ಮುಂದಾಗಿರುವ ಗ್ರಾಮಸ್ಥರು, ಗ್ರಾಮದಲ್ಲಿ ಪ್ರತಿ ಮನೆಯಿಂದ ತಲಾ ಐದೈದು ಕೆಜಿ ಅನ್ನವನ್ನು ಮಾಡಿಸಿಕೊಂಡು ನೂರಾರು ಕೆಜಿ ಅನ್ನವನ್ನು ಟ್ರ್ಯಾಕ್ಟರ್ ಗಳಲ್ಲಿ ಸಂಗ್ರಹಿಸಿಕೊಂಡು ಗ್ರಾಮದ ಹೊರವಲಯದಲ್ಲಿ ಚೆಲ್ಲಿ ಮಣ್ಣುಪಾಲು ಮಾಡಿದ್ದಾರೆ.
Related Articles
ತಾಲೂಕಿನ ಡಿ.ಕಗ್ಗಲ್ ಗ್ರಾಮದಲ್ಲಿ ಕೊರೊನಾ ದೂರವಾಗಿಸಲು ಮಾಡಿದ ಮೌಢ್ಯಾಚರಣೆಗೆ ಕಾರಣರಾದ ಗ್ರಾಮದ ಮುಖಂಡರ ಮೇಲೆ ಕ್ರಮಕೈಗೊಳ್ಳುವಂತೆ ಗ್ರಾಮದ ಯುವಕರು ಮೋಕಾ ಠಾಣೆ ಪಿಎಸ್‌ಐಗೆ ಬರೆದ ದೂರಿನ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
Advertisement
ಕೊರೊನಾ ಸೋಂಕು ಗ್ರಾಮದಲ್ಲಿ ವ್ಯಾಪಿಸಿರುವುದರಿಂದ ಈಚೆಗೆ ಗ್ರಾಮದಲ್ಲಿ ಡಂಗೂರ ಸಾರಿಸಿರುವ ಮುಖಂಡರು ಡಂಗೂರ ಸಾರಿಸಿ ಭೂತ-ಪ್ರೇತಗಳಿಗೆ ಬೃಹತ್ ಅನ್ನಸಂತರ್ಪಣೆ ಮಾಡಿದರೆ, ಕೊರೊನಾ ದೂರವಾಗುವುದು ಎಂಬ ಭಾವನೆ ಜನರಲ್ಲಿ ಸೃಷ್ಟಿಸಿ, ಪ್ರತಿ ಮನೆಮನೆಯಿಂದ ಐದು ಕೆಜಿಯಂತೆ ನೂರಾರು ಕೆಜಿ ಅನ್ನ ಮಾಡಿಸಿ, ಟ್ರಾö್ಯಕ್ಟರ್‌ಗಲ್ಲಿ ಸಂಗ್ರಹಿಸಿಕೊಂಡು ಇಡೀರಾತ್ರಿ ಗ್ರಾಮದ ಸುತ್ತಲೂ ಚೆಲ್ಲಿದ್ದಾರೆ.
ಈ ಮೌಢ್ಯಾಚರಣೆ ಗ್ರಾಮದ ವಿದ್ಯಾವಂತ ಯುವಕರನ್ನು ತಲೆತಗ್ಗಿಸುವಂತೆ ಮಾಡಿದೆ. ಗ್ರಾಮದ ಅನಕ್ಷರಸ್ಥ, ಭಂಡ ಮುಖಂಟರು ಗ್ರಾಮದಲ್ಲಿ ಆಗಾಗ ಮಾಡುತ್ತಿರುತ್ತಾರೆ. ಈ ಮುಖಂಡರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಗ್ರಾಮದ ಕೆಲ ಮುಖಂಡರ ಹೆಸರುಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಡಿ.ಕಗ್ಗಲ್ ಗ್ರಾಮದಲ್ಲಿ ನಡೆದಿರುವ ಈ ಮೌಢ್ಯಾಚರಣೆ ಘಟನೆ ಬಗ್ಗೆ ಈವರೆಗೂ ಯಾರೊಬ್ಬರೂ ಠಾಣೆಗೆ ಬಂದು ಖುದ್ದು ಭೇಟಿನೀಡಿಯಾಗಲಿ ಅಥವಾ ಅಂಚೆ ಮೂಲಕವಾಗಲಿ ಯಾವುದೇ ದೂರು ಬಂದಿಲ್ಲ. ಪ್ರಕರಣವೂ ದಾಖಲಾಗಿಲ್ಲ ಎಂದು ಮೋಕಾ ಠಾಣೆಯ ಪಿಎಸ್‌ಐ ರಘು ಸ್ಪಷ್ಟಪಡಿಸಿದ್ದಾರೆ.