Advertisement

ಜಿಲ್ಲಾ ಕ್ರೀಡಾಂಗಣ ನಿರ್ವಹಣೆ ಅವ್ಯವಸ್ಥೆ

06:38 PM Aug 09, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಕ್ರೀಡಾಂಗಣ ಮೂಲಭೂತ ಸೌಲಭ್ಯಗಳೊಂದಿಗೆ ನಿರ್ವಹಣಾ ಕೊರತೆ ಎದುರಿಸುತ್ತಿದೆ. ಪರಿಣಾಮ ದಿನದಿಂದ ದಿನಕ್ಕೆ ಕ್ರೀಡಾಂಗಣ ಅಧ್ವಾನದ ಸ್ಥಿತಿಗೆ ತಲುಪುತ್ತಿದೆ. ಪ್ರತಿದಿನ ದೈಹಿಕ ಕಸರತ್ತು ಮಾಡುವ ಯುವಜನರಿಗೆ, ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ, ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ವಾಯು ವಿಹಾರಕ್ಕೆ ಬರುವ ವಯಸ್ಕರರಿಗೆ ಮೈದಾನಗಳು ಎಂದರೆ ಅಚ್ಚುಮೆಚ್ಚು. ಹೀಗೆ ನಗರದ ಕೆರೆ ಪ್ರದೇಶದಲ್ಲಿ ಯುವಜನ ಕ್ರೀಡೆ ಮತ್ತು ಸಬಲೀಕರಣ ಇಲಾಖೆಗೆ ಸೇರಿದ್ದ ಜಿಲ್ಲಾ ಕ್ರೀಡಾಂಗಣಕ್ಕೂ ಪ್ರತಿದಿನ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ವಯಸ್ಕರರು, ಪೊಲೀಸ್‌ ಸೇರಿ ಇನ್ನಿತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಹಲವು ಯುವಕ-ಯುವತಿಯರು ಬಂದು ರನ್ನಿಂಗ್‌, ವಾಕಿಂಗ್‌, ಲಾಂಗ್‌ಜಂಪ್‌ ಸೇರಿ ದೈಹಿಕ ಕಸರತ್ತು ನಡೆಸುತ್ತಾರೆ.

ಈ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರಲಿಲ್ಲ. ಆದರೆ, ಕಳೆದ ಒಂದೆರಡು ವರ್ಷಗಳಿಂದ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಬರುತ್ತಾರೆ. ಆದರೆ, ಈ ಕ್ರೀಡಾಂಗಣದಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲ.

ನಿರ್ವಹಣೆ ಕೊರತೆ: ಜಿಲ್ಲಾ ಕ್ರೀಡಾಂಗಣವು ಮುಖ್ಯವಾಗಿ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಕ್ರೀಡಾಂಗಣದಲ್ಲಿ ವಾಕಿಂಗ್‌ ಮತ್ತು ರನ್ನಿಂಗ್‌ ಮಾಡಲು ಪ್ರತ್ಯೇಕ ಟ್ರಾÂಕ್‌ನ್ನು ದಶಕಗಳ ಹಿಂದೆ ನಿರ್ಮಿಸಲಾಗಿದೆ. ಮಳೆ ಬಂದರೆ ಟ್ರಾಕ್‌ನ ಒಂದು ಭಾಗದಲ್ಲಿ ನೀರು ನಿಂತು ರನ್ನಿಂಗ್‌, ವಾಕಿಂಗ್‌ ಮಾಡುವವರಿಗೆ ತೊಂದರೆಯುಂಟುಮಾಡುತ್ತದೆ. ಸದ್ಯ ಕ್ರೀಡಾಂಗಣದಲ್ಲಿ ಪೊಲೀಸ್‌ ಇಲಾಖೆಯಿಂದ ನೇಮಕಾತಿ ದೇಹದಾಡ್ಯ ಪರೀಕ್ಷೆಗಳು ನಡೆಯುತ್ತಿದ್ದು, ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಟ್ರಾಕ್‌ನಲ್ಲಿ ಮಳೆ ನೀರು ನಿಲ್ಲುವ ಕಡೆ ಮರಳನ್ನು ಹಾಕಿ ಅನುಕೂಲ ಕಲ್ಪಿಸಿಕೊಡಲಾಗಿದೆ. ಇನ್ನು ಪಕ್ಕದಲ್ಲೇ ಲಾಂಗ್‌ ಜಂಪ್‌ ಮಾಡಲು ಯುವಕ-ಯುವತಿಯರು ಬೆಳಗ್ಗೆ ಸಂಜೆ ಪ್ರಯತ್ನಗಳು ನಡೆಸುತ್ತಿರುತ್ತಾರೆ. ಇಲ್ಲಿ ಯಾರೊಬ್ಬರೂ ತರಬೇತುದಾರರು ಸಹ ಇಲ್ಲಿ ಇರಲ್ಲ. ಏನಾದರು ಅನಾಹುತಗಳಾದರೆ ಅದಕ್ಕೆ ಜವಾಬ್ದಾರಿ ಯಾರು? ಎಂದು ಕ್ರೀಡಾಪಟುಗಳು ಪ್ರಶ್ನಿಸುತ್ತಾರೆ.

ಕುಡಿವ ನೀರು, ಶೌಚಾಲಯವಿಲ್ಲ: ಜಿಲ್ಲಾ ಕ್ರೀಡಾಂಗಣಕ್ಕೆ ಬರುವವರಲ್ಲಿ ಇತ್ತೀಚೆಗೆ ಯುವತಿಯರು, ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ಕ್ರೀಡಾಂಗಣದ ಸುತ್ತಲೂ ಹೆಚ್ಚಿನ ಪ್ರಮಾಣದಲ್ಲಿ ಮುಳ್ಳುಕಂಟಿ ಬೆಳೆದಿರುವುದರಿಂದ ಪುರುಷರು ಜಲಬಾಧೆಯನ್ನು ತೀರಿಸಿಕೊಳ್ಳುತ್ತಾರೆ. ಆದರೆ, ಯುವತಿಯರಿಗೆ, ಮಹಿಳೆಯರಿಗೆ ಯಾವುದೇ ಶೌಚಾಲಯ ವ್ಯವಸ್ಥೆ ಇಲ್ಲವಾಗಿದೆ. ಮೂಲೆಯೊಂದರಲ್ಲಿ ಶೌಚಾಲಯವನ್ನು ನಿರ್ಮಿಸಲಾಗಿದೆಯಾದರೂ ನಿರ್ವಹಣೆ ಕೊರತೆಯಿಲ್ಲದೆ ಮುಚ್ಚಲಾಗಿದೆ.ಒಂದು ವೇಳೆ ಶೌಚಾಲಯಕ್ಕೆ ಹೋದರೂ ನೀರಿನ ಸಮಸ್ಯೆ ಎದುರಾಗಲಿದೆ.

Advertisement

ಹೀಗಾಗಿ ಮೈದಾನಕ್ಕೆ ಬರುವ ಮಹಿಳೆಯರು ಜಲಬಾಧೆ ಸಮಸ್ಯೆ ಎದುರಿಸಿದರೆ, ಪುರುಷರು ಬಯಲು ಪ್ರದೇಶವನ್ನು ಆಶ್ರಯಿಸುತ್ತಿದ್ದಾರೆ. ಇನ್ನು ಮೈದಾನದಲ್ಲಿ ಕುಡಿವ ನೀರಿನ ವ್ಯವಸ್ಥೆಯೇ ಇಲ್ಲ. ಪ್ರತಿ ಭಾನುವಾರ ಯುವಕರು, ಚಿಕ್ಕ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್‌ ಆಡಲು ಬರುತ್ತಾರೆ. ದಾಹವಾದರೆ ಪಕ್ಕದಲ್ಲೇ ನಿರ್ಮಿಸಿರುವ ಸಂಪ್‌ ನಲ್ಲಿನ ನೀರನ್ನೇ ಕುಡಿಯುತ್ತಾರೆ. ಅದಕ್ಕೆ ಪ್ರತ್ಯೇಕ ನಳ ವ್ಯವಸ್ಥೆಯೂ ಇಲ್ಲ. ಸಂಪ್‌ ಯಾವಾಗ ತೊಳೆಯುತ್ತಾರೋ ಗೊತ್ತಿಲ್ಲ. ಈ ಮೊದಲು ಇದ್ದ ಟ್ಯಾಂಕ್‌ನ್ನು ಸಹ ತೆರವುಗೊಳಿಸಲಾಗಿದ್ದು, ಮೈದಾನದಲ್ಲಿ ಸಮರ್ಪಕ ಮೂಲಭೂತ ಸೌಲಭ್ಯಗಳೇ ಇಲ್ಲವಾಗಿವೆ.

ನಿರ್ಮಾಣವಾಗದ ಗ್ಯಾಲರಿ: ಬಳ್ಳಾರಿ ಜಿಲ್ಲಾ ಕ್ರೀಡಾಂಗಣವನ್ನು ಜಿಂದಾಲ್‌ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಮೈದಾನವನ್ನಾಗಿ ಅಭಿವೃದ್ಧಿಪಡಿಸುವುದಾಗಿ ದಶಕದ ಹಿಂದೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಜನಾರ್ಧನ ರೆಡ್ಡಿಯವರು ಶಂಕುಸ್ಥಾಪನೆ ನೆರವೇರಿಸಿದ್ದರು. ಇದಕ್ಕಾಗಿ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಅದರಂತೆ ಪಕ್ಕದಲ್ಲೇ ಒಳಾಂಗಣ ಕ್ರೀಡಾಂಗಣ, ಈಜುಕೊಳ, ಜಿಮ್‌ನ್ನು ನಿರ್ಮಿಸಲಾಗಿದೆ. ಜಿಲ್ಲಾ ಕ್ರೀಡಾಂಗಣದ ಬಲಭಾಗದ ಗ್ಯಾಲರಿಯನ್ನೂ ನಿರ್ಮಿಸಿ ಎರಡು ವರ್ಷಗಳು ಮುಗಿದಿವೆ. ಆದರೆ, ಎಡ ಭಾಗದಲ್ಲಿ ಗ್ಯಾಲರಿ ನಿರ್ಮಾಣಕ್ಕೆ ಈವರೆಗೂ ಚಾಲನೆ ನೀಡಿಲ್ಲ. ಕ್ರೀಡಾಂಗಣ ಅಭಿವೃದ್ಧಿ ಕುರಿತು ಮುಂದೆಯಾದರೂ ಮುತುವರ್ಜಿ ವಹಿಸುತ್ತಾರೊ ಗೊತ್ತಿಲ್ಲ. ಮುಖ್ಯವಾಗಿ ಜಿಲ್ಲೆಯ ಜನಪ್ರತಿನಿಧಿ ಗಳಲ್ಲಿ ಕ್ರೀಡಾಕೂಟ, ಕ್ರೀಡಾಪಟುಗಳ ಮೇಲೆ ಆಸಕ್ತಿಯಿಲ್ಲ. ಸಂಬಂಧಪಟ್ಟ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಈ ನಿರ್ಲಕ್ಷ ಎಂದು ಪ್ರತಿದಿನ ಕ್ರೀಡಾಂಗಣಕ್ಕೆ ಬರುವ ಹುಸೇನ್‌, ವೆಂಕಟೇಶ್‌, ಬಾಲಕೃಷ್ಣ, ಶ್ರೀನಿವಾಸಲು, ಬಾಬು, ಸೀನಾ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕ್ರೀಡಾಂಗಣದಲ್ಲಿ ಓಟದ ಅಭ್ಯಾಸ ಮಾಡಿದವರು ರಾಜ್ಯಮಟ್ಟದ ಓಟದ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಂಥ ಕ್ರೀಡಾಪಟುಗಳು, ಅಥಿÉಟ್‌ ಗಳು ಸಹ ಪ್ರತಿದಿನ ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಕ್ರೀಡಾಂಗಣದ ಮೇಲಿನ ನಿರ್ಲಕ್ಷ ಕ್ಕೆ ತೆರೆ ಎಳೆದು ಇನ್ನಾದರೂ ಅಭಿವೃದ್ಧಿಯಾಗಲಿದೆಯೇ ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next