Advertisement

ಶ್ರೀರಾಮ ಪ್ರತಿಯೊಬ್ಬರ ಆರಾಧ್ಯ ದೈವ

05:54 PM Jan 23, 2021 | Team Udayavani |

ಸಂಡೂರು: ಶ್ರೀರಾಮ ಪ್ರತಿಯೊಬ್ಬರ ಆರಾಧ್ಯ ದೈವ. ಇಡೀ ದೇಶದ ಹಿಂದೂಗಳ ಕನಸು ನನಸಾದಂತಹ ದಿನ. ಮರ್ಯಾದೆ ಪುರುಷೋತ್ತಮನ ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹ ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿರುವುದು ಹೆಮ್ಮೆ ಸಂಗತಿಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಬಳ್ಳಾರಿ ಜಿಲ್ಲಾ ಮುಖಂಡ ರಘುನಾಥ ತಿಳಿಸಿದರು.

Advertisement

ಅವರು ತಾಲೂಕಿನ ಸಿದ್ದಾಪುರ, ವೆಂಕಟಗಿರಿ ಗ್ರಾಮದಲ್ಲಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಗಾಂಧಿಜಿಯವರು ಕಂಡ ರಾಮರಾಜ್ಯದ ಕನಸ್ಸು ಇಂದು ನನಸಾಗಿದೆ, ಪ್ರತಿಯೊಬ್ಬರೂ ಸಹ ಈ ಅಭಿಯಾನದಲ್ಲಿ ಭಾಗವಹಿಸುವುದನ್ನು ಕಂಡಾಗ ಬರೀ ಹಿಂದೂಗಳಲ್ಲ, ಮುಸ್ಲಿಂ, ಪಾರ್ಸಿ, ಕ್ರೈಸ್ತ ವರ್ಗದ ಜನತೆ ಭಾಗಿಗಳಾಗುತ್ತಿರುವುದೇ ಸಾಕ್ಷಿಯಾಗಿದೆ, ಆದ್ದರಿಂದ ಯಾರೂ ಸಹ ಒತ್ತಾಯದಿಂದ ನಿಧಿ ಸಮರ್ಪಿಸದೆ ಮನಸ್ಫೂರ್ವಕವಾಗಿ ಅರ್ಪಿಸುವಂತಹದ್ದಾಗಿದೆ.ಅದ್ದರಿಂದ ಇದರಲ್ಲಿ ಮುಕ್ತವಾಗಿ ಟ್ರಸ್ಟಗೆ ಸೇರುವ ಬಗ್ಗೆ ಮಾಹಿತಿ ಇದೆ, ಪಾರದರ್ಶಕತೆ ಬಹು ಮುಖ್ಯವಾಗಿದೆ, ಅದ್ದರಿಂದ ಎಲ್ಲರೂ ಸಹ ಭಾಗಿಗಳಾಗಿ ನಮ್ಮೆಲ್ಲರ ಹೆಮ್ಮೆಯ ಮಂದಿರ ನಿರ್ಮಿಸೋಣ ಎಂದರು.

ಶ್ರೀ ರಾಮಸೇನೆ ಬಳ್ಳಾರಿ ಜಿಲ್ಲೆ ಅಧ್ಯಕ್ಷರಾದ ಸಂಜೀವ ಮರಡಿ, ಹೊಸಪೇಟೆ ತಾಲೂಕು ಅಧ್ಯಕ್ಷರಾದ ಜಗದೀಶ್‌ ಕಮಟಗಿ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಮುಖಂಡ ರಘುನಾಥ, ಸಂಡೂರು ತಾಲೂಕಿನ ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ತಾಯಪ್ಪ, ಮುಖಂಡರು ಉಪಸ್ಥಿತರಿದ್ದರು.

ಇದನ್ನೂಓದಿ···ಪೆಂಟಗನ್‌ ಪೋಸ್ಟರ್‌ ಬಂತು 5+5=1

 

Advertisement
Advertisement

Udayavani is now on Telegram. Click here to join our channel and stay updated with the latest news.

Next