Advertisement

ವಿಜಯನಗರ ಅಭಿವೃದ್ಧಿಗೆ ಯೋಜನೆ

04:01 PM Aug 16, 2021 | Team Udayavani |

ಹೊಸಪೇಟೆ: ಕೊರೊನಾ ಸೇರಿ ಹಲವು ಸವಾಲುಗಳ ನಡುವೆ ವಿಜಯನಗರ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲಿರಿಸಿದೆ ಎಂದು ಪರಿಸರ ಹಾಗೂ ಪ್ರವಾಸೋದ್ಯಮ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದರು.

Advertisement

ನೂತನ ವಿಜಯನಗರ ಜಿಲ್ಲೆಯ ಮೊದಲ ಸ್ವಾತಂತ್ರೊತ್ಸವದ ಧ್ವಜಾರೋಹಣವನ್ನು ನಗರದ ಕ್ರೀಡಾಂಗಣದಲ್ಲಿ ಭಾನುವಾರ ನೆರವೇರಿಸಿ ಮಾತನಾಡಿದರು. ಐತಿಹಾಸಿಕ ಹಿನ್ನೆಲೆವುಳ್ಳ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಕನ್ನಡ ವಿವಿ ಉನ್ನತೀಕರಣ, ಮೆಡಿಕಲ್‌ ಕಾಲೇಜ್‌ ಸ್ಥಾಪನೆ, ಆಯುರ್ವೇದ ವಿವಿ ಸ್ಥಾಪನೆ ಸೇರಿ ಹಲವು ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದರು.

ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಿಸಲು ಕ್ರಮವಹಿಸಲಾಗುವುದು. ಕಮಲಾಪುರದ ಹತ್ತಿರ 50 ಎಕರೆ ಪ್ರದೇಶದಲ್ಲಿ μಲ್ಮ್ ಸಿಟಿಯನ್ನು ನಿರ್ಮಾಣ ಮಾಡಲಾಗುವುದು. 100 ಕೋಟಿ ರೂ. ವೆಚ್ಚದಲ್ಲಿ 50 ಎಕರೆ ಪ್ರದೇಶದಲ್ಲಿ ಆಧುನಿಕ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು. ನಗರದಲ್ಲಿ 30 ಎಕರೆ ಪ್ರದೇಶದಲ್ಲಿ ಮೆಡಿಕಲ್‌ ಕಾಲೇಜ್‌ ನಿರ್ಮಾಣ ಮಾಡಲಾಗುವುದು. 250 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ನಗರದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್‌ ಲೈಬ್ರರಿ ನಿರ್ಮಾಣ. 24 ಕೋಟಿ ರು. ವೆಚ್ಚದಲ್ಲಿ ಬಾಲಕಿಯರ ಪ್ರೌಢಶಾಲೆ ಮತ್ತು ಜೂನಿಯರ್‌ ಕಾಲೇಜ್‌ ನಿರ್ಮಿಸಲಾಗುವುದು.

ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ಇದನ್ನು ಕೇಂದ್ರಿಯ ವಿಶ್ವವಿದ್ಯಾಲಯವನ್ನಾಗಿಸಿ ಯೂನಿಕ್‌ ವಿಶ್ವವಿದ್ಯಾಲಯವನ್ನಾಗಿ ಉನ್ನತೀಕರಣಗೊಳಿಸಲಾಗುವುದು ಎಂದರು. ವಿಜಯನಗರ ಜಿಲ್ಲಾಕೇಂದ್ರದಲ್ಲಿ 53 ಜಿಲ್ಲಾಮಟ್ಟದ ಕಚೇರಿಗಳ ನಿರ್ಮಾಣ ಮಾಡಲಾಗುವುದು. ಇನ್ನೂ ಜಿಲ್ಲೆಗೆ ಅವಶ್ಯವಿರುವ ಯೋಜನೆಗಳನ್ನು ನಿರ್ಮಿಸಲು ಚರ್ಚಿಸುತ್ತಿದ್ದು, ಜನಪ್ರತಿನಿ ಧಿಗಳ ಮತ್ತು ಅ ಧಿಕಾರಿಗಳ ಜತೆ ಚರ್ಚಿಸಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.

ನೂತನ ಜಿಲ್ಲೆಯ ಮೊದಲ ಸ್ವಾತಂತ್ರೊÂàತ್ಸವದ ಧ್ವಜಾರೋಹಣ “ಆನಂದ’ದಿಂದ ಮಾಡುತ್ತಿದ್ದೇನೆ. ಇದು ನನ್ನ ಸೌಭಾಗ್ಯವೇ ಸರಿ. ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಬೆಂಬಲ-ಸಹಕಾರಗಳೇ ಈ ಜಿಲ್ಲೆಯಾಗಲು ಸಹಕಾರಿ ಎಂದರು. ಬಳ್ಳಾರಿ ಜಿಲ್ಲೆ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ಮಾಡಬೇಕೆಂಬ ಹೋರಾಟದ ಪಯಣ ಪ್ರಥಮ ಬಾರಿಗೆ ಆರಂಭವಾಗಿದ್ದು ಹೊಸಪೇಟೆಯ ರಾಮಾ ಟಾಕೀಸ್‌ ಬಳಿಯ ಗಂಗಾಮತ ಸಮುದಾಯ ಭವನದಿಂದ 2005ರಲ್ಲಿ ಅಂದಿನ ಶಾಸಕ ರತನ್‌ ಸಿಂಗ್‌ ಅವರು ಇದೇ ಭವನದಲ್ಲಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಗೆ ಚಾಲನೆ ಕೊಟ್ಟಿದ್ದರು.

Advertisement

ಈ ಭಾಗದ ಮಠಾಧೀಶರು, ಜನಪ್ರತಿನಿ ಗಳು, ಸಂಘಸಂಸ್ಥೆಗಳ ಪದಾ ಕಾರಿಗಳು ನಡೆಸಿದ ಹೋರಾಟದ ಫಲವಾಗಿ ವಿಜಯನಗರ ಜಿಲ್ಲೆ ಉದಯವಾಗಿದೆ. ನೂತನ ಜಿಲ್ಲೆ ರಚನೆ ಮಾಡಿದ ಆಗಿನ ಸಿಎಂ ಬಿ.ಎಸ್‌. ಯಡಿಯೂರಪ್ಪರನ್ನು ಅಭಿನಂದಿಸುವೆ ಎಂದರು. ಸಂಸದ ವೈ. ದೇವೇಂದ್ರಪ್ಪ, ಹುಡಾ ಅಧ್ಯಕ್ಷ ಅಶೋಕ ಜೀರೆ, ವಿಶೇಷಾ ಧಿಕಾರಿ ಅನಿರುದ್ಧ ಶ್ರವಣ್‌, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ, ತಹಶೀಲ್ದಾರ್‌ ವಿಶ್ವನಾಥ, ತಾಪಂ ಇಒ ವಿಶ್ವನಾಥ, ಮುಖಂಡರಾದ ಅಯ್ನಾಳಿ ತಿಮ್ಮಪ್ಪ, ಬಸವರಾಜ, ವೆಂಕಟೇಶ್‌, ನಾಗವೇಣಿ ಬಸವರಾಜ ಮತ್ತಿತರರಿದ್ದರು.

ನೂತನ ಜಿಲ್ಲೆಯ ಈ ಸಂಭ್ರಮದ ಕ್ಷಣಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ವಿಜಯನಗರದ ನೆಲದಲ್ಲಿ ನಡೆದ ಮೊದಲ ಜಿಲ್ಲಾಮಟ್ಟದ ಧ್ವಜಾರೋಹಣ ಸ್ವಾತಂತ್ರೋತ್ಸವದ ಎಲ್ಲೆಡೆ ಮನೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next