Advertisement

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

02:24 PM Apr 24, 2024 | Team Udayavani |

ಬಳ್ಳಾರಿ: ಇದೇ ತಿಂಗಳು 26 ಕ್ಕೆ ರಾಹುಲ್ ಗಾಂಧಿ ಬಳ್ಳಾರಿ ನಗರಕ್ಕೆ ಬರ್ತಾರೆ. ಇದು ರಾಹುಲ್ ಗಾಂಧಿಯವರ ತಾಯಿಯವರ ಕ್ಷೇತ್ರವಾಗಿತ್ತು ಭಾರತ್ ಜೋಡೋ ಯಾತ್ರೆ ಸಹ ಬಳ್ಳಾರಿಯಲ್ಲಿ ಮಾಡಿದ್ದರು. ಬಳ್ಳಾರಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಇಲ್ಲಿ ನಡೆಯುವ ಸಮಾವೇಶ ನಮಗೆ ಬಹಳ ಮುಖ್ಯ ಎಂದು ಸಚಿವ ನಾಗೇಂದ್ರ ಹೇಳಿದರು.

Advertisement

ರಾಹುಲ್ ಗಾಂಧಿ ಸಮಾವೇಶ ಹಿನ್ನೆಲೆ ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಎಐಸಿಸಿ ಅಧ್ಯಕ್ಷರು ಬರಲಿದ್ದಾರೆ. ಜೊತೆಗೆ ಅವಳಿ ಜಿಲ್ಲೆಯ ಎಲ್ಲಾ ಶಾಸಕರು, ಕೊಪ್ಪಳದ ಅಭ್ಯರ್ಥಿ ಕೂಡ ಬರಲಿದ್ದಾರೆ ಸಮಾವೇಶಕ್ಕೆ ಲಕ್ಷಕ್ಕಿಂತ ಅಧಿಕ ಜನ ಸೇರಲಿದ್ದಾರೆ ಎಂದರು.

ರಾಹುಲ್ ಗಾಂಧಿ ಬಂದು ಹೋದಲ್ಲೆಲ್ಲಾ ನಾವು ವಿಧಾನಸಭೇಲಿ ಗೆದ್ದಿದೀವಿ. ಈ ಚುನಾವಣೆ ನಮಗೆ ಪ್ರತಿಷ್ಠೆಯ ಚುನಾವಣೆ. ನಾವು ಸೋನಿಯಾಜಿ ಅವರ ನಂತರ ಇಲ್ಲಿ ಗೆದ್ದಿಲ್ಲ. ಇದೀಗ ನಾವೆಲ್ಲ ಸೇರಿ ಈ ಕ್ಷೇತ್ರವನ್ನು ಕಾಂಗ್ರೆಸ್ ಮಯ ಮಾಡಲು ಪಣ ತೊಟ್ಟಿದೀವಿ ಈ ಬಾರಿ ಗೆಲುವು ನಮಗೆ ನಿಶ್ಚಿತವಾಗಿದೆ. ರಾಹುಲ್ ಗಾಂಧಿಯವರ ಆಗಮನ ನಮಗೆ ಉತ್ಸಾಹ ತುಂಬಲಿದೆ ಎಂದು ಹೇಳಿದರು.

ಈ ಬಾರಿ ಕಾಂಗ್ರೆಸ್ ಗೆಲ್ಲಿಸುವ ಜವಬ್ದಾರಿ ಎಲ್ಲರ ಮೇಲಿದೆ. ಮಂತ್ರಿಗಳಿಂದ ಹಿಡಿದು ಸಣ್ಣ ಕಾರ್ಯಕರ್ತರವರೆಗೂ ಸಹ ಜವಾಬ್ದಾರಿ ಇದೆ. ಇದೀಗ ಕಾಂಗ್ರೆಸ್ ಗೆ ಅನುಕೂಲದ ವಾತಾವರಣವಿದೆ. ಪಂಚ ಗ್ಯಾರೆಂಟಿ ಯೋಜನೆಗಳ ಬಲ ನಮಗಿದೆ. ಜೊತೆಗೆ ರಾಹುಲ್ ಗಾಂಧಿಯವರು ಸಹ ಗ್ಯಾರೆಂಟಿ ಘೋಷಿಸಿದಾರೆ. ದೇಶವೇ ಇದೀಗ ನಮ್ಮತ್ತ ತಿರುಗಿ ನೋಡುತ್ತಿದೆ. ಮೊದಲು ಗುಜರಾತ್ ಅಂತಿದ್ರು, ಆದರೆ ಕರ್ನಾಟಕ ಮಾಡೆಲ್ ಜನ ನೋಡ್ತಿದಾರೆ ಎಂದು ಹೇಳಿದರು.

ರಾಹುಲ್‌ ಉತ್ತರ ಕರ್ನಾಟಕಕ್ಕೆ ಇದು ಸಂದೇಶ ನೀಡುವ ಕಾರ್ಯ ಆಗಲಿದೆ: ತುಕಾರಾಂ

Advertisement

ಬಳ್ಳಾರಿ:  ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ನಡೆದುಕೊಂಡಿದೆ. ಈ ಹಿಂದಿನ ಎಲ್ಲಾ ಕಾಂಗ್ರೆಸ್ ಸರ್ಕಾರಗಳಲ್ಲು ನಾವು ಪ್ರಣಾಳಿಕೆಯನ್ನು ನೆರವೇರಿಸಿದೀವಿ. ಸಂವಿಧಾನದ ಮೌಲ್ಯಗಳನ್ನು ಕಾಂಗ್ರೆಸ್ ಎತ್ತಿ ಹಿಡಿಯುತ್ತದೆ ಎಂದು ಕಾಂಗ್ರಸ್ ಅಭ್ಯರ್ಥಿ ಈ ತುಕಾರಾಂ ಹೇಳಿದರು.

ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಗೆ ನಾಯಕರಾದ ರಾಹುಲ್ ಗಾಂಧಿ ಬರ್ತಿದಾರೆ. ಉತ್ತರ ಕರ್ನಾಟಕಕ್ಕೆ ಇದು ಸಂದೇಶ ನೀಡುವ ಕಾರ್ಯ ಆಗಲಿದೆ. ಜನರ ಪ್ರೀತಿಯನ್ನು ಕೇಳಲು ರಾಹುಲ್ ಗಾಂಧಿ ಬರ್ತಿದಾರೆ.

ಶ್ರೀರಾಮುಲು ನಾಲ್ಕು ಬಾರಿ ಸಂಸದರಾಗಿ ವಿಫಲರಾಗಿದಾರೆ. ಕರ್ನಾಟಕ ಅತಿಹೆಚ್ಚು ತೆರಿಗೆ ಕಟ್ಟುವ ದೇಶ. ನೀತಿ ಆಯೋಗವನ್ನೇ ಬಿಜೆಪಿಯವರು ತೆಗೆದು ಹಾಕಿದಾರೆ. ನಮಗೆ ಜಿಎಸ್ ಟಿ ಹಾಗೂ ಸೆಸ್ ಅಲ್ಲಿ ಅನ್ಯಾಯ ಆಗ್ತಿದೆ. ಬರ ಪರಿಹಾರದ ವಿಚಾರದಲ್ಲಿ ಸುಪ್ರೀಂ ಕೋರ್ಟೇ ಕೇಂದ್ರಕ್ಕೆ ಛೀಮಾರಿ ಹಾಕಿದೆ. ಆದರ್ಶ ಗ್ರಾಮಗಳು ಎಲ್ಲಿವೆ, ಹೇಳಹೆಸರಿಲ್ಲದೆ ಹೋಗಿವೆ ಸ್ಮಾರ್ಟ್ ಸಿಟಿ ಯೋಜನೆ ಎಲ್ಲೋಯ್ತು..!? ಎಂದು ಶ್ರೀರಾಮುಲುಗೆ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next