Advertisement

ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯ

04:46 PM Feb 07, 2021 | Team Udayavani |

ಕುರುಗೋಡು: ಕೇಂದ್ರ ಮತ್ತು ರಾಜ್ಯ ಸರಕಾರ·ಜಾರಿಗೆ ತಂದಿರುವ ರೈತ ವಿರೋ  ಕಾನೂನುಗಳನ್ನುಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಹಾಗೂ ವಿವಿಧ ಸಂಘಟನೆಗಳು ಶನಿವಾರಕೋಳೂರು ಕ್ರಾಸ್‌ ಮುಖ್ಯ ಹೆದ್ದಾರಿ ಸಂಚಾರತಡೆಹಿಡಿದು ರಾಸ್ತಾರೋಕೊ ಚಳವಳಿ ನಡೆಸಿಭಾರತದಾದ್ಯಂತ ಕರೆಕೊಟ್ಟ ರಸ್ತೆ ತಡೆಗೆ ಬೆಂಬಲ
ವ್ಯಕ್ತಪಡಿಸಿದರು.

Advertisement

ಇದೆ ವೇಳೆ ಸಂಘಟನೆಯ ಮುಖಂಡರುಮಾತನಾಡಿ, ಎರಡು ತಿಂಗಳಿಂದ ಸತತವಾಗಿಶಾಂತಿಯುತ ರೈತ ಹೋರಾಟ ನಡೆಯುತ್ತಿದ್ದರೂಕೇಂದ್ರ ಸರಕಾರವು ರೈತರ ಬೇಡಿಕೆಗಳನ್ನುಪರಿಗಣಿಸದೆ ಸರ್ವಾ ಧಿಕಾರಿ ಧೋರಣೆಅನುಸರಿಸುತ್ತಿದೆ. ಒಂದೆಡೆ ರೈತ ಪ್ರತಿಭಟನಾಸ್ಥಳಗಳ ಸುತ್ತ ಮುಳ್ಳು ಬೇಲಿ ಹಾಕಿ, ಪೊಲೀಸ್‌ಸರ್ಪಗಾವಲು ಹಾಕಿದೆ. ರೈತರಿಗೆ ನೀರು,ಊಟ ಮತ್ತು ವೈದ್ಯಕೀಯ ಸಾಮಗ್ರಿಗಳಸಾಗಣೆಗೂ ಅಡ್ಡಿ ಮಾಡಲಾಗಿದೆ. ಇಂಟರ್‌ನೆಟ್‌ಸ್ಥಗಿತಗೊಳಿಸಲಾಗಿದೆ. ನಾಯಕರ ಮೇಲೆ ಸುಳ್ಳುಮೊಕದ್ದಮೆಗಳನ್ನು ದಾಖಲಿಸಿ ಹೋರಾಟವನ್ನುದಮನ ಮಾಡಲು ಸರಕಾರ ಮುಂದಾಗಿದೆ.ಹೋರಾಟನಿರತ ರೈತರಿಗೆ ದೇಶದ ದುಡಿಯುವಜನತೆ, ಜನಸಾಮಾನ್ಯರು ಬೆಂಬಲವಾಗಿನಿಲ್ಲಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷಆರ್‌. ಮಾಧವರೆಡ್ಡಿ, ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ವಿ.ಎಸ್‌. ಶಿವಶಂಕರ್‌,
ಜಿಲ್ಲಾ ಕಾರ್ಯದರ್ಶಿ ಗಾಳಿಬಸವರಾಜ,ಎ.ಐ.ಕೆ.ಎಂ.ಕೆ.ಸಿ.ಯ ಜಿಲ್ಲಾಧ್ಯಕ್ಷ ಹನುಮಂತಪ್ಪ,ಜನಶಕ್ತಿ ಸಂಘಟನೆಯ ರಾಜ್ಯ ಸಮಿತಿಸದಸ್ಯರಾದ ಕರೆಪ್ಪ ಗುಡಿಮನೆ, ವಸಂತಕಹಳೆ, ಎಂ. ಗೋವಿಂದರೆಡ್ಡಿ, ಹುಲುಗಯ್ಯ,ತಿಮ್ಮನಗೌಡ, ಮಾರುತಿ ಸೇರಿದಂತೆ ಇತರರುಇದ್ದರು. ಪ್ರತಿಭಟನೆ ವೇಳೆ ಯಾವುದೇಅಹಿತಕರ ಘಟನೆಗಳು ಜರುಗದಂತೆ ಪೊಲೀಸ್‌ಬಂದೋಬಸ್ತ್ ಒದಗಿಸಲಾಗಿತ್ತು

ಓದಿ :ಬಿಜೆಪಿ ಯುವ ಮುಖಂಡರಿಗೆ ಸೋಶಿಯಲ್‌ ಮೀಡಿಯಾ ಪಾಠ ಮಾಡಿದ ಡಿಸಿಎಂ ‌ಅಶ್ವತ್ಥನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next