Advertisement

ಕ್ಯಾನ್ಸರ್ ದಿನ ಸ್ವಾಮಿ ವಿವೇಕಾನಂದ ಜಯಂತಿ

05:15 PM Feb 06, 2021 | Team Udayavani |

ಬೀರೂರು: ಆಹಾರ ಬಳಕೆ ಮತ್ತು ಜೀವನಶೈಲಿಯ ವ್ಯತ್ಯಯದಿಂದ ಕ್ಯಾನ್ಸರ್‌ ನಂತಹ ಮಾರಕ ಕಾಯಿಲೆ ಉಂಟಾಗುತ್ತಿದೆ. ಆದ್ದರಿಂದ ಸಾವಯವ ಕೃಷಿಯ ಮೂಲಕ ಉತ್ಪಾದಿಸಲಾದ ಧಾನ್ಯ, ತರಕಾರಿ ಸೇವನೆ ಮೂಲಕ ಸುಸ್ಥಿರ ಬದುಕಿಗೆ ಮುನ್ನುಡಿ ಬರೆದುಕೊಳ್ಳಿ ಎಂದು ಡಾ| ಅನಂತಪದ್ಮನಾಭ ತಿಳಿಸಿದರು.

Advertisement

ಪಟ್ಟಣದ ಋಷಿ ಸಂಸ್ಕೃತಿ ವಿದ್ಯಾಕೇಂದ್ರದಲ್ಲಿ ಜೇಸಿರೆಟ್‌ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್‌ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ಭಯಾನಕ ರೋಗಗಳಲ್ಲಿ ಕ್ಯಾನ್ಸರ್‌ ಎರಡನೇ ಸ್ಥಾನ ಪಡೆದಿದೆ. ಪುರುಷರಲ್ಲಿ ಯಕೃತ್ತು, ಕರುಳು, ವೃಷಣ, ಮಹಿಳೆಯರಲ್ಲಿ ಗರ್ಭಾಶಯ, ಸ್ತನ ಕ್ಯಾನ್ಸರ್‌ನಂತಹ ಪೀಡೆಗಳು ಕಾಡುತ್ತವೆ.

ನಮ್ಮ ದೇಶದಲ್ಲಿ ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ಕ್ಯಾನ್ಸರ್‌ ರೋಗಿಗಳಿದ್ದಾರೆ. ಒಂದು ಲಕ್ಷ ಜನಸಂಖ್ಯೆಯಲ್ಲಿ 135 ಜನರು ಕ್ಯಾನ್ಸರ್‌ ರೋಗಕ್ಕೆ ಬಲಿಯಾಗುತ್ತಿದ್ದಾರೆ. ರಾಸಾಯನಿಕಯುಕ್ತ ಆಹಾರ, ಹಣ್ಣು ಮತ್ತು ತರಕಾರಿಗಳ ಅವಲಂಬನೆ, ಪರಿಸರ ಪೂರಕ ಕೃಷಿಯಿಂದ ವಿಮುಖರಾದ ಪರಿಣಾಮ ಹಲವು ಮಾರಕ ರೋಗಗಳು ಹೆಚ್ಚುತ್ತಿವೆ ಎಂದರು.

ಜೇಸಿರೆಟ್‌ ಅಧ್ಯಕ್ಷೆ ಜಯಲಕ್ಷಿ¾ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶ ಅನುಸರಿಸಿ ಯುವ ಪೀಳಿಗೆಯು ದೇಶಾಭಿಮಾನ, ಧರ್ಮ ಜಾಗೃತಿ ಮತ್ತು ಬಲಿಷ್ಠ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ರಾಗಿಣಿ, ಜೇಸಿರೆಟ್‌ ಕಾರ್ಯದರ್ಶಿ ಕುಸುಮಾ ಮಧು, ಮಾಜಿ ಅಧ್ಯಕ್ಷೆ ನಯನಾ ರಘು, ನೇತ್ರಾವತಿ, ದೀಪಾ, ತಿಮ್ಮೇಗೌಡ ಇತರರು ಇದ್ದರು. ಕಾರ್ಯಕ್ರಮದ ಅಂಗವಾಗಿ ಕ್ಲಿನಿಕ್‌
ನಲ್ಲಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.

ಓದಿ : ಭಗವಾನ್‌ ಮುಖಕೆ ಮಸಿ: ಮೀರಾ ಭಾವಚಿತ್ರ ಹಾಲಿನ ಅಭಿಷೇಕ

Advertisement
Advertisement

Udayavani is now on Telegram. Click here to join our channel and stay updated with the latest news.

Next