Advertisement

ಮೀರಾ ರಾಘವೇಂದ್ರ ಬಂಧನಕ್ಕೆ ಒತ್ತಾಯ

04:26 PM Feb 06, 2021 | Team Udayavani |

ಬಳ್ಳಾರಿ: ಪ್ರಗತಿಪರ ಚಿಂತಕ ಪ್ರೊ.ಭಗವಾನ್‌ ಮುಖಕ್ಕೆ ಮಸಿ ಬಳಿದು ಅವಮಾನಿಸಿರುವ ಮಹಿಳಾ ನ್ಯಾಯವಾದಿ ಮೀರಾ ರಾಘವೇಂದ್ರ ಅವರನ್ನು ಕಾನೂನಿನಡಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ (ಡಿಜಿ ಸಾಗರ್‌ ಬಣ) ಸಮಿತಿ ಸದಸ್ಯರು ನಗರದ ಡಿಸಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಚಿಂತಕ ಪ್ರೊ| ಭಗವಾನ್‌ರವರು ನಾಡಿನ ದಲಿತಪರ, ರೈತಪರ, ಕಾರ್ಮಿಕ ಪರ ಮುಂಚೂಣಿಯ ಹೊರಾಟಗಾರರಾಗಿದ್ದಾರೆ. ಇವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಗುರುವಾರ ಹಾಜರಾಗಿದ್ದರು. ಈ ವೇಳೆ ಜಾಮೀನು ಪಡೆದು ಹೊರ ಬರುತ್ತಿದ್ದ ಭಗವಾನ್‌ ಅವರ ಮುಖಕ್ಕೆ ಮೀರಾ ರಾಘವೇಂದ್ರ ಅವರು ನ್ಯಾಯಾಲಯ ಆವರಣದಲ್ಲಿಯೇ ಏಕಾಏಕಿ ಮಸಿ ಬಳಿದು ಅವಮಾನಿಸಿರುವುದು ಅತ್ಯಂತ ಖಂಡನೀಯ. ಕೂಡಲೇ ಅವರನ್ನು ಬಂಧಿಸಬೇಕು. ಅವರ ವಕೀಲ ವೃತ್ತಿಯ ನೋಂದಣಿಯನ್ನು ರದ್ದುಗೊಳಿಸಬೇಕು. ಕಾನೂನಿನ ಪ್ರಕಾರ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಎ. ಮಾನಯ್ಯ, ಸಮಿತಿಯ ಸಂಘಟನಾ ಸಂಚಾಲಕ ಎಚ್‌. ಆಂಜನೇಯ, ಖಜಾಂಜಿ ಜಿ.ಗಾದಿಲಿಂಗ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಬಿ. ರಮೇಶ್‌, ಟಿ.ಎಂ. ಎರಿಸ್ವಾಮಿ, ಮುಖಂಡರುಗಳಾದ ಹುಲುಗಪ್ಪ ಬೆಳಗಲ್‌, ಮೇಘನಾಥ್‌. ಎಚ್‌.ರಂಗಪ್ಪ, ಗಂಗಾಧರ, ಭೀಮಶಂಕರ, ಹೊನ್ನೂರಪ್ಪ, ಶಶಿಕುಮಾರ್‌ ಬೂದಿಹಾಳ್‌, ಮಹೇಶ್‌ ಭತ್ರಿ, ಪ್ರಭು ಸಿದ್ದಮ್ಮನಹಳ್ಳಿ, ಹಾಲೇಶ್‌, ರೆಹಮತ್‌, ಶ್ರೀನಿವಾಸ ಅಸುಂಡಿ, ಹೊನ್ನಳ್ಳಿ ಹಲುಗ, ನಿಂಗಪ್ಪ ಸೇರಿ ಹಲವರು ಇದ್ದರು.

ಓದಿ :  15 ಸಾವಿರ ಕೋಟಿ ಅನುದಾನ ಮೀಸಲಿಡಿ: ಶ್ರೀರಾಮ್‌

Advertisement

Udayavani is now on Telegram. Click here to join our channel and stay updated with the latest news.

Next