Advertisement

ಅಧಿಕಾರಿಗಳ ಗೈರಿನಿಂದ ಸಭೆ ವಿಫಲ: ನಾಗವೇಣಿ

04:21 PM Feb 06, 2021 | Team Udayavani |

ಹೊಸಪೇಟೆ: ಅಧಿ ಕಾರಿಗಳು ಬದಲಾಗಿ ಅವರ ಪ್ರತಿನಿಧಿಗಳು ಸಭೆಗೆ ಹಾಜರಾಗುವುದರಿಂದ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಲಿದ್ದು, ಅಧಿಕಾರಿಗಳಿಲ್ಲದೇ ನಡೆಸುವ ಸಭೆಗಳು ವಿಫಲವಾಗಲಿವೆ ಎಂದು ತಾಪಂ ಅಧ್ಯಕ್ಷೆ ನಾಗವೇಣಿ ಬಸವರಾಜ್‌
ಬೇಸರ ವ್ಯಕ್ತಪಡಿಸಿದರು.

Advertisement

ನಗರದ ತಾಲೂಕು ಪಂಚಾಯಿತಿ ವಿದ್ಯಾರಣ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಸಭೆಯಲ್ಲಿ ತಾಲೂಕಿನಲ್ಲಿ ನಾನಾ ಕಡೆಯಿಂದ ಸಮಾಯಕ್ಕೆ ಶಾಲಾ-ಕಾಲೇಜುಗಳಿಗೆ ತಲುಪುವಂತೆ ಬಸ್‌ ವ್ಯವಸ್ಥೆಗೆ ಕೆಎಸ್‌ಆರ್‌ಟಿಸಿ ಕಚೇರಿಗೆ ಮನವಿ ಸಲ್ಲಿಸಲಾಯಿತು. ನಿಮ್ಮ ಪ್ರಗತಿ ಏನಾಗಿದೆ. ಸಭೆಗೆ ನಿಮ್ಮ ಅ ಧಿಕಾರಿ ಏಕೆ
ಬಂದಿಲ್ಲ ಎಂದು ಇಒ ವಿಶ್ವನಾಥ ಹಾಗೂ ಅಧ್ಯಕ್ಷ ನಾಗವೇಣಿ ಬಸವರಾಜ್‌ ಕೆಎಸ್‌ ಆರ್‌ಟಿಸಿ ಬಸ್‌ ಕಂಟ್ರೋಲರ್‌ನ್ನು ತರಾಟೆಗೆ
ತೆಗೆದುಕೊಂಡರು.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಸರಿಯಾಗಿ ಬಳಕೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗುತ್ತದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಎಚ್ಚರಿಸಿದರು.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ, ಸಾಮಾನ್ಯ ವರ್ಗದವರು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ದಾಖಲೆಗಳನ್ನು ನೀಡುವ ಯೋಜನೆಯನ್ನು ಪಡೆಯುತ್ತಿದ್ದಾರೆ. ಹಾಗಾಗಿ ಅನುದಾನ ನೀಡುತ್ತಿಲ್ಲ. ಸಾಮಾನ್ಯ ವರ್ಗದವರಿಗೆ ಹೆಚ್ಚಿನ
ಅನುದಾನ ನೀಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ನಾಗರತ್ನಮ್ಮ ಸಭೆಗೆ ತಿಳಿಸಿದರು. ಶಾಲಾ ಶುಲ್ಕದಲ್ಲಿ ಜನ ಸಾಮಾನ್ಯರಿಗೆ ಹೊರೆಯಾಗದಂತೆ ಖಾಸಗಿ ಶಾಲೆಗಳಿಗೆ ಸೂಚನೆ ನೀಡಿ ಕ್ರಮಕೈಗೊಳ್ಳಿ ಇಒ ವಿಶ್ವನಾಥ ಸೂಚಿಸಿದರು.

ಚಿರತೆ ದಾಳಿ ಸೇರಿ, ಕಾಡು ಪ್ರವಾಣಿಗಳ ಹಾವಳಿ, ಕೃಷಿ ಭೂಮಿಗಳಿಗೆ ಹಾನಿ ಮಾಡಿದ ಬೆಳೆಗಳಿಗೆ ಅರ್ಜಿ ಹಾಕಿದ ಎಲ್ಲರಿಗೂ ಪರಿಹಾರ ಒದಗಿಸಲಾಗಿದೆ. ಕಾಡಿನಲ್ಲ ಓಡಾಡುವವರು ಜಾಗೃತರಾಗಿರಬೇಕು ಎಂದು ದರೋಜಿ ಕರಡಿಧಾಮದ ಆರ್‌ ಎಫ್‌ಒ ಉಷಾ ಸಭೆಯಲ್ಲಿ ಪ್ರಸ್ತಾಪಿಸಿದರು.

Advertisement

ಓದಿ : ಇಂದು ರಸ್ತೆ ತಡೆ: ಆರ್‌ಕೆಎಸ್‌ನಿಂದ ಜಾಗೃತಿ

Advertisement

Udayavani is now on Telegram. Click here to join our channel and stay updated with the latest news.

Next