ಹರಪನಹಳ್ಳಿ: ರಾಷ್ಟ್ರದಲ್ಲಿ ನಾಲ್ಕು ಹೊಸ ಶಿಕ್ಷಣ ನೀತಿಗಳನ್ನು ನೋಡಿದ್ದು, ಕೇಂದ್ರ ಸರ್ಕಾರ 1986 ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ
ತಂದಿತು. 1992ರಲ್ಲಿ ಪರಿಷ್ಕೃತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂತು. ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿತ್ತು. ಪ್ರಸುತ್ತ ಕರ್ನಾಟಕದಲ್ಲಿ ಶಾಲಾ ಶಿಕ್ಷಣವನ್ನ ಮೂರು ಹಂತದ ಶಿಕ್ಷಣ ಪದ್ಧತಿಯನ್ನ ನಾವು ನೋಡುತ್ತಿದ್ದೇವೆ ಎಂದು ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ತಿಳಿಸಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಶಿಕ್ಷಕರ ಸಂಘದ ನೂತನ ಪದಾ ಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿರು.
ಪ್ರಾಥಮಿಕ ಶಿಕ್ಷಣ ನಂತರ ಪ್ರೌಢ ಶಿಕ್ಷಣ ನಂತರ ಪದವಿ ಪೂರ್ವ ಶಿಕ್ಷಣವಿದ್ದು, ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನಾಲ್ಕು ಶೈಕ್ಷಣಿಕ ಪದ್ಧತಿಯನ್ನ ಜಾರಿಗೊಳಿಸುತ್ತಿದೆ. ಮೂರು ವರ್ಷದಿಂದ ಎಂಟು ವರ್ಷದ ಮಕ್ಕಳಿಗೆ ಬುನಾದಿ ಶಿಕ್ಷಣ ಕೊಡುತ್ತಿದ್ದೇವೆ. ಪೂರ್ವ ಸಿದ್ಧತಾ ಹಂತ ಎಂಟರಿಂದ ಹನ್ನೊಂದು ವರ್ಷದ ಮಕ್ಕಳಿಗೆ ಶಿಕ್ಷಣ ಪದ್ದತಿಯನ್ನು ರಚನಾತ್ಮಕ, ಹನ್ನೊದರಿಂದ ಹದಿನಾಲ್ಕು ವರ್ಷದ ಮಕ್ಕಳಿಗೆ ಪರಿಕಲ್ಪನಾತ್ಮಕ ಹಂತ ಕಲಿಕಾ, ಪ್ರೌಢ ಹಂತ ಹದಿನಾಲ್ಕು ವರ್ಷದಿಂದ ಹದಿನೆಂಟು ವರ್ಷದ ಮಕ್ಕಳಿಗೆ ಜೀವನೋಪಾಯ ಕಲಿಕಾ ಎಂದು ಕರೆಯುತ್ತೇವೆ. ಸರ್ಕಾರ ಈ ರೀತಿ ಶಿಕ್ಷಣ ಪದ್ಧತಿಯನ್ನ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದೆ ಎಂದರು.
ಜಿ.ಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್ ಮಾತನಾಡಿದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಧ್ಯಕ್ಷ ಶಂಭುಲಿಂಗನಗೌಡ, ಜಿಲ್ಲಾ ಉಪನಿರ್ದೇಶಕ ಸಿ.ರಾಮಪ್ಪ, ಕ್ಷೇತ್ರ ಶಿಕ್ಷಣಾ ಧಿಕಾರಿ ಎಸ್. ಎಂ.ವೀರಭದ್ರಯ್ಯ, ಬಸವರಾಜ ಸಂಗಪ್ಪನವರ್, ಜಿ.ಪದ್ಮಲತಾ, ಸಿ.ನಿಂಗಪ್ಪ, ಬಿ.ಬಿ.ಶಿವಾನಂದ, ಕೆ.ಸಿದ್ದಲಿಂಗನಗೌಡ, ಕೆ.ಅಂಜಿನಪ್ಪ ಆರ್.ಪದ್ಮರಾಜ್, ಹೆಚ್ .ದೇವೇಂದ್ರಗೌಡ, ಅರ್ಜುನ್ ಪರಸಪ್ಪ ಮತ್ತಿತರರಿದ್ದರು.
ಓದಿ :
ಯಾದಗಿರಿ:ವಸತಿ ನಿಲಯ ಕಾರ್ಮಿಕರಿಗೆ ಇಪಿಎಫ್ ಸೌಲಭ್ಯ ನೀಡಿ